ಚಿಕ್ಕಮಗಳೂರು : ನಗರ ವ್ಯಾಪ್ತಿಯ ಹೊರ ವಲಯದ ಅಂಬಳೆ ಕೈಗಾರಿಕಾ ಕೇಂದ್ರ ಪ್ರದೇಶದಲ್ಲಿ ಸ್ಥಾಪಿತಗೊಂಡಿರುವ ಲೈಫ್ ಲೈನ್ ಸಂಸ್ಥೆಯು ಶಿಥಲೀಕೃತ ಸಂಸ್ಕರಿತ ಕೋಳಿಮಾಂಸವನ್ನು ಸಂಸ್ಕರಣಾ ಘಟಕದಿಂದ ೧೦೦ನೇ ರಫ್ತು ವಾಹನವನ್ನು ಭೂತಾನ್ ದೇಶಕ್ಕೆ ಕಳುಹಿಸುವ ಮೂಲಕ ಶತಕದ ಸಂಭ್ರಮದ ಆಚರಿಸಿದೆ.
ಈ ಬಗ್ಗೆ ಲೈಫ್ಲೈನ್ ಫೀಡ್ ಸಂಸ್ಥೆ ಆಡಳಿತ ನಿರ್ದೇಶಕ ಕಿಶೋರ್ಕುಮಾರ್ ಹೆಗ್ಡೆ ಮಾತನಾಡಿ ದೇಶ, ವಿದೇಶಗಳಲ್ಲಿ ಶುಚಿ ರುಚಿ ಮತ್ತು ಸೇವೆಗಾಗಿ ಸಂಸ್ಥೆ ಹೆಸರಾಗಿದೆ. ಕರ್ನಾಟಕದಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ರಫ್ತು ಮಾಡುವ ಮೂಲಕ ಹೆಚ್ಚಿನ ಸಂಖ್ಯೆಗೆ ಗ್ರಾಹಕರನ್ನು ಒಳಗೊಂಡಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಖ್ಯಾತಿಗೆ ಇಲ್ಲಿನ ಸಶಕ್ತ ಕಾರ್ಯಪಡೆ, ಹಾಗೂ ಕೃಷಿ ಮೂಲದ ಕೋಳಿಸಾಕಾಣಿಕೆದಾರರ ಸಹಕಾರ ಸಾಧನೆಗೆ ಕಾರಣವೆಂದು ಶ್ಲಾಘಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಭೂತಾನ್ ದೇಶಕ್ಕೆ ಶಿಥಲೀಕೃತ ಸಂಸ್ಕರಿತ ಕೋಳಿಮಾಂಸ ರಫ್ತು ಮಾಡಲಾಗುತ್ತಿದೆ. ಭೂತಾನ್ ರಾಯಲ್ ಆರ್ಮಿ ಗ್ರಾಹಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಇದ್ದರೂ ಶುಚಿ ರುಚಿಯಿಂದ ಈವರೆಗೂ ತಲಾ ೨೩ ಟನ್ ಕೋಳಿ ಮಾಂಸವನ್ನು ೯೯ ಬಾರಿ ಅಶೋಕ ಲೈಲ್ಯಾಂಡ್ ವಾಹನದ ಮೂಲಕ ಕಳಿಸಲಾಗಿದೆ. ಇಂದು ೧೦೦ನೇ ವಾಹನ ತೆರಳುತ್ತಿರುವುದು ಸಂಭ್ರಮ ಹೆಚ್ಚಿಸಿದೆ ಎಂದರು.
೧೯೮೫ ರಲ್ಲಿ ನಗರದಲ್ಲಿ ಪ್ರಾರಂಭಗೊAಡ ಕೋಳಿ ಆಹಾರ ಘಟಕ ಹಂತ ಹಂತವಾಗಿ ವಿಸ್ತರಣೆಗೊಳ್ಳುತ್ತಾ ಬಂದಿದೆ. ಕೋಳಿಮಾಂಸ ಸಂಸ್ಕರಣೆ, ಆಹಾರ ತಯಾರಿಕಾ ಘಟಕ, ಮಾರಾಟ ಮಳಿಗೆ ಸೇರಿದಂತೆ ಸುಮಾರು ೬ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ೧೨೦೦ ನೌಕರರಿಗೆ ನೇರವಾಗಿ ೨೫೦೦ ಜನರಿಗೆ ಪರೋಕ್ಷವಾಗಿ ಸಂಸ್ಥೆ ಉದ್ಯೋಗವಕಾಶ ದೊರಕಿಸಿಕೊಟ್ಟಿದೆ ಎಂದರು
ಸಿಬ್ಬಂದಿ ವರ್ಗದ ಕರ್ತವ್ಯ ನಿಷ್ಠೆ, ಸೇವಾ ತತ್ಪರತೆಯಿಂದ ಈ ಹಂತ ತಲುಪಲು ಸಾಧ್ಯವಾಗಿದೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಅರ್ಜುನ್ ಹೆಗ್ಡೆ, ಮತ್ತು ಕೃತಿಕಾ ಅರ್ಜುನ್, ರಫ್ತು ವಿಭಾಗದ ಮುಖ್ಯಸ್ಥ ಯತಿರಾಜ ಶೆಟ್ಟಿ, ಪಶುವೈದ್ಯ ಡಾ.ರಮೇಶ್, ಘಟಕದ ಮುಖ್ಯಸ್ಥ ದಿನೇಶ್, ಸೇರಿದಂತೆ ಮತ್ತಿತರರು ಇದ್ದರು.
Discussion about this post