ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಸಿ.ಶಿವಾನಂದ ಸ್ವಾಮಿ ಎದುರು ಅಂದಾಜು 500 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.
ಅಧ್ಯಕ್ಷೀಯಗಾಧಿ ಕಣದಲ್ಲಿ ಎಂ.ಸಿ.ಶಿವಾನಂದಸ್ವಾಮಿ, ಸುಂದರ್ಬಂಗೇರಾ, ಬಿಳಿಗಿರಿ ವಿಜಯಕುಮಾರ್, ಸೂರಿಶ್ರೀನಿವಾಸ್, ಎಚ್.ಡಿ.ರೇವಣ್ಣ ಸ್ಫರ್ಧಿಸಿದ್ದರು. ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಸಿ ದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ
Discussion about this post