ಬಿಸ್ಕೂಟ್ ಅಂಬಾಡೆ ರೆಸಿಪಿ
ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು. ಇಡ್ಲಿ ಹಿಟ್ಟಿಗಿಂತಲೂ ದಪ್ಪವಿರಲಿ. ಈ ಬ್ಯಾಟರ್‌ಗೆ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕಾದ ಎಣ್ಣೆಯಲ್ಲಿ ಬಜ್ಜಿ ರೀತಿ ಕರಿಯಿರಿ. ಬಿಸ್ಕೂಟ್ ಅಂಬಾಡೆನಾ ಕಾಯಿ ಚಟ್ನಿ ಜೊತೆ ಸರ್ವ್ ಮಾಡಿ, ಬಿಸಿ ಬಿಸಿ ಅಂಬಾಡೆನಾ ಬೆಣ್ಣೆ ಜೊತೆಗೂ ತಿನ್ನಬಹುದು.
=========
ಹುಬ್ಬಳ್ಳಿ- ಧಾರವಾಡ್ ಸ್ಟೈಲ್ ಬೋಂಡಾ
ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು, ಅರ್ಧ ಸ್ಪೂನ್ ವಾಮ, ಒಂದರಿಂದ ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ, 8ರಿಂದ 10 ಎಸಳು ಬೆಳ್ಳುಳ್ಳಿ,ಅರ್ಧ ಸ್ಪೂನ್ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿನ ಕೊತ್ತೊಂಬರಿ ಸೊಪ್ಪು ಚಿಟಿಕೆ ಇಂಗು, ಅವಶ್ಯಕತೆ ಇದ್ದಷ್ಟು ಉಪ್ಪು, ನೀರು, ಕರಿಯಲು ಬೇಕಾದಷ್ಟು ಎಣ್ಣೆ.
ಮಾಡುವ ವಿಧಾನ: ಮೊದಲು ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆಯನ್ನ ಸೇರಿಸಿ ಪೇಸ್ಟ್ ರೆಡಿ ಮಾಡಿ. ನಂತರ, ಅಗತ್ಯವಿದ್ದಷ್ಟು ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕರಗಿಸಿ. ಇದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ವಾಮ, ಸಣ್ಣಗೆ ಹೆಚ್ಚಿದ ಈರುಳ್ಳಿ, ರೆಡಿ ಮಾಡಿಟ್ಟುಕೊಂಡ ಜಿಂಜರ್-ಗಾರ್ಲಿಕ್-ಚಿಲ್ಲಿ ಪೇಸ್ಟ್, ಕೊತ್ತೊಂಬರಿ ಸೊಪ್ಪು, ಇಂಗು, ಒಂದು ಸ್ಪೂನ್ ಎಣ್ಣೆ ಹಾಕಿ ಥಿಕ್ ಬ್ಯಾಟರ್ ರೆಡಿ ಮಾಡಿಕೊಳ್ಳಿ.
15 ನಿಮಿಷ ಈ ಬ್ಯಾಟರನ್ನ ಪಕ್ಕಕ್ಕಿರಿಸಿ, ನಂತರ ಬಜಿ ರೀತಿ ಕಾದ ಎಣ್ಣೆಯಲ್ಲಿ ತಿಳಿ ಕಂದು ಬಣ್ಣ ಬರುವವರೆಗೂ ಕರೆದ್ರೆ, ಹುಬ್ಬಳ್ಳಿ- ಧಾರವಾಡ್ ಸ್ಟೈಲ್ ಬೋಂಡಾ ರೆಡಿ. ಇದನ್ನ ಸಾಸ್ ಅಥವಾ ಚಟ್ನಿ ಜೊತೆ ಸರ್ವ್ ಮಾಡಿ.
===========
ಮಸಾಲಾ ಮಂಡಕ್ಕಿ
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಮಂಡಕ್ಕಿ, ಹುರಿಯಲು 3 ಸ್ಪೂನ್ ಎಣ್ಣೆ, ಒಂದು ಚಿಕ್ಕ ಸ್ಪೂನ್ ಜೀರಿಗೆ, 10 ಎಸಳು ಕರಿಬೇವು, 10 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ, 3 ಹಸಿಮೆಣಸಿನ ಕಾಯಿ, ಚಿಟಿಕೆ ಅರಿಶಿಣ, ಚಿಟಿಕೆ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸಕ್ಕರೆ ಪುಡಿ.
ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆಹಾಕಿ, ಅದಕ್ಕೆ ಜೀರಿಗೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ ಹಾಕಿ ಹುರಿಯಿರಿ. ಎಲ್ಲ ಚೆನ್ನಾಗಿ ಹುರಿದುಕೊಂಡ ಮೇಲೆ ಅದಕ್ಕೆ ಉಪ್ಪು, ಅರಿಶಿಣ, ಮೆಣಸಿನ ಪುಡಿ, ಪೆಪ್ಪರ್ ಪುಡಿ ಹಾಕಿ ಕೊಂಚ ಹುರಿದು, ಚುರ್ಮುರಿ, ಸಕ್ಕರೆ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಕರಂ ಕುರುಂ ಮಸಾಲೆ ಚುರ್ಮುರಿ ರೆಡಿ.
ಈ ಚುರ್ಮುರಿನಾ ವಾರಾಪೂರ್ತಿ ಗಾಳಿ ಆಡ್ದಿರೋ ಡಬ್ದಲ್ಲಿಟ್ಟು ತಿನ್ಬಹುದು. ನಿಮ್ಮ ಮನೆ ಜನ್ರಿಗೇನಾದ್ರು ಭೇಲ್‌ಪುರಿ ತಿನ್ಬೇಕು ಅಂತಾ ಅನ್ಸಿದ್ರೆ, ಈ ಚುರ್ಮುರಿಗೆ ಅರ್ಧ ಕಪ್ ಸೇವು, ಒಂದು ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಸೌತೆಕಾಯಿ, ಸಣ್ಣಗೆ ತುರಿದುಕೊಂಡ ಕ್ಯಾರೇಟ್, ಕೊತ್ತಂಬರಿ ಸೊಪ್ಪಿನ ಮಿಶ್ರಣ, ಖಾರ ಹೆಚ್ಚು ಬೇಕಾದಲ್ಲಿ ಒಂದು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿಕೊಳ್ಳಿ. ಕೊಂಚ ಸಿಹಿಯಾದ ಹುಣಸೆ ಚಟ್ನಿ, ಪುದೀನಾ ಚಟ್ನಿ. ಇಷ್ಟ್ ಹಾಕಿ ಮಿಕ್ಸ್ ಮಾಡಿ ಕೊಡಿ. ಬಾಯ್ ಚಪ್ಪರ್‌ಸ್ಕೊಂಡ್ ತಿಂತಾರೆ ನೋಡಿ.
============
ಮಂಗಳೂರು ಬನ್ಸ್
ಬೇಕಾಗುವ ಸಾಮಗ್ರಿ: ಒಂದು ಬಟ್ಟಲು ಗೋದಿಹಿಟ್ಟು, ಬೇಕಾದ್ರೆ ಮೈದಾ ಹಿಟ್ಟು ಕೂಡ ಯ್ಯೂಸ್ ಮಾಡ್ಬಹುದು. ಆದ್ರೆ ಮೈದಾಗಿಂತ ಗೋದಿ ಆರೋಗ್ಯಕ್ಕೆ ತುಂಬಾ ಒಳ್ಳೆದು, ಅದ್ಕೆ ಗೋದಿ ಹಿಟ್ಟು ಬಳಸೋದು ಉತ್ತಮ. ಒಂದು ಬಾಳೆಹಣ್ಣು, ಮೂರರಿಂದ ನಾಲ್ಕು ಸ್ಪೂನ್ ಮೊಸರು, ಒಂದು ಸ್ಪೂನ್ ಜೀರಿಗೆ, 2ರಿಂದ 3 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಬಾಳೆಹಣ್ಣನ್ನ ಮಿಕ್ಸಿ ಜಾರ್‌ಗೆ ಹಾಕಿ ಜೊತೆಗೆ ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ(ಬೇಕಾದ್ರೆ ಕೈಯಿಂದಾನೇ ಬಾಳೆಹಣ್ಣು ಹಿಂಡಿ, ಮೊಸರಿನ ಜೊತೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ). ಒಂದು ಪಾತ್ರೆಯಲ್ಲಿ ಗೋದಿ ಹಿಟ್ಟು, ಉಪ್ಪು, ಸಕ್ಕರೆ, ಸೋಡಾ, ಜೀರಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಬಾಳೆಹಣ್ಣಿನ ಪೇಸ್ಟ್ ಸೇರಿಸಿ, ಸ್ವಲ್ಪ, ಸ್ವಲ್ಪ ನೀರು ಚುಮುಕಿಸ್ತಾ ಹಿಟ್ಟು ಕಲಿಸಿ. ಎರಡು ಹನಿ ಎಣ್ಣೆ ಹಾಕಿ ನಾದಿದರೆ ಮೆತ್ತಗಿನ ಬನ್ಸ್ ಹಿಟ್ಟು ರೆಡಿಯಾಗತ್ತೆ. ರಾತ್ರಿ ಈ ಹಿಟ್ಟನ್ನ ಕಲೆಸಿಡಿ.
ಬೆಳಿಗ್ಗೆ ಈ ಹಿಟ್ಟನ್ನ ಮತ್ತೆ ಐದು ನಿಮಿಷ ನಾದಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಪುರಿ ಆಕಾರಕ್ಕೆ ಲಟ್ಟಿಸಿ. ಆದ್ರೆ ಬನ್ಸ್ ಹಿಟ್ಟು ಲಟ್ಟಿಸುವಾಗ ಕೊಂಚ ದಪ್ಪವಾಗಿ ಲಟ್ಟಿಸಿದರೆ ಬನ್ಸ್ ಮೆತ್ತಗೆ, ರುಚಿಯಾಗುತ್ತದೆ. ಈಗ ಮಧ್ಯಮ ಉರಿಯಲ್ಲಿ ಎಣ್ಣೆ ಕಾಯಿಸಿ, ಬನ್ಸ್ ಕರೆಯಿರಿ. ಬನ್ಸ್ ಜೊತೆಗೆ ಕಾಯಿ ಚಟ್ನಿ, ಮತ್ತು ಸಾಂಬಾರ್ ಸೂಪರ್ ಕಾಂಬಿನೇಷನ್ ಆಗಿರತ್ತೆ.
============
ಬೀಟ್‌ರೂಟ್ ಟಿಕ್ಕಿ
ಸಂಜೆಯಾದ ಮೇಲೆ ಏನಾದ್ರೂ ಟೇಸ್ಟಿ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸೋದು ಸಾಮಾನ್ಯ. ಹಾಗಂತ ಎಷ್ಟು ದಿನಾ ಹೊರಗೆ ಸಿಗುವ ಜಂಕ್ ಫುಡ್ ತಿನ್ನುತ್ತೀರಿ..? ಹಾಗಾಗಿ ನಾವಿಂದು ಮನೆಯಲ್ಲೇ ತಯಾರಿಸಬಹುದಾದ ಹೆಲ್ದಿ, ಟೇಸ್ಟಿ ಸ್ನ್ಯಾಕ್ಸ್ ಆಗಿರುವ ಬೀಟ್‌ರೂಟ್ ಟಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಬೀಟ್‌ರೂಟ್ ಟಿಕ್ಕಿ ಮಾಡಲು ಬೇಕಾಗುವ ಪದಾರ್ಥ ಮತ್ತು ಮಾಡುವ ವಿಧಾನವನ್ನ ತಿಳಿಯೋಣ ಬನ್ನಿ..
ಬೇಕಾಗುವ ಪದಾರ್ಥ: ಒಂದು ಬೌಲ್ ಬೀಟ್‌ರೂಟ್ ತುರಿ, ಎರಡು ಆಲೂಗಡ್ಡೆ, ಅರ್ಧ ಕಪ್ ಬಟಾಣಿ, ನಾಲ್ಕು ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಕೊಂಚ ಹೆಸರು ಬೇಳೆ, ಕಡಲೆ ಬೇಳೆ, ಕರಿಬೇವಿನ ಸೊಪ್ಪು, ಕೊತ್ತೊಂಬರಿ ಸೊಪ್ಪು, ಕೊಂಚ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು. ಕೊಂಚ ಬ್ರೆಡ್ ಕ್ರಂಬ್ಸ್, ರವೆ.
ಮಾಡುವ ವಿಧಾನ: ಮೊದಲು ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇಯಿಸಿ. ನಂತರ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿ, ಜೀರಿಗೆ, ಹೆಸರು ಬೇಳೆ, ಕಡ್ಲೆ ಬೇಳೆ, ಕರಿಬೇವಿನ ಸೊಪ್ಪು, ಹಾಕಿ ಹುರಿಯಿರಿ. ನಂತರ ಉಪ್ಪು, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಬೀಟ್‌ರೂಟ್ ತುರಿ, ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಬಟಾಣಿ ಸೇರಿಸಿ ಮಿಕ್ಸ್ ಮಾಡಿ. ಈಗ ಟಿಕ್ಕಿ ಮಿಶ್ರಣ ರೆಡಿ.
ಒಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಂಬ್ಸ್ ಅಥವಾ ರವೆ ಹಾಕಿ, ಮಾಡಿಟ್ಟುಕೊಂಡ ಬೀಟ್ರೂಟ್ ಪಲ್ಯವನ್ನು ಉಂಡೆಯನ್ನಾಗಿ ಮಾಡಿಕೊಂಡು, ಅದನ್ನು ಟಿಕ್ಕಿಯ ರೀತಿ ಶೇಪ್ ಮಾಡಿ, ರವೆಯಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ ಅಥವಾ, ಕೊಂಚ ಎಣ್ಣೆ ಹಾಕಿ, ತವ್ವಾ ಫ್ರೈ ಮಾಡಿ. ತವ್ವಾ ಫ್ರೈ ಮಾಡಿದ್ರೆ, ಆರೋಗ್ಯಕರ ಬೀಟ್ರೂಟ್ ಟಿಕ್ಕಿ ರೆಡಿ.
===========
ಕಾಯಿ ವಡೆ
ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ“ತ್ತಂಬರಿ ಕಾಳು, ಕರಿಬೇವು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಅಕ್ಕಿಯನ್ನು 4 ಗಂಟೆ ನೆನೆಸಿಡಬೇಕು. ಬಳಿಕ ಸ್ವಚ್ಛವಾಗಿ ತ“ಳೆದು, ಮಿಕ್ಸಿ ಜಾರ್‌ಗೆ ಹಾಕಿ, ಕಾಯಿತುರಿ, ಮೆಣಸು, ಜೀರಿಗೆ, ಕ“ತ್ತ“ಂಬರಿ ಕಾಳು ಹಾಕಿ ತರಿ ತರಿಯಾಗಿ ರುಬ್ಬಿಕ“ಳ್ಳಿ.
ಬಳಿಕ ಈ ಮಿಶ್ರಣವನ್ನು 1 ಬೌಲ್‌ಗೆ ಹಾಕಿ, ಅಕ್ಕಿ ಹುಡಿ, ಕರಿಬೇವು, ಉಪ್ಪು ಹಾಕಿ ಹಿಟ್ಟು ಕಲಿಸಿ. ಬಳಿಕ ಅದರ ಉಂಡೆ ಮಾಡಿಕ“ಂಡು, ನಿಪ್ಪಟ್ಟು ಆಕಾರದಂತೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದರೆ, ಕಾಯಿ ವಡೆ ರೆಡಿ. ಸ್ವಲ್ಪ ಕ್ರಿಸ್ಪಿಯಾಗಲು ಕಾರ್ನ್‌ಫ್ಲೋರ್, ಮತ್ತು ಖಾರ ಬೇಕಾದಲ್ಲಿ ಹಸಿಮೆಣಸು ಸೇರಿಸಿಕ“ಳ್ಳಬಹುದು.
================
ಮಸಾಲಾ ವಡೆ ರೆಸಿಪಿ
ಮಳೆಗಾಲದಲ್ಲಿ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದರೆ, ನೀವು ಈ ಈಸಿ ರೆಸಿಪಿಯನ್ನು ಮಾಡಿ ತಿನ್ನಬಹುದು.
ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 2 ಈರುಳ್ಳಿ, ಕೊತ್ತೊಂಬರಿ ಸ“ಪ್ಪು, ಸಬ್ಬಸಿಗೆ ಸ“ಪ್ಪು, 4 ಹಸಿಮೆಣಸು, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಚಕ್ಕೆ, ಲವಂಗ, ಶುಂಠಿ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: 4 ತಾಸು ಕಡಲೆಬೇಳೆಯನ್ನು ನೆನೆಸಿ, ಚೆನ್ನಾಗಿ ಸ್ವಚ್ಛ ಮಾಡಿ. ಬಳಿಕ ಮಿಕ್ಸಿ ಜಾರ್‌ಗೆ ಸ್ವಲ್ಪ ನೆನೆಸಿದ ಕಡಲೆಬೇಳೆ, ಹಸಿಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗ, ಶುಂಠಿ ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ ಮಿಶ್ರಣ, ಉಳಿದ ಕಡಲೆಬೇಳೆ, ಈರುಳ್ಳಿ, ಕೊತ್ತೊಂಬರಿ ಸ“ಪ್ಪು, ಸಬ್ಬಸಿಗೆ ಸ“ಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಈ ಮಿಶ್ರಣದಿಂದ ವಡೆ ತಯಾರಿಸಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಮಸಾಲಾ ವಡೆ ರೆಡಿ. ಸಂಜೆ ಚಹಾ ಕುಡಿಯುವ ವೇಳೆ, ನೀವು ಇದನ್ನು ಮಾಡಿ ತಿನ್ನಬಹುದು.
========
ಈರುಳ್ಳಿ ವಡೆ ರೆಸಿಪಿ
ಬೇಕಾಗುವ ಸಾಮಗ್ರಿ: 2ರಿಂದ 3 ಉದ್ದಕ್ಕೆ ಹೆಚ್ಚಿದ ಈರುಳ್ಳಿ, . 2 ಸ್ಪೂನ್ ಖಾರದ, 1 ಸ್ಪೂನ್ ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪುಕಾಲು ಕಪ್ ಮೈದಾ, ಕಾಲು ಕಪ್ ಕಡಲೆಹಿಟ್ಟು, ಹಿಂಗು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: 1 ಬೌಲ್‌ಗೆ ಈರುಳ್ಳಿ, ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಖಾರದ, ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪು, ಮೈದಾ, ಕಡಲೆಹಿಟ್ಟು, ಹಿಂಗು, ಇವೆಲ್ಲವನ್ನೂ ಸೇರಿಸಿ, ನೀರು ಹಾಕದೇ, ಹಿಟ್ಟು ಕಲೆಸಬೇಕು.
ಬಳಿಕ ಕೈಗೆ ಎಣ್ಣೆ ಹಚ್ಚಿ, ವಡೆಯ ರೀತಿ ತಟ್ಟಿ, ಕಾದ ಎಣ್ಣೆಯಲ್ಲಿ ಕರೆದರೆ, ಈರುಳ್ಳಿ ವಡೆ ರೆಡಿ.
===========
Recipe: ಟೀ ಟೈಮ್ ಸ್ನ್ಯಾಕ್ಸ್ ಸಾಬುದಾನಾ ವಡಾ ರೆಸಿಪಿ
ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿದ ಸಾಬಕ್ಕಿ, 2 ಬೇಯಸಿದ ಆಲೂಗಡ್ಡೆ, ಅರ್ಧ ಕಪ್ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಹಸಿಮೆಣಸು, ಶುಂಟಿ ತುರಿ, ಕೊತ್ತೊಂಬರಿ ಸೊಪ್ಪು, ಸಕ್ಕರೆ, ಜೀರಿಗೆ, ಉಪ್ಪು, ನಿಂಬೆರಸ, ಕರಿಯಲು ಎಣ್ಣೆ.
ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್ ತೆಗೆದುಕ“ಂಡು, ಅದರಲ್ಲಿ ನೆನೆಸಿದ ಸಾಬಕ್ಕಿ, ಆಲೂಗಡ್ಡೆ, ಶೇಂಗಾ, ಹಸಿಮೆಣಸು, ಶುಂಟಿ ತುರಿ, ಕೊತ್ತೊಂಬರಿ ಸೊಪ್ಪು, ಸಕ್ಕರೆ, ಜೀರಿಗೆ, ಉಪ್ಪು, ನಿಂಬೆರಸ ಹಾಕಿ ಮಿಕ್ಸ್ ಮಾಡಿ.
ಬಳಿಕ ವಡೆ ಆಕಾರಕ್ಕೆ ಈ ಮಿಶ್ರಣವನ್ನು ಶೇಪ್ ಮಾಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಸಾಬಕ್ಕಿ ವದಾ ರೆಡಿ. ಕಾಯಿ ಚಟ್ನಿ ಜತೆ ಈ ವಡಾ ಉತ್ತಮ ಕಾಂಬಿನೇಷನ್.
===============
ಮಂಗಳೂರು ಸ್ಪೆಶಲ್ ಬೇರು ಹಲಸಿನ ರವಾ ಫ್ರೈ
ಬೇಕಾಗುವ ಸಾಮಗ್ರಿ: ಬೇರು ಹಲಸು, 1 ಕಪ್ ರವೆ, 2 ಸ್ಪೂನ್ ಖಾರದ ಪುಡಿ, ಅರಿಷಿನ, 2 ಸ್ಪೂನ್ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, 3 ಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಮೈದಾ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಬೇರು ಹಲಸಿನ ಸಿಪ್ಪೆ ತೆಗೆದು, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ನೀರಿನಲ್ಲಿ ಹಾಕಿ, ಸ್ವಚ್ಛ ಮಾಡಿ. ಬಳಿಕ ಕುದಿಯುವ ನೀರಿಗೆ ಈ ಬೇರುಹಲಸನ್ನು ಹಾಕಿ, ಗ್ಯಾಸ್ ಆಫ್ ಮಾಡಿ. 5 ನಿಮಿಷದ ಬಳಿಕ, ಬೇರು ಹಲಸನ್ನು ನೀರಿನಿಂದ ತೆಗೆಯಿರಿ.
ಹೀಗೆ ಮಾಡುವುದರಿಂದ ಬೇರು ಹಲವಸು ಸ್ವಲ್ಪ ಸಾಫ್ಟ್ ಆಗುತ್ತದೆ. ಇದಾದ ಬಳಿಕ ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿ ಹುಡಿ, ಮೈದಾ, ಕಾರ್ನ್ ಫ್ಲೋರ್, ಸ್ಪೂನ್ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಶಿನ, ಖಾರದ ಪುಡಿ, ನೀರು ಹಾಕಿ ಬಜ್ಜಿ ಬ್ಯಾಟರ್ ರೆಡಿ ಮಾಡಿ.
ಈಗ ಬೇರು ಹಲಸನ್‌ನು ಈ ಹಿಟ್ಟಿನಲ್ಲಿ ಅದ್ದಿ, ರವೆಯಲ್ಲಿ ಅದ್ದಿ, ಕವರ್ ಮಾಡಿ. ಬಳಿಕ ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಇದನ್ನು ಕಾಯಿಸಿದರೆ, ಬೇರು ಹಲಸಿನ ರವಾ ಫ್ರೈ ರೆಡಿ.
Discussion about this post