ಚಿಕ್ಕಮಗಳೂರು: ನಗರದಲ್ಲಿ ನಗರಸಭೆ ಚುನಾವಣೆ ಕಾವೇರಿದ್ದು, ನಗರಸಭೆಯ ೩೫ ವಾರ್ಡ್ಗಳಿಗೆ ೧೪೬ ಮಂದಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ೩೩ ವಾರ್ಡ್ಗಳಿಗೆ ಸ್ಪಽಸಿದ್ದು, ಇನ್ನುಳಿದ ಎರಡು ವಾರ್ಡ್ಗಳಲ್ಲಿ ಪಕ್ಷೇತರರಿಗೆ ಬೆಂಬಲ ಸೂಚಿಸಿವೆ.
ಜೆಡಿಎಸ್ ೧೨, ಸಿಪಿಐ ೧, ಬಿಎಸ್ಪಿ ೫, ಆಪ್ ೬, ಎಸ್ಡಿಪಿಐ ೪ ಕಡೆಗಳಲ್ಲಿ ಸ್ಪರ್ಧಿಸಿದ್ದು, ಪಕ್ಷೇತರರು ಬಹುಸಂಖ್ಯೆಯಲ್ಲಿ ಅಂದರೆ, ೫೨ ಮಂದಿ ಸ್ಪರ್ಧಿಸಿದ್ದಾರೆ. ಡಿ. ೨೭ ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನ ಡಿ. ೧೮ಕ್ಕೆ ಮುಕ್ತಾಯಗೊಂಡಿದೆ. ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರ ಬಿದ್ದಿದೆ.
ಈ ಬಾರಿ ನಗರಸಭೆ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಟೆಯಾಗಿದೆ. ಕಳೆದ ೧೫ ವರ್ಷಗಳಿಂದ ನಗರಸಭೆಯಲ್ಲಿ ನೇರವಾಗಿ ಹಾಗೂ ಹಿಂಬಾಗಿಲಿನಿಂದ ಆಡಳಿತ ನಡೆಸಿರುವ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ೬ ಮತಗಳಿಂದ ಪರಾಭವಗೊಂಡಿರುವ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. ಕಾರಣ, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮತಗಳ ಬುಟ್ಟಿಗೆ ಕೈ ಹಾಕಿ ಯಶಸ್ವಿಯಾಗಿರುವ ಕಾಂಗ್ರೆಸ್, ನಗರಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ.
ಈ ಎರಡು ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿಯ ನಡುವೆ ಜೆಡಿಎಸ್ ಹಾಗೂ ಇತರೆ ಪಕ್ಷಗಳು ತಮ್ಮ ಪ್ರಬಲ್ಯವನ್ನು ಪರೀಕ್ಷೆಗೆ ಒಡ್ಡಿವೆ. ಕಣದಲ್ಲಿರುವ ೫೨ ಪಕ್ಷೇತರ ಅಭ್ಯರ್ಥಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು, ತಲಾ ೨ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ನೇರವಾಗಿ ಬೆಂಬಲ ಸೂಚಿಸಿವೆ.
Municipal Corporation
Discussion about this post