ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಶೋಲಾ ಕಾಡು ಸೇರಿದಂತೆ ಅಲ್ಲಿನ ವಿಶಿಷ್ಟ ಹುಲ್ಲುಗಾವಲು ಒತ್ತುವರಿ ಆಗುತ್ತಿದೆ, ಮಂಜೂರಾತಿ ನೀಡುವ ಕಾರ್ಯ ಸದ್ದಿಲ್ಲದಂತೆ ಸಾಗಿದ್ದು ಕೆಲವರು ಅಕ್ರಮ ಸಕ್ರಮ ಹೆಸರಿನಲ್ಲಿ ಮಂಜೂರಾತಿಗೆ ಗಿರಿ ಪ್ರದೇಶದಲ್ಲಿ ಜಾಗ ಕಬಳಿಸಲು ಮುಂದಾಗಿದ್ದಾರೆ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ದೂರಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಗಿರಿ ಪ್ರದೇಶದ ಶೋಲಾ ಕಾಡುಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ, ಹುಲ್ಲುಗಾವಲು ಬಿದ್ದಂತ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿ ನೀರನ್ನು ಸಂಗ್ರಹಿಸಿ ಕಣಿವೆ ಪ್ರದೇಶದಲ್ಲಿ ಇರುವ ಶೋಲಾ ಕಾಡಿನಲ್ಲಿ ಜಲ ಮೂಲ ಹುಟ್ಟಿಗೆ ಕಾರಣವಾಗುತ್ತದೆ, ವರ್ಷ ಪೂರ್ತಿ ಗಿರಿ ಪ್ರದೇಶದಲ್ಲಿ ನೀರು ಒದಗಿಸುವ ನಿಟ್ಟಿನಲ್ಲಿ ಶೋಲಾ ಕಾಡು ಹುಲ್ಲುಗಾವಲು ಕಾರ್ಯ ನಿರ್ವಹಿಸುತ್ತವೆ ಆದರೆ ಇಲ್ಲಿನ ವಿಶಿಷ್ಟ ಹುಲ್ಲುಗಾವಲು ಒತ್ತುವರಿ ಆಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಒತ್ತ್ತುವರಿ ಮತ್ತು ಶೋಲಾ ಕಾಡು ನಾಶದಿಂದ ಈ ನೈಸರ್ಗಿಕ ಪ್ರಕ್ರಿಯೆ ನಾಶವಾಗುವ ಸಾಧ್ಯತೆ ಇದೆ. ಗಿರಿ ಪ್ರದೇಶದಲ್ಲಿ ಪ್ರಮುಖವಾಗಿ ಹೊನ್ನಮ್ಮನಹಳ್ಳ, ಹೆಬ್ಬೆ ಹಳ್ಳ, ವೇದ ನದಿ, ಗೌರಿ ಹಳ್ಳ ಸೇರಿದಂತೆ ಅನೇಕ ನದಿ ಮೂಲಗಳು ಇವೆ, ನೈಸರ್ಗಿಕ ಕಾಡುಗಳು ಇಲ್ಲಿ ಕಾಫೀ ತೋಟಗಳಾಗಿ ಪರಿವರ್ತನೆ ಆದರೆ ಇಲ್ಲಿನ ಜಲ ಮೂಲಗಳಿಗೆ ಕಂಟಕ ತಪ್ಪಿದ್ದಲ್ಲ.
ಶೋಲಾ ಕಾಡು, ಹುಲ್ಲುಗಾವಲು ನೀರಿನ ಮೂಲ ಸ್ಥಳದಲ್ಲಿ ಮತ್ತು ನೈಸರ್ಗಿಕ ಸೂಕ್ಷ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೆಸರಿನಲ್ಲಿ ಮಂಜೂರಾತಿ ನೀಡುವುದನ್ನು ನಿಲ್ಲಿಸಬೇಕು
ಜೂರಾತಿ ಕೊಡುವಾಗ ನೈಸರ್ಗಿಕ ಮಹತ್ವ ಇರುವ ಪ್ರದೇಶಗಳನ್ನು ಅರಣ್ಯ, ಕಂದಾಯ ಇನ್ನಿತರೆ ಇಲಾಖೆಯೊಂದಿಗೆ ಜಂಟಿ ಸ್ಥಳ ಪರಿಶೀಲಿಸಬೇಕು. ಈಗಾಗಲೇ ಈ ಭಾಗದಲ್ಲಿ ನೈಸರ್ಗಿಕ ಹಸುರಿನ ಹುಲ್ಲುಗಾವಲು ಕಣ್ಮರೆಯಾಗುತ್ತಿದೆ, ಇಲ್ಲಿ ಕಾಂಕ್ರಿಟ್ ಕಟ್ಟಡಗಳು, ಹೋಂ ಸ್ಟೇ, ರೆಸಾರ್ಟ್ ತಲೆಯೆತ್ತುತ್ತಿವೆ.
ನೋಡಲು ಶೋಲಾ ಕಾಡಿನಂತೆ ಕಂಡರು ಅವು ಒಳಗಡೆ ಕಾಫೀ ತೋಟಗಳಾಗಿವೆ. ಸರ್ಕಾರಿ ಜಾಗ ಶೋಲಾ ಕಾಡನ್ನು ಸವರಿ ತೋಟ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ತಮ್ಮ ಖಾತೆ ತೋಟಗಳ ಪಕ್ಕದಲ್ಲಿ ಇರುವ ಹುಲ್ಲುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಎತ್ತರ ಪ್ರದೇಶವಾಗಿರುವ ಮುಳ್ಳಯ್ಯನಗಿರಿ ಶ್ರೇಣಿ ಸಂರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಯಲು ಸೀಮೆಯ ಆಯ್ಯನಕೆರೆ, ಮದಗದಕೆರೆ ಸೇರಿದಂತೆ ವೇದಾವತಿ ವಾಣಿವಿಲಾಸ ಸಾಗರ ಅಣೆಕಟ್ಟು, ಭದ್ರಾ ಅಣೆಕಟ್ಟು ಸೇರಿದಂತೆ ಪ್ರಮುಖ ನೀರಾವರಿ ಪ್ರದೇಶಗಳಿಗೆ, ಕಾವೇರಿ ಮತ್ತು ಕೃಷ್ಣ ಕೊಳ್ಳಗಳಿಗೆ ಗಿರಿ ಪ್ರದೇಶದಲ್ಲಿ ಹುಟ್ಟು ನೀರಿನ ಮೂಲಗಳಿಂದ ವರ್ಷ ಪೂರ್ತಿ ನೀರು ಸಿಗುತ್ತಿದೆ. ಲಕ್ಷಾಂತರ ರೈತರ ಜೀವನಾಡಿ ಈ ಚಂದ್ರದ್ರೋಣ ಪರ್ವತ ಶ್ರೇಣಿಗಳು. ನೈಸರ್ಗಿಕ ಮಹತ್ವ ಇರುವ ಇಂತಹ ಪ್ರದೇಶಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಸರ್ಕಾರ ಮತ್ತು ಸ್ಥಳೀಯ ಆಡಳಿತ.
ಈ ಕೂಡಲೇ ಗಿರಿ ಶ್ರೇಣಿಯಲ್ಲಿ ಯಾವುದೇ ಅರಣ್ಯ ಯೇತರ ಚಟುವಟಿಕೆ ಅವಕಾಶ ನೀಡಬಾರದು ಮತ್ತು ಇಲ್ಲಿ ಮಂಜೂರಾತಿ ನೀಡುವುದನ್ನು ಸಂಪೂರ್ಣ ನಿಲ್ಲಿಸಬೇಕು, ಕೊಟ್ಟ ಮಂಜೂರಾತಿ ರದ್ದುಗೊಳಿಸಬೇಕು, ಒತ್ತುವರಿ ತೆರವು ಗೊಳಿಸಬೇಕು ಮತ್ತು ಹೊಸ ಒತ್ತುವರಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಜಲ ಹುಟ್ಟುವ ಸ್ಥಳಗಳ ರಕ್ಷಣೆಗೆ ವಿಶೇಷ ನಿಯಮಾವಳಿ ಮತ್ತು ಕಾನೂನು, ಮಾರ್ಗಸೂಚಿ ತರಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Green crackers: ಹಸಿರು ಪಟಾಕಿ ದರ ಭಾರೀ ಏರಿಕೆ – ಪಟಾಕಿ ಪ್ರಿಯರಿಗೆ ಬಿಸಿ
ಇದನ್ನೂ ಓದಿ: covid vaccine: ಕೋವಿಡ್ ಲಸಿಕೆಗಳನ್ನು ಮನೆ-ಮನೆಗೆ ತೆಗೆದುಕೊಂಡು ಹೋಗಬೇಕು
In addition to non-forest activities in the hill range, encroachments need to be curbed

























Discussion about this post