Delhi News: ಬಕ್ರೀದ್ ಹಬ್ಬಕ್ಕೆ ಮುಸ್ಲಿಂಮರು ಪ್ರತೀ ವರ್ಷ ಮೇಕೆಯನ್ನು ಬಲಿ ಕೊಡುತ್ತಾರೆ. ಈ ಮೂಲಕ ಬಕ್ರೀದ್ ಹಬ್ಬವನ್ನು ಬಲಿದಾನದ ರೂಪವಾಗಿ ಆಚರಿಸಲಾಗುತ್ತದೆ. ಹಾಗಾಗಿ ಮೇಕೆಯನ್ನು ಖರೀದಿಸಿ, ಮನೆಗೆ ತೆಗೆದುಕೊಂಡು ಹೋಗಿ, ಪ್ರಾರ್ಥನೆ ಸಲ್ಲಿಸಿ, ಅದನ್ನು ಬಲಿ ಕೊಡಲಾಗುತ್ತದೆ. ಆದರೆ ಈ ಬಾರಿ ದೆಹಲಿಯಲ್ಲಿ ಜೈನ ಕುಟುಂಬದವರು, ಬಕ್ರೀದ್ ಹಬ್ಬಕ್ಕೆ 124 ಮೇಕೆಯನ್ನು ಖರೀದಿಸಿದ್ದಾರೆ. ಹಾಗಾದ್ರೆ ಜೈನರೇಕೆ ಮೇಕೆ ಖರೀದಿಸಿದರು ಅನ್ನೋ ಬಗ್ಗೆ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ದೆಹಲಿಯ ಚಾಂದನಿಚೌಕ್‌ನ ಜೈನಮಂದಿರದಲ್ಲಿ ಸೇರಿದ್ದ ಜೈನರೆಲ್ಲ, ನಾವು ಈ ಬಾರಿ ರಂಜಾನ್ ಹಬ್ಬಕ್ಕೆ ನೂರಕ್ಕೂ ಹೆಚ್ಚು ಮೇಕೆ ಖರೀದಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಮುಸ್ಲಿಂ ವೇಷ ಧರಿಸಿ, ಮಾರುಕಟ್ಟೆಗೆ ಹೋಗಿ, ಲಕ್ಷ ಲಕ್ಷ ಖರ್ಚು ಮಾಡಿ, 124 ಮೇಕೆ ಖರೀದಿಸಿದ್ದರು.
ಆದರೆ ಇವರೇಕೆ ಮುಸ್ಲಿಂ ವೇಷ ಧರಿಸಿ, ಹೀಗೆ ಮೇಕೆ ಖರೀದಿಸಿದರು ಎಂದು ಎಲ್ಲಿರಗೂ ಗೊತ್ತಾಗಿದ್ದೇ, ಬಕ್ರೀದ್ ಹಬ್ಬ ಮುಗಿದ ಬಳಿಕ. ವಿವೇಕ್ ಜೈನ್ ಎಂಬುವವರು ಈ ಮೇಕೆಯನ್ನು ಖರೀದಿಸಿ, ಧರ್ಮಶಾಲೆಗೆ ತಂದಿಟ್ಟಿದ್ದರು. ಏಕೆ ಹೀಗೆ ಮಾಡಿದರೆಂದರೆ, ಮೇಕೆಗಳ ಜೀವ ಉಳಿಸಲು. ಬಲಿದಾನದಿಂದ ಮೇಕೆಗಳನ್ನು ರಕ್ಷಿಸಲು.
ದರ್ಶನ್ ಅರೆಸ್ಟ್ ಆದ ಬಗ್ಗೆ ಕೇಂದ್ರ ಸಚಿವರ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ
ಈ ಬಗ್ಗೆ ಮಾತನಾಡಿರುವ ವಿವೇಕ್ ಜೈನ್, ನಮ್ಮ ಜೈನ ಧರ್ಮದ ಪ್ರಕಾರ, ಬದುಕಿ ಬದುಕಲು ಬಿಡಿ ಅನ್ನೋ ಮಾತಿದೆ. ಹಾಗಾಗಿ ನಾವು ತಿಂದ ಆಹಾರದಲ್ಲಿ ಎಲ್ಲಿ ಕೀಟಗಳಿರುತ್ತದೆಯೋ, ಎನ್ನುವ ಕಾರಣಕ್ಕೆ, 6 ಗಂಟೆಯೊಳಗೆ ಊಟವನ್ನು ಮಾಡಿ ಮುಗಿಸುತ್ತೇವೆ. ಅಹಿಂಸಾ ಪರಮಧರ್ಮ ಎಂಬ ಮಾತಿದೆ. ನಮ್ಮ ಪೂರ್ವಜರು ನಮಗೆ ಕೊಟ್ಟ ಸಂಸ್ಕಾರದ ಪ್ರಕಾರ, ನಾವು ಎಂದಿಗೂ ಇ್ನನೊಬ್ಬರನ್ನು ಹಿಂಸಿಸಬಾರದು ಹಾಗಾಗಿ ನಾನು ಮೇಕೆಗಳನ್ನು ಖರೀದಿಸಿ, ಧರ್ಮಶಾಲೆಯಲ್ಲಿರಿಸಿದ್ದೇನೆ ಎಂದಿದ್ದಾರೆ ವಿವೇಕ್.
ಹೀಗೆ ಮಾತು ಮುಂದುವರಿಸಿದ ವಿವೇಕ್, ನಾನು ಮಾಡಿದ್ದೇನು ದೊಡ್ಡ ಸಾಧನೆಯಲ್ಲ. ಈ ಕೆಲಸ ನಾವೆಲ್ಲರೂ ಮಾಡಬೇಕು. ನಮ್ಮ ಸುತ್ತಮುತ್ತಲಿರುವ ಜೀವಜಂತುಗಳು, ನಮ್ಮಿಂದ ಸುರಕ್ಷಿತವಾಗಿರಬೇಕು ಎಂದು ಹೇಳಿ ನಾನು ಈ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ.
ಈ ಉತ್ತರಕ್ಕೆ ಮಾಧ್ಯಮದವರು, ಬಕ್ರೀದ್ ದಿನವೇ ಏಕೆ ನೀವು ಖರೀದಿಸಿದ್ದು, ಪ್ರತಿದಿನ ಇಂಥ ಮೇಕೆಗಳು ಆಹಾರಕ್ಕಾಗಿ ಬಳಸಲ್ಪಡುತ್ತದೆಯಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ವಿವೇಕ್ ಜೈನ್, ಬಕ್ರೀದ್ ದಿನ ಮೇಕೆಗಳನ್ನು ಖರೀದಿಸಿ, ಬಲಿ ಕೊಡುವಷ್ಟೇ ಬೇರೆ ದಿನಗಳಲ್ಲಿ ಕೊಡಲಾಗುವುದಿಲ್ಲ. ಹಾಗಾಗಿ ನಾನು ಬಕ್ರೀದ್ ದಿನವೇ ಮೇಕೆ ಖರೀದಿಸಿದ್ದೇನೆ ಎಂದಿದ್ದಾರೆ.
ತುಳುನಾಡಿನ ಬಗ್ಗೆ ಕಿಚ್ಚ ಸುದೀಪ್ ಮಾತು
ಬಳಿಕ ಪತ್ರಕರ್ತೆ, ಪ್ರತಿದಿನ ಕೋಳಿ, ಕುರಿಗಳನ್ನು ಜನ ಆಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ನೀವು ಇದಕ್ಕೇನು ಹೇಳುತ್ತೀರಿ ಅಂತಾ ಕೇಳಿದಾಗ, ನಾನು ಹಲವು ಬಾರಿ, ನಾನ್ ವೆಜ್ ತಿನ್ನದಿರುವ ಬಗ್ಗೆ ಕಾರ್ಯಕ್ರಮ ಮಾಡಿ, ಜನರಿಗೆ ತಿಳಿ ಹೇಳುತ್ತಲೇ ಇರುತ್ತೇನೆ. ಆದರೆ ಈ ಬಾರಿ ಮೇಕೆ ಖರೀದಿಸುವ ಮೂಲಕ, ನನ್ನ ಕೆಲಸವನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಇನ್ನು ಈ ಕೆಲಸ ಬರೀ ಜೈನ ಸಮುದಾಯದವರೇ ಮಾಡಬೇಕು ಅಂತಿಲ್ಲ. ಪ್ರಾಣಿಗಳ ಮೇಲೆ ಕರುಣೆ ಇರುವವರು, ಪ್ರಾಣಿಗಳನ್ನು ಪ್ರೀತಿಸುವವರು ಈ ಕೆಲಸ ಮಾಡಬಹುದು ಎಂದು ವಿವೇಕ್ ಜೈನ್ ಹೇಳಿದ್ದಾರೆ.
15ನೇ ತಾರೀಖಿಗೆ ಜೈನ ಸಮುದಾಯದ ಕೆಲ ಯುವಕರು ಮುಸ್ಲಿಂರ ವೇಷ ಧರಿಸಿ, ಮಸೀದಿ ಸೇರಿ, ಬೇರೆ ಬೇರೆ ಮೇಕೆ ಮಾರುಕಟ್ಟೆಗೆ ಹೋಗಿ, ಮೇಕೆ ಬೆಲೆ ಕೇಳಿದ್ದಾರೆ. ಒಂದು ಮೇಕೆಯ ಬೆಲೆ 10ರಿಂದ 12 ಸಾವಿರ ರೂಪಾಯಿ ಇತ್ತು. ಹಾಗಾಗಿ ಯುವಕರೆಲ್ಲ ಸೇರಿ ಲಕ್ಷ ಲಕ್ಷ ಹಣ ಹೊಂದಿಸಿ, ಮರುದಿನ ಹೋಗಿ 124 ಮೇಕೆ ಖರೀದಿಸಿ ತಂದಿದ್ದಾರೆ. ಇವರದ್ದೊಂದು ಜೈನ ಗ್ರೂಪ್ ಇದ್ದು, ಅದರಲ್ಲಿ ಈ ವಿಷಯ ಹೇಳಿದಾಗ, ಅವರೆಲ್ಲರೂ ಧನ ಸಹಾಯ ಮಾಡಿದ್ದಾರೆ. ಆ ದುಡ್ಡಿನಿಂದಲೇ, ಮೇಕೆ ಖರಿದೀಸಲಾಗಿದೆ. ಎಲ್ಲರೂ ಧನಸಹಾಯ ಮಾಡಿದ್ದಕ್ಕೆ, 50 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಅದರಲ್ಲಿ 12 ಲಕ್ಷ ರೂಪಾಯಿ ಈ ರೀತಿ ಮೇಕೆಗಳನ್ನು ಖರೀದಿಸಲೆಂದೇ ಇನ್ವೆಸ್ಟ್ ಮಾಡಲಾಗಿದೆ.
ಕಿಚ್ಚನ ಮುಂದೆ ಯಕ್ಷಗಾನ ಪ್ರಸ್ತುತಿ, ಕಣ್ಣು ಮಿಟುಕಿಸದೇ, ದಿಗಿಣ ಕಂಡ ಸುದೀಪ್
ಇನ್ನು ಈ ಮೇಕೆಗಳೆಲ್ಲ ದೆಹಲಿಯ ಧರ್ಮಶಾಲೆಯಲ್ಲೇ ಇರುತ್ತದಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿವೇಕ್, ಇಲ್ಲ ಈ ಮೇಕೆಗಳನ್ನು ಉತ್ತರಪ್ರದೇಶದಲ್ಲಿರುವ ಮೇಕೆಗಳ ಶಾಲೆಗೆ ಸೇರಿಸಲಾಗುತ್ತದೆ. ಗೋಶಾಲೆಯಲ್ಲಿ ಹೇಗೆ ಗೋವುಗಳನ್ನು ಸಾಕುತ್ತಾರೋ, ಅದೇ ರೀತಿ ಮೇಕೆ ಶಾಲೆಯಲ್ಲಿ ಮೇಕೆಗಳನ್ನು ಸಾಕಲಾಗುತ್ತದೆ. ಅಲ್ಲಿಗೆ ಈ ಎಲ್ಲ ಮೇಕೆಗಳನ್ನು ಬಿಡಲಾಗುತ್ತದೆ. ಅದಕ್ಕಾಗಿ ಪ್ರತೀ ವರ್ಷ ದುಡ್ಡನ್ನು ಕೊಡುತ್ತೇವೆ. ಆ ಮೇಕೆಗಳಿಗೆ ಊಟ, ಔಷಧಿ ಎಲ್ಲವನ್ನೂ ಕೊಡಲಾಗುತ್ತದೆ. ಆ ಮೇಕೆಶಾಲೆಯನ್ನು ಕೂಡ ಜೈನರೇ ನಡೆಸುತ್ತಿದ್ದಾರೆ ಎಂದರು.
Discussion about this post