ಕೊರೋನಾದ ಹೊಸ ರೂಪಾಂತರ ಒಮಿಕ್ರಾನ್ ಪತ್ತೆ ಹಚ್ಚಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಿಟ್ ಮೂಲಕ ಇನ್ನು ಎರಡು ಗಂಟೆಯಲ್ಲಿ ಫಲಿತಾಂಶವನ್ನು ಪಡೆಯಬಹುದು.
ದೇಶದ ವಿವಿಧ ರಾಜ್ಯಗಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಒಮಿಕ್ರಾನ್ ಭಾರತದಾದ್ಯಂತ 170ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಒಮಿಕ್ರಾನ್ ಅಪಾಯಕಾರಿವಲ್ಲವಾದರೂ ವೇಗವಾಗಿ ಹರಡುತ್ತಿದೆ. ಈ ವೇಳೆ ಪತ್ತೆ ಹಚ್ಚಲು ಜೀನೋಮ್ ಸೀಕ್ವೆನ್ಸಿಂಗ್ಗೆ ಸ್ಯಾಂಪಲ್ ಕಳುಹಿಸಿ, 4-5 ದಿನಗಳ ಕಾಲ ವರದಿಗೆ ಕಾಯಬೇಕಿತ್ತು. ಆದರೆ ಈಗ ಅಸ್ಸೋಂ ದಿಬ್ರುಗಢ್ನಲ್ಲಿರುವ ಐಸಿಎಂಆರ್ನ ಪ್ರಾದೇಶಿಕ ಸಂಶೋಧನಾ ಕೇಂದ್ರವು ಎರಡೇ ಗಂಟೆಯಲ್ಲಿ ಒಮಿಕ್ರಾನ್ ಪತ್ತೆ ಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.
Kit to detect omykron
Discussion about this post