ಚಿಕ್ಕಮಗಳೂರು : ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾಡ್ ನಂ.೮ ರ ಕೊಪ್ಪ ಮತ್ತು ಎನ್.ಆರ್.ಪುರ ಮುಖ್ಯ ರಸ್ತೆ ಮತ್ತು ಬೈಪಾಸ್ ರಸ್ತೆಗೆ ಕೂಡುವ ವೃತ್ತಕ್ಕೆ ವಿಶ್ವ ಮಾನವ ಕುವೆಂಪು ಅವರ ಹೆಸರಿಟ್ಟು ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ರೂಪಾ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ ಎನ್.ಆರ್.ಪುರ ಮುಖ್ಯ ರಸ್ತೆ ಮತ್ತು ಬೈಪಾಸ್ ರಸ್ತೆಗೆ ಕೂಡುವ ವೃತ್ತದ ಸುತ್ತಮುತ್ತ ಚರ್ಚ್, ದರ್ಗಾ, ಮಾರಿಕಾಂಬ ದೇವಾಲಯ, ಸಿಂಹನಗದ್ದೆ ಜ್ವಾಲಮಾಲಿನಿ ದೇವಾಲಯವಿದ್ದು ಇಲ್ಲಿ ಯಾವುದೇ ಧರ್ಮಕ್ಕೆ ಸಂಬAಧಿಸಿದ ವ್ಯಕ್ತಿಯ ಹೆಸರಿಟ್ಟಲ್ಲಿ ಅದು ಎಲ್ಲಾ ಧರ್ಮಗಳ ವೈಮನಸ್ಸಿಗೆ ಕಾರಣವಾಗಲಿದೆ.
ಆದ್ದರಿಂದ ಕೋಮು ಗಲಭೆಗೆ ಅವಕಾಶ ನೀಡದಂತೆ ಸೂಕ್ಷö್ಮ ಪ್ರದೇಶವಾದ ಇಲ್ಲಿ ವಿಶ್ವ ಮಾನವ ಸಚಿದೇಶ ಸಾರಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರ ಹೆಸರಿಟ್ಟಲ್ಲಿ ಯಾವುದೇ ವಿವಾದಕ್ಕೆ ಆಸ್ಪದವಾಗುವುದಿಲ್ಲ ಎಂದರು.
ಈ ನಿಟ್ಟಿನಲ್ಲಿ ಎಲ್ಲಾ ಧರ್ಮ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಇಲ್ಲಿ ಕುವೆಂಪು ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಕುಮಾರ್ ಆರ್.ಶೆಟ್ಟಿ, ಅರುಣ್, ಪ್ರದೀಪ್, ದೇವರಾಜ್ ಅರಸ್ ಹೊಸಕೋಟೆ ಮತ್ತಿತರರು ಇದ್ದರು.
ಇದನ್ನೂ ಓದಿ: ka.sa.pa: ಸಮಸ್ತ ಕನ್ನಡಿಗರ ಆಶಯ ಈಡೇರಿಸುವ ಗುರಿ
ಇದನ್ನೂ ಓದಿ: Kannada Song Singing: ಕಾಫಿನಾಡಿನಲ್ಲಿ ಭುವನೇಶ್ವರಿಗೆ ಸ್ವರಾಭಿಷೇಕ
ಇದನ್ನೂ ಓದಿ: e Paper – October 29, 2021

























Discussion about this post