ಚಿಕ್ಕಮಗಳೂರು: ಮಡಿಕೆ ಪಾನಿಪೂರಿ ತಯಾರಿಸುವ ತರಕಾರಿಗಳಲ್ಲಿ ಹುಳ ಕಂಡು ಬಂದ ಹಿನ್ನಲೆಯಲ್ಲಿ ಯುವಕರುಗಳು ಮಾರಾಟಗಾರರಿಗೆ ಧರ್ಮದೇಟು ನೀಡಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಬುಧವಾರ ನಗರದಲ್ಲಿ ನಡೆಯಿತು.
ನಗರದ ಮಾರ್ಕೆಟ್ ರಸ್ತೆ, ಎಂಜಿ ರಸ್ತೆ, ಷರೀಷ್ಗಲ್ಲಿ ಸೇರಿದಂತೆ ಹಲವೆಡೆ ರಸ್ತೆ ಬದಿಯಲ್ಲಿ ಮಡಿಕೆಯಲ್ಲಿ ಮಾರಾಟ ಮಾಡುತ್ತಿದ್ದವರ ಬಳಿ ಬುಧವಾರ ಪಾನಿಪೂರಿ ತಿಂದ ಕೆಲವು ಯುವಕರಿಗೆ ಅಲ್ಲಿದ್ದ ಆಲೂಗೆಡ್ಡೆ ಕಂಡು ಅನುಮಾನ ಬಂದು ಪರಿಶೀಲಿಸಿದಾಗ ಕೊಳೆತ ಮತ್ತು ಹುಳವಿದ್ದ ಗೆಡ್ಡೆ ಪತ್ತೆಯಾಗಿದೆ.
ದುರ್ವಾಸನೆ ಬಂದಿದ್ದ ಈರುಳ್ಳಿ ಜೊತೆಗೆ ಪಾನಿಯಲ್ಲಿ ಹೊಗೆ ಸೊಪ್ಪು ಕಂಡು ಬಂದಿದ್ದು ಕೂಡಲೆ ಯುವಕರು ಪಾನಿಪೂರಿ ಮಾರುವ ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಆತ ನನಗೆ ತಿಳಿದಿಲ್ಲ ನಾನು ಕೆಲಸಕ್ಕೆ ಇರುವುದು ಎಂದು ಹೇಳಿದಾಗ ನಗರದ ಬೇರೆ ರಸ್ತೆಗಳಲ್ಲಿದ್ದ ಗೋಲ್ಗೊಪ್ಪ ಮಾರುವವರ ಬಳಿ ನೋಡಿದಾಗ ಅಲ್ಲಿದ್ದ ತರಕಾರಿಗಳು ಕೊಳೆತು ಹುಳ ಪತ್ತೆಯಾಗಿದೆ ಕೋಪಗೊಂಡ ಯುವಪಡೆ ಅದರ ತಯಾರಕನನ್ನು ಪತ್ತೆಹಚ್ಚಿ ಠಾಣೆಗೆ ಕರೆದೊಯ್ದಿದ್ದಾರೆ.

























Discussion about this post