ಚಿಕ್ಕಮಗಳೂರು: ನಗರದ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಾದಿಯಾಗಿ ಸಾರ್ವಜನಿಕರು ಸೇರಿ ನಡೆಸಿಕೊಟ್ಟ ಸಮೂಹ ಗಾಯನ ನಡೆಸಿದರು.
ಜಿಲ್ಲಾಡಳಿತ, ಜಿ.ಪಂ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಡೆದ ಸಮೂಹ ಗಾಯನದಲ್ಲಿ ನೂರಾರು ಜನ ಪಾಲ್ಗೊಂಡು ಕನ್ನಡ ಗೀತೆಗಳನ್ನು ಹಾಡಿ ಕಹಳೆ ಮೊಳಗಿಸಿ ಸಂಭ್ರಮಿಸಿದರು.
ಗಾಯಕಿ ರೇಖಾಪ್ರೇಮ್‌ಕುಮಾರ್ ನೇತೃತ್ವದ ತಂಡದೊಂದಿಗೆ ಜಿಲ್ಲಾಡಳಿತದ ಅಧಿಕಾರಿಗಳಾದಿಯಾಗಿ ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡದ ಹಾಡಿಗೆ ಧ್ವನಿಯಾಗಿದ್ದು ವಿಶೇಷ ವಾಗಿತ್ತು. ಕನ್ನಡಪರ ವಿವಿಧ ಘೊಷಣೆಗಳನ್ನು ಕೂಗಿದರು
ಕರ್ನಾಟಕದಲ್ಲಿ ಅತ್ಯಂತ ಉತ್ಕೃಷ್ಟವಾದ ಭಾವಗೀತೆ ಪ್ರಪಂಚವಿದೆ. ಅದನ್ನು ಕಲಿಯಲು ಇದೊಂದು ಉತ್ತಮ ವೇದಿಕೆ. ಅತ್ಯದ್ಭುತವಾದ ಹೊಸ ವಿನೂತನ ಪ್ರಯೋಗವಿದು. ರಾಜ್ಯದಲ್ಲಿ ಒಕ್ಕೋರಲರಾಗಿ ಲಕ್ಷಾಂತರ ಮಕ್ಕಳನ್ನು ಒಂದು ವಾರದಲ್ಲಿ ಹಾಡಿಗೆ ತಯಾರು ಮಾಡುವುದು ಸುಲಭದ ಕೆಲಸವಲ್ಲ ಎಂದು ಗಾಯಕಿ ರೇಖಾಪ್ರೇಮ್‌ಕುಮಾರ್ ತಿಳಿಸಿದರು
ರೇಖಾ ಪ್ರೇಮ್‌ಕುಮಾರ್ ನೇತೃತ್ವದಲ್ಲಿ ಕವಿ ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಗೀತೆಯೊಂದಿಗೆ ಆರಂಭವಾದ ಸಮೂಹ ಗೀತಗಾಯನ ನಂತರ ಕುವೆಂಪು ರವರ ಬಾರಿಸು ಕನ್ನಡ ಡಿಂಡಿಮವಾ, ಕೊನೆಯಲ್ಲಿ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿ ಸಂಗೀತದ ರಸದೌತಣ ನೀಡಿದರು.
ರಾಜ್‌ಕುಮಾರ್ ನಟನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಕೊನೆಯಲ್ಲಿ ಚಪ್ಪಾಳೆ ತಟ್ಟುತ್ತಾ ಕೆಲವು ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದ್ದು ಕಂಡು ಬಂತು. ನಂತರ ಸಂಕಲ್ಪ ದೊಂದಿಗೆ ಪೊಲೀಸ್ ವಾಧ್ಯವೃಂದದವರು ಹೇ ಮೇರೆವತನ್ ಕಿ ಲೋಗೊ ನಂತರ ರಾಷ್ಟ್ರಗೀತೆಯನ್ನು ನುಡಿಸಿ ಎಲ್ಲರ ಗಮನ ಸೆಳೆದು ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಆರಂಭದಲ್ಲಿ ಅಧಿಕಾರಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದ ಸಮೂಹ ಗಾಯನದಲ್ಲಿ ಪ್ರೇರಣೆಗೊಂಡು ಬಹಳಷ್ಟು ಸಾರ್ವಜನಕರು ಸೇರಿಕೊಂಡು ಧ್ವನಿಗೂಡಿಸಿದ್ದು ವಿಶೇಷವಾಗಿತ್ತು. ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಉಪ ವಿಭಾಗಾಧಿಕಾರಿ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಡಾ.ರಮೇಶ್ ಇದ್ದರು.

























Discussion about this post