ಚಿಕ್ಕಮಗಳೂರು: ಯುಜಿಡಿ ಕಾಮಗಾರಿ ಕಳಪೆಯಿಂದ ಕೂಡಿರುವ ಪರಿಣಾಮ ನಗರದ ಉಪ್ಪಳ್ಳಿ ಸರ್ಕಲ್‌ನಲ್ಲಿ ನೀರು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಮೂಲಕ ಜೆಡಿಯು ವಿನೂತನ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ: job fair : ಜಿಲ್ಲೆಯಲ್ಲಿ ಉದ್ಯೋಗ ಮೇಳ ಮುಂದೂಡಿಕೆ: ಡಿ. 29ಕ್ಕೆ ದಿನಾಂಕ ನಿಗಧಿ
ನಂತರ ಮಾತನಾಡಿದ ಪಕ್ಷದ ಮಾಜಿ ಅಧ್ಯಕ್ಷ ಕೆ.ಭರತ್ ಇಡೀ ನಗರಾದ್ಯಂತ ರಸ್ತೆಗಳು ಗುಂಡಿ ಮಯವಾಗಿದ್ದು ವಾರಕ್ಕೆ ಸುಮಾರು ೨-೩ ಅಪಘಾತಗಳು ಸಂಭವಿಸುತ್ತಿವೆ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: Rain affects: ನಗರದಲ್ಲಿ ಭಾರೀ ಮಳೆ, ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಆರ್ಥಿಕವನ್ನು ಬಲಿಷ್ಟಗೊಳಿಸುತ್ತಿದ್ದಾರೆಯೇ ಹೊರತು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ೨೦೦೮ ರಲ್ಲಿ ಯುಜಿಡಿ ಕಾಮಗಾರಿಗೆ ೩೫ ವಾರ್ಡ್‌ಗಳಿಗೆ ಸರ್ಕಾರ ಹಣ ಬಿಡುಗೊಳಿಸಿತ್ತು. ಸುಮಾರು ೧೩ ವರ್ಷಗಳು ಕಳೆದರೂ ಸಹ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಸದೆ ಇರುವುದು ಉಪ್ಪಳ್ಳಿಯ ಸಮಸ್ಯೆಯೇ ಒಂದು ಉದಾರಹಣೆಯಾಗಿದೆ ಎಂದು ಹೇಳಿದರು.
ನಗರದ ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಕಪ್ಪುಪಟ್ಟಿಗೆ ಸೇರಿಸಬೇಕು. ಮತ್ತೊಮ್ಮೆ ಎಲ್ಲಾ ವಾರ್ಡ್‌ಗಳಲ್ಲೂ ಯುಜಿಡಿ ಕಾಮಗಾರಿಯನ್ನು ಪುನರ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಮೃತ್ ಯೋಜನೆಯಡಿ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ. ರಸ್ತೆ ಡಾಂಬರೀಕರಣ ಮಾಡಿದ ನಂತರ ಮತ್ತೊಮ್ಮೆ ಅಗೆಯುವ ಮೂಲಕ ಕಾಮಗಾರಿಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸುತ್ತಿಲ್ಲ. ಇದರಿಂದ ದಿನನಿತ್ಯ ಸಂಚರಿಸುವ ನಾಗರೀಕರಿಗೆ ತೀವ್ರ ತೊಂದರೆಯಾಗಿದೆ ಎಂದರು.
ಉಪ್ಪಳ್ಳಿ ಸಮೀಪದ ರಸ್ತೆಗಳಲ್ಲಿರುವ ಮನೆಗಳಿಗೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದ್ದು ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಅಲ್ಲಿನ ಸುತ್ತಮುತ್ತಲಿನ ಚರಂಡಿ ಕಾಮಗಾರಿಗಳು ಕಳಪೆ ಕಾಮಗಾರಿಯಿಂದಾಗಿ ನೀರು ಸಲಿಸಾಗಿ ಮನೆಗೆ ನುಗ್ಗುತ್ತಿವೆ ಎಂದರು.
ಈ ಕೂಡಲೇ ಕಳಪೆ ಕಾಮಗಾರಿಯನ್ನು ಇನ್ನೊಂದು ವಾರದೊಳಗೆ ಸರಿಪಡಿಸದಿದ್ದಲ್ಲಿ ನಗರ ವ್ಯಾಪ್ತಿಯಲ್ಲಿ ಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ಬಾಳೆಗಿಡ ನಡೆವುದು, ಮೀನು ಹಿಡಿಯುವುದು ಸೇರಿದಂತೆ ಅನೇಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪ್ಪಳ್ಳಿ ಯುವಕರ ಬಳಗದ ಜೀವನ್, ಹರೀಶ್, ಸೋಮಶೇಖರ್, ರಫೀಕ್, ಸ್ಥಳೀಯ ನಿವಾಸಿಗಳಾದ ಮಹಮ್ಮದ್, ಮೋಹನ್, ಯಾಕೂಬ್, ಇಬ್ರಾಹಿಂ ಮತ್ತಿತರರು ಹಾಜರಿದ್ದರು.
Jd(S) novel protest

























Discussion about this post