ಚಿಕ್ಕಮಗಳೂರು : ಶತಮಾನಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಅಂತರಾಷ್ಟೀಯ ಮಟ್ಟದಲ್ಲಿ ಬೆಳೆಸುವ ಕನಸು ಹೊಂದಿದ್ದು, ಕನ್ನಡಿಗರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಆಜೀವ ಸದಸ್ಯರು ಅಮೂಲ್ಯ ಮತವನ್ನು ನೀಡಿ ಬಹುಮತದೊಂದಿಗೆ ಜಯಶೀಲರನ್ನಾಗಿ ಮಾಡುವಂತೆ ಕೇಂದ್ರ ಕಸಾಪ ಅಧ್ಯಕ್ಷ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಅಗತ್ಯವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಸಾಹಿತ್ಯ ಸಂಸ್ಸೃತಿಗೆ ಕೊಡುಗೆ ನೀಡುವ ಮೂಲಕ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ ನಾಡು ನುಡಿ-ಗಡಿ-ಜಲ ಸಂಕರಕ್ಷಣೆ ತಮ್ಮನ್ನು ತೊಡಗಿಸಿಕೊಂಡಿದ್ದೇನೆ. ಆ ನಿಟ್ಟಿನಲ್ಲಿ ನವೆಂಬರ್ ೨೧ ರಂದು ನಡೆಯುವ ಕೇಂದ್ರ ಕಸಾಪ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮನ್ನು ಜಯಶೀಲರಾಗಿ ಮಾಡುವಂತೆ ಕೇಳಿಕೊಂಡರು.
ಅಧ್ಯಕ್ಷನಾಗಿ ಆಯ್ಕೆಗೊಂಡಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಮಾದರಿಯಲ್ಲಿ ಕನ್ನಡ ಶಾಲೆಗಳ ಆರಂಭ, ಉದಯೋನ್ಮಖ ಯುವ ಕವಿ ಬರಹಗಾರರಿಗೆ ಶಿಬಿರ, ಕಮ್ಮಟಗಳ ಆಯೋಜನೆ, ವಚನ ಸಾಹಿತ್ಯ, ದಾಸ ಸಾಹಿತ್ಯ, ಮಕ್ಕಳ, ದಲಿತ, ಶಿಕ್ಷಕರ ಸಾಹಿತ್ಯ ಸಮಾವೇಶ ಆಯೋಜನೆ ಗುರಿ ಹೊಂದಲಾಗಿದೆ ಎಂದರು.
ಸಾಹಿತ್ಯ ಸಮೇಳಾನಾಧ್ಯಕ್ಷರನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವುದು, ಕಸಾಪ ಪ್ರಕಟಿಸಿದ ಅಪರೂಪದ ಮೌಲಿಕ ಗ್ರಂಥಗಳ ಮರುಮುದ್ರಣ, ಕೃತಿಗಳ ಡಿಜಿಟಲೀಕರಣ ಸೇರಿದಂತೆ ಕನ್ನಡವನ್ನು ಉತ್ತುಂಗಕ್ಕೆ ಬೆಳೆಸುವ ಆಶಯ ಹೊಂದಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ಕಸಾಪ ಕ್ರಿಯಾ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಇದನ್ನೂ ಓದಿ: Kannada Song Singing: ಕಾಫಿನಾಡಿನಲ್ಲಿ ಭುವನೇಶ್ವರಿಗೆ ಸ್ವರಾಭಿಷೇಕ
ಇದನ್ನೂ ಓದಿ: Killing: ಮಗಳನ್ನು ವೇಲ್ ನಿಂದ ಕುತ್ತಿಗೆ ಬಿಗಿದು ಹತ್ಯೆಮಾಡಿ ಶವವನ್ನು ಗುಂಡಿಗೆ ಬಿಸಡಿ ಹೋದ ತಂದೆ !!!
ಇದನ್ನೂ ಓದಿ:e Paper – October 29, 2021

























Discussion about this post