ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಇದೆ ಎಂಬ ಸಾರ್ವಜನಿಕರ ದೂರಿನನ್ವಯ ಸುರಕ್ಷತಾ ಕ್ರಮಗಳೊಂದಿಗೆ 150ಕ್ಕೂ ಹೆಚ್ಚು ಮಂಗಗಳನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಕಾಡಿಗೆ ಬಿಡಲಾಗಿದೆ ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.
ನಗರದ ವಿವಿದೆಡೆ ಮಂಗಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ ವಿವಿದೆಡೆ ಇದ್ದ ಮಂಗಗಳನ್ನು ಹಿಡಿದು ಈ ಕ್ರಮಕ್ಕೆ ಮುಂದಾಗಿದ್ದಾರೆ. ಬಸವನಹಳ್ಳಿ, ಹೌಸಿಂಗ್‌ಭೋರ್ಡ್, ಕೆಂಪನಹಳ್ಳಿ, ಟೆಲಿಫೋನ್ ಎಕ್ಸೇಂಜ್ ರಸ್ತೆ ಸೇರಿದಂತೆ ವಿವಿದೆಡೆ ಹಿಡಿಯಲಾಗಿದೆ.
ಒಂದು ಮಂಗ ಹಿಡಿಯಲು ೭೦೦ ರೂ ನೀಡಲಾಗಿದೆ ಮೂರ್‍ನಾಲು ದಿನ ಮಂಗಗಳ ಚಲನಾವಲನ ಗಮನಿಸಿ ಅದಕ್ಕೆ ಬೇಕಾದ ಆಹಾರ ಪೂರೈಕೆ ಮಾಡಿ ಕಳೆದ ೨ ತಿಂಗಳಿನಿಂದಲೂ ಮಂಗಗಳನ್ನು ಹಿಡಿಯಲಾಗುತ್ತಿದೆ. ನಿತ್ಯ ಗಂಟೆಗಟ್ಟಲೆ ಕಾದು ಹತ್ತಾರು ಮಂಗಳಿಗೆ ಬೋನ್ ಇಟ್ಟು ಹಿಡಿಯಲಾಗಿದೆ. ಮುಂದಿನ ಒಂದುವಾರ ಈ ಕಾರ್ಯ ನಡೆಯುತ್ತಿದ್ದು ನಗರ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಕಂಡು ಬಂದರೆ ಕೂಡಲೆ ನಗರಸಭೆಗೆ ಮಾಹಿತಿ ನೀಡಿದರೆ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದರು.
ನಗರದಲ್ಲಿ ಬಿಡಾಡಿ ಹಂದಿಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ದೂರಿದೆ. ಈಗಾಗಲೆ ಹಲವು ಬಾರಿ ಎಚ್ಚರಿಕೆ ನೀಡಿ ಒಂದು ಬಾರಿ ಹಂದಿ ಹಿಡಿಸಲಾಗಿದೆ ಆದರೂ ಕೆಲವು ಕಿಡಿಗೇಡಿಗಳು ನಗರದಲ್ಲಿ ಹಂದಿಗಳನ್ನು ಬಿಡುತ್ತಿದ್ದಾರೆ. ಕೂಡಲೆ ತಮ್ಮ ಸ್ವಂತ ಸ್ಥಳದಲ್ಲಿ ಶೆಡ್ ನಿರ್ಮಿಸಿ ಸಾಕಲಿಲ್ಲ ಅಂದರೆ ಕಾನೂನು ರೀತಿಯಲ್ಲಿ ಹಿಡಿಯಲಾಗುತ್ತದೆ ಎಂದರು.
ಕಳೆದ ೬ ತಿಂಗಳಿಂದಲೂ ೨ ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಲಾಗಿದೆ. ೨ ತಿಂಗಳಲ್ಲಿ ಮತ್ತೆ ಆರಂಭಿಸಲಾಗುತ್ತದೆ. ನಾಯಿಗಳ ಹಾವಳಿ ಹೆಚ್ಚಾಗಿ ಕಂಡು ಬಂದರೆ ನಗರಸಭೆ ಸಹಾಯವಾಣಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸಂತಾನ ಹರಣ ಚಿಕಿತ್ಸೆ ಮಾಡಿದ ನಾಯಿಗಳಿಗೆ ಎಲ್ಲಾ ರೀತಿಯ ಲಸಿಕೆ ಹಾಕಲಾಗುತ್ತದೆ ಆದ್ದರಿಂದ ಅವುಗಳು ಕಚ್ಚಿದರೂ ಪ್ರಾಣಹಾನಿಯೂ ಆಗುವುದಿಲ್ಲ ಮತ್ತು ಯಾವುದೆ ಕಾಯಿಲೆ ಬರುವುದಿಲ್ಲ ಎಂದರು.
ಬಾಣವರ ಮೂಲದ ತಂಡ ಮಂಗಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯಚರಣೆಯಲ್ಲಿದ್ದರು. ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಇಂದ್ರ, ಗಂಗಾಧರ್, ಅರಣ್ಯ ಇಲಾಖೆಯ ಷರೀಫ್ ಇದ್ದರು.
Written Test: ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆಲಿಖಿತ ಪರೀಕ್ಷೆ

























Discussion about this post