ಚಿಕ್ಕಮಗಳೂರು : ನಗರದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಇನ್ನು ಮುಂದಿನ ದಿನಗಳಲ್ಲಿ ಶುಲ್ಕ ಅನ್ವಯವಾಗಲಿದೆ. ವಾಹನಗಳ ಸುಲಲಿತ ಸಂಚಾರ ಜತೆಗೆ ವಾಹನಗಳ ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಸಭೆ ನಿರ್ಧಾರ ಕೈಗೊಂಡಿದ್ದು ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದ್ದು ನಿರ್ಮಲ ಭಾರತಿ ಟ್ರಸ್ಟ್ ಟೆಂಡರ್ ಪಡೆದುಕೊಂಡಿದೆ.
ಈ ಸಂಬಂಧ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಚಿಕ್ಕಮಗಳೂರು ನಗರದ ಎಂ.ಜಿರಸ್ತೆಯ ವಾಹನ ನಿಲುಗಡೆ ಹಕ್ಕಿನ ಬಹಿರಂಗ ಹರಾಜು ಬುಧವಾರ ನಡೆದಿದ್ದು ಭಾಗಿಯಾಗಿದ್ದ 9 ಟೆಂಡರ್ದಾರರ ಪೈಕಿ ನಿರ್ಮಲ ಭಾರತಿ ಟ್ರಸ್ಟ್ 16 ಲಕ್ಷಕ್ಕೆ ಟೆಂಡರ್ ವಹಿಸಿಕೊಂಡಿದೆ ಮುಂದಿನ ದಿನಗಳಲ್ಲಿ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ಅನ್ವಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿಕೊAಡರು.
ದ್ವಿಚಕ್ರ ವಾಹನ ಹೊರತುಪಡಿಸಿ ನಾಲ್ಕು ಚಕ್ರದ ವಾಹನ, ಕಾರುಗಳು, ಖಾಸಗಿ ವಾಹನಗಳಿಗೆ ಪ್ರತಿ ಗಂಟೆಗೆ 10 ರೂಗಳನ್ನು ನಿಗಧಿಪಡಿಸಿದು, 1500 ರೂಗಳ ಮಾಸಿಕ ಪಾಸ್ಗಳನ್ನು ವಿತರಿಸಲಾಗುವುದು. 2 ಗಂಟೆಗೂ ಹೆಚ್ಚು ಕಾಲ ವಾಹನ ನಿಲುಗಡೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ 5 ರೂಗಳನ್ನು ನೀಡಬೇಕಾಗುತ್ತದೆ. ಈ ನಿಯಮ ಸರ್ಕಾರಿ, ಶಾಲಾ ಬಸ್ಗಳಿಗೆ ಅನ್ವಯವಾಗುವುದಿಲ್ಲ ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.
ಇದರಿಂದಾಗಿ ಅನಗತ್ಯವಾಗಿ ನಿಲುಗಡೆಯಾಗುತ್ತಿದ್ದ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಇದರ ಸಾಧಕ ಬಾದಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಐಜಿರಸ್ತೆ, ಮಾರ್ಕೆಟ್ ರಸ್ತೆ, ವಿಜಯಪುರ, ಮುಂತಾದ ಪ್ರಮುಖ ರಸ್ತೆಗಳಲ್ಲಿ ಶುಲ್ಕ ನಿಯಮ ವಿಧಿಸಲಾಗುವುದು. ಎಂಜಿರಸ್ತೆಯಲ್ಲಿ ಪೊಲೀಸರ ಸಹಕಾರದೊಂದಿಗೆ ವಾಹನ ನಿಲುಗಡೆಗೆ ಮಾರ್ಗಸೂಚಿಗಳನ್ನು ಹಾಕಲಾಗುತ್ತಿದ್ದು ನವೆಂಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಮಾತನಾಡಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಈ ನಿಯಮ ನಿಜಕ್ಕೂ ಒಳ್ಳೆಯದು, ಟೆಂಡರ್ದಾರರು ಆರಂಭದ ದಿನಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಾತಿ ಮಾಡುವಾಗ ವಾಹನ ಸವಾರರ ಮನವೊಲಿಸುವ ಮೂಲಕ ಶುಲ್ಕ ವಸೂಲಿ ಮಾಡಬೇಕು ಅನಗತ್ಯ ವಾಗ್ವಾದಗಳಿಗೆ ಎಡೆ ಮಾಡಿಕೊಡದಂತೆ ಕೇಳಿಕೊಂಡರು.
ಎAಜಿ ರಸ್ತೆಯಲ್ಲಿ ದಿನದ 24 ಗಂಟೆಗಳ ಕಾಲವು ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೀವ್ರ ಅಡೆತಡೆಗಳು ಉಂಟಾಗುತ್ತಿದ್ದವು ಆದ್ದರಿಂದ ನಿಯಮ ಜಾರಿಗೊಳಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿಕೊಂಡರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯು ಪ್ರವಾಸಿ ತಾಣವಾಗಿರುವ ಕಾರಣ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವೊಂದು ಲಾಡ್ಜ್ಗಳಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ನಗರಸಭೆಯ ಪುಟ್ಪಾತ್ನಲ್ಲಿಯೇ ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದಾಗಿ ಸುಲಲಿತ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಇದೀಗ ಶುಲ್ಕ ವಸೂಲಾತಿ ನಿಯಮ ಅನ್ವಯವಾಗುವುದರಿಂದ ಅನಗತ್ಯ ವಾಹನ ನಿಲುಗಡೆ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

























Discussion about this post