ಜಗತ್ತಿನಲ್ಲಿ ನಮಗೆ ಗೊತ್ತಿರದ ಎಷ್ಟೋ ನಿಗೂಢ ವಿಷಯಗಳಿವೆ. ಭೂಮಿ ಮೇಲಿನ ವಿಚಿತ್ರಗಳ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ. ಇಂಥದ್ದೇ ಒಂದು ವಿಚಿತ್ರವಾದ ನಿಗೂಢ ಕಾಡಿನ ಬಗ್ಗೆ ಇಂದು ತಿಳಿಯೋಣ.
ರೊಮೇನಿಯಾದಲ್ಲಿ ‘ಹೋಯಾ ಬಾಸಿಯು’ ಎನ್ನುವ ಕಾಡಿದೆ, ಇದನ್ನು ಜಗತ್ತಿನ ಅತ್ಯಂತ ನಿಗೂಢ ಕಾಡು ಎನ್ನಲಾಗುತ್ತದೆ. ಇಲ್ಲಿಯವರೆಗೂ ಈ ಕಾಡಿನ ಬಗ್ಗೆ ತಿಳಿಯಲು ಹೋದವರ್ಯಾರೂ ವಾಪಾಸ್ ಬಂದಿಲ್ಲ. ಅವರೆಲ್ಲ ಬದುಕಿದ್ದಾರಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.
ಈ ಪ್ರದೇಶದ ಸುತ್ತಮುತ್ತ ವಾಸಿಸುವ ಮಂದಿ ಸಂಜೆಯೊಳಗೆ ಮನೆ ಸೇರಿಬಿಡುತ್ತಾರೆ. ಇಲ್ಲಿ ಏನಿದೆ ಎನ್ನುವ ಕುತೂಹಲ ಜೊತೆಗೆ ಧೈರ್ಯ ಮಾಡಿ ಹೋದವರ್ಯಾರೂ ಈವರೆಗೂ ಹೊರಗೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಟ್ರಾನ್ಸಿಲ್ವೇನಿಯಾದ ಕ್ಲುಜ್ ಕೌಂಟಿ ಭಾಗದಲ್ಲಿ ಈ ಅರಣ್ಯ ಪ್ರದೇಶವನ್ನು ಕಾಣಬಹುದು. ಹೋದವರೆಲ್ಲ ಮಾಯವಾಗುವ ಕಾರಣ ಇದನ್ನು ‘ಟ್ರಾನ್ಸಿಲ್ವೇನಿಯಾ ಬರ್ಮುಡಾ ಟ್ರಯಾಂಗಲ್ ‘ಎಂದು ಕರೆಯಲಾಗುತ್ತದೆ.
ವಿಶ್ವದ ಅತ್ಯಂತ ನಿಗೂಢ ಕಾಡು ಹೋಯಾ ಬಾಸಿಯುದಲ್ಲಿ ತೀವ್ರವಾದ ಅಸಮಾನ್ಯ ಚಟುವಟಿಕೆಗಳು ನಡೆಯುತ್ತವೆ ಎನ್ನಲಾಗಿದೆ. ಕಣ್ಣಿಗೆ ಕಾಣದ ಮುಖಗಳು, ವಿವರಿಸಲಾಗದ ದೃಶ್ಯಗಳು ಇವೆ ಎಂದು ಕೆಲವು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯದ ಬಳಿ ಸುಳಿದವರು ಕೂಡ ಆತಂಕದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾರೋ ನಮ್ಮನ್ನು ನೋಡುತ್ತಿದ್ದಾರೆ ಎನ್ನುವ ಭಾವನೆ ಕಾಡುತ್ತದೆ ಜೊತೆಗೆ ವಿಚಿತ್ರ ಆಕಾರದ ಮರಗಳು, ಕೊಂಬೆ, ರೆಂಬೆಗಳನ್ನು ನೋಡಲು ಭಯವಾಗುತ್ತದೆ ಎನ್ನಲಾಗಿದೆ.
ಈ ಹಿಂದೆ ಕುರುಬನೊಬ್ಬ ಕುರಿಗಳ ಸಮೇತ ಕಾಡಿಗೆ ಹೋದವನು ಈವರೆಗೂ ಹೊರಬಂದಿಲ್ಲ, ಈತನ ಹೆಸರನ್ನೇ ಕಾಡಿಗೆ ಇಡಲಾಗಿದೆ. ಕಾಡಿನ ಆರಂಭದ ಪಾಯಿಂಟ್ಗೆ ತೆರಳಿ ಬಂದ ಸ್ಥಳೀಯರಲ್ಲಿ ವಾಕರಿಕೆ, ಗಾಯಗಳು, ವಾಂತಿ, ಮೈಕೈನೋವು, ಸುಟ್ಟಗಾಯ ಕೂಡ ಕಾಣಿಸಿದೆ. ಈ ಕಾಡಿನ ಬಗ್ಗೆ ಹತ್ತು ಹಲವು ಕಥೆಗಳಿದ್ದು, ಯಾವುದು ನಿಜ ಯಾವುದು ಸುಳ್ಳು ಯಾರಿಗೂ ತಿಳಿದಿಲ್ಲ..
Discussion about this post