ಮುಂಬೈ: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ಟೋಕನ್ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ‘ಕಾರ್ಡ್ ಟೋಕನೈಸೇಷನ್’ ಗಡುವನ್ನು ಆರ್ಬಿಐ ಆರು ತಿಂಗಳು ಮುಂದೂಡಿದೆ.ವಿವಿಧ ವಲಯಗಳಿಂದ ಗಡುವು ವಿಸ್ತರಣೆಗೆ ಮನವಿ ಬಂದ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮ ಕೈಗೊಂಡಿದೆ.
ಈ ವ್ಯವಸ್ಥೆಯು ಜುಲೈ 1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಕಾಲಾವಕಾಶಬೇಕು ಎಂಬ ಪಾಲುದಾರರ ಮನವಿಯನ್ನು ಪುರಸ್ಕರಿಸಿದ ಆರ್ಬಿಐ, ಟೋಕನೈಸ್ ಮಾಡಿದ ಕಾರ್ಡ್ ಆನ್ ಫೈಲ್ (ಸಿಒಎಫ್) ಡೇಟಾ ಸಂಗ್ರಹಿಸುವ ಗಡುವನ್ನು ಆರು ತಿಂಗಳು ವಿಸ್ತರಿಸಿದೆ. ಅಂದರೆ, ಮುಂದಿನ ವರ್ಷ ಜೂನ್ 30ರವರೆಗೂ ವಿಸ್ತರಿಸಲಾಗಿದೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ಗಡುವನ್ನು ವಿಸ್ತರಣೆ ಮಾಡುವಂತೆ ಭಾರತೀಯ ಬ್ಯಾಂಕ್ಗಳ ಅಸೋಸಿಯೇಷನ್ (ಐಬಿಎ) ಮನವಿ ಮಾಡಿತ್ತು. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು ಹೊಸ ವ್ಯವಸ್ಥೆಗೆ ಬದಲಾಗಲು ಸೂಕ್ತ ಮೂಲಸೌಕರ್ಯಗಳನ್ನು ಹೊಂದಿಲ್ಲ. ಹೀಗಾಗಿ ಗಡುವು ವಿಸ್ತರಿಸಬೇಕು ಎಂದು ಕೋರಿತ್ತು.
ಕಾರ್ಡ್ ಟೋಕನೈಸೇಷನ್ ಎಂದರೇನು?:
ಕಾರ್ಡ್ ಟೋಕನೈಸೇಷನ್ ಎಂಬುದು ಕ್ರೆಡೆಟ್ ಅಥವಾ ಡೆಬಿಟ್ ಕಾರ್ಡ್ ವಿವರಕ್ಕೆ ಪಾರ್ಯಯವಾಗಿ ನೀಡುವ ಸಂಕೇತ. ಇದನ್ನು ‘ಟೋಕನ್’ ಎಂದು ಕರೆಯಲಾಗುತ್ತದೆ. ಟೋಕನ್ ಆಗಿರುವ ಕಾರ್ಡ್ಗಳು ಆನ್ಲೈನ್ ವ್ಯವಹಾರ ನಡೆಸಲು ಹೆಚ್ಚು ಸುರಕ್ಷಿತವಾಗಿವೆ.
RBI Extends Card Tokenisation Deadline Till June
ಇದನ್ನು ಓದಿ: RBI: ಬ್ಯಾಂಕ್ಗಳ ಸೇವ್ ಲಾಕರ್ ನಿಯಮ ಪರಿಷ್ಕರಿಸಿದ ಆರ್ಬಿಐ
ಇದನ್ನೂ ಓದಿ: ಹೆಚ್ಚಿನ ಲಾಭಕ್ಕಾಗಿ ಹೂಡಿಕೆ ಮಾಡುವಾಗ ಠೇವಣಿದಾರರು ಎಚ್ಚರ ವಹಿಸಬೇಕು: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
Discussion about this post