ನವದೆಹಲಿ: ಟೆಲಿಕಾಂ ಸೇವೆ ನೀಡುವ ಕಂಪನಿಗಳು ದರ ಏರಿಕೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೊ, ದೇಶದ ಅತ್ಯಂತ ಅಗ್ಗದ ಯೋಜನೆಯೊಂದನ್ನು ಪರಿಚಯಿಸಿದೆ. ಜಿಯೊ ಪ್ರಿಪೇಯ್ಡ್ ಗ್ರಾಹಕರಿಗೆ ಕೇವಲ 1 ರೂಪಾಯಿ ರೀಚಾರ್ಚ್ ಪ್ಲ್ಯಾನ್’ಅನ್ನು ಘೋಷಿಸಿದ್ದು, 1 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ, 30 ದಿನ ವ್ಯಾಲಿಡಿಟಿಯ ಜೊತೆಗೆ 100ಎಂಬಿ ಡೇಟಾ ಕೂಡ ದೊರೆಯಲಿದೆ. ಗ್ರಾಹಕರು ತಮ್ಮ ಸಿಮ್’ಅನ್ನು ಸಕ್ರೀಯವಾಗಿಡಲು ಈ ಯೋಜನೆ ನರವಾಗಲಿದೆ.
1 ರೂಪಾಯಿ ರೀಚಾರ್ಚ್ ಪ್ಲ್ಯಾನ್’ನಲ್ಲಿ ಕರೆ ಮಾಡುವ ಅಥವಾ SMS ಕಳುಹಿಸುವ ಆಯ್ಕೆ ಲಭ್ಯವಿಲ್ಲ. 100ಎಂಬಿ ಡೇಟಾ ಮುಗಿದರೆ, ಇಂಟರ್ನೆಟ್ ವೇಗವು 60 kbpsಗೆ ಇಳಿಯಲಿದೆ. ಹೊಸ ಪ್ಲ್ಯಾನ್ ಮೈ ಜಿಯೊ ಆ್ಯಪ್’ನಲ್ಲಿ ಮಾತ್ರ ಲಭ್ಯವಿದೆ. ಜಿಯೊ ವೆಬ್’ಸೈಟ್‌ನಲ್ಲಿ ಪ್ಲ್ಯಾನ್ ವಿವರ ಮತ್ತು ರೀಚಾರ್ಜ್ ಕೊಡುಗೆ ಲಭ್ಯವಿಲ್ಲ. ಬದಲಾಗಿ ಮೈಜಿಯೊ ಆ್ಯಪ್’ನ ಯೋಜನೆಗಳ ಅಡಿ ವ್ಯಾಲ್ಯೂ ಎಂದಿರುವಲ್ಲಿ ಮೋರ್ ಕ್ಲಿಕ್ ಮಾಡಿದಾಗ 1 ರೂಪಾಯಿ ರೀಚಾರ್ಜ್ ಆಯ್ಕೆ ದೊರೆಯುತ್ತದೆ.
ದೇಶದಲ್ಲಿನ ಇತರ ಯಾವುದೇ ಟೆಲಿಕಾಂ ಸೇವಾದಾರ ಕಂಪನಿಗಳಿಗೆ ಹೋಲಿಸಿದರೆ 1 ರುಪಾಯಿಗೆ ಡೇಟಾ ಕೊಡುಗೆ ನೀಡುವ ಯಾವುದೇ ಪ್ಲ್ಯಾನ್ ಇಲ್ಲ ಎನ್ನುವುದು ಗಮನಾರ್ಹ. 1 ರೂಪಾಯಿ ರೀಚಾರ್ಜ್ ಹೊರತಾಗಿ 10 ಹಾಗೂ 20 ರೂಪಾಯಿಗಳ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಜಿಯೊ ಗ್ರಾಹಕರಿಗೆ ಒದಗಿಸುತ್ತಿದೆ.
ವಾಟ್ಸಾಪ್ ಮೂಲಕ ಜಿಯೊ ರೀಚಾರ್ಜ್ !
ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ರೀಚಾರ್ಜ್ ಮಾಡುವ ಆಯ್ಕೆಯನ್ನು ಶೀಘ್ರದಲ್ಲೇ ಜಿಯೊ ತನ್ನ ಗ್ರಾಹಕರಿಗೆ ಒದಗಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ಜಿಯೊ ಪ್ಲಾಟ್‌ಫಾರ್ಮ್ಸ್ ನಿರ್ದೇಶಕ ಆಕಾಶ್ ಅಂಬಾನಿ, ಹೊಸ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸುವ ಕುರಿತಂತೆ ಮೆಟಾ ಒಡೆತನದ ವಾಟ್ಸಾಪ್ ಮತ್ತು ಜಿಯೊ ಮಾತುಕತೆ ನಡೆಸುತ್ತಿದೆ ಎಂದಿದ್ದಾರೆ.
1 Rupee Recharge

























Discussion about this post