ಗುಜರಾತಿ ಸ್ಪೆಶಲ್ ಭಾಕರವಾಡಿ ರೆಸಿಪಿ (Bhakarwadi Recipe)
ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, , 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು, 2 ಸ್ಪೂನ್ ಬಿಸಿ ಎಣ್ಣೆ ಇವು ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ.
ಹೂರಣಕ್ಕಾಗಿ, 1 ಕಪ್ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ, ಆಮ್ಚುರ್ ಪುಡಿ, ಉಪ್ಪು. ಬೆಲ್ಲ ಮತ್ತು ಹುಣಸೆ ಸೇರಿಸಿ ಮಾಡಿದ ಚಟ್ನಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೈದಾ ಹಾಕಿ, 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು ಹಾಕಿ ಮಿಕ್ಸ್ ಮಾಡಿ. ಬಳಿಕ 2 ಸ್ಪೂನ್ ಬಿಸಿ ಮಾಡಿದ ಎಣ್ಣೆ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ. ಬದಿಗಿರಿಸಿ.
ನಂತರ ಫಿಲ್ಲಿಂಗ್ಸ್ ತಯಾರಿಸಲು, ಮಿಕ್ಸಿಜಾರ್‌ಗೆ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ, ಆಮ್ಚುರ್ ಪುಡಿ, ಉಪ್ಪು ಸೇರಿಸಿ, ತರಿ ತರಿಯಾಗಿ ಪುಡಿ ಮಾಡಿ. ಈಗ ಫಿಲ್ಲಿಂಗ್ಸ್ ರೆಡಿ.
ಈಗ ರೆಡಿಯಾಗಿರುವ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ, ಅದರ ಮೇಲೆ ಹುಣಸೆ ಚಟ್ನಿ ಸವರಿ, ಅದರ ಮೇಲೆ ಫಿಲ್ಲಿಂಗ್ಸ್ ಸವರಿ. ಪೋಲ್ಡ್ ಮಾಡಿ. ಬಳಿಕ ಬಿಲ್ಲೆಯಾಕಾರದಲ್ಲಿ ಕತ್ತರಿಸಿ. ಕಾದ ಎಣ್ಣೆಗೆ ಹಾಕಿ, ಮಂದ ಉರಿಯಲ್ಲಿ ಕಾಯಿಸಿದರೆ, ಭಾಕರ್‌ವಾಡಿ ರೆಡಿ.
ೃೃೃೃೃೃೃೃೃೃೃೃೃೃ
ಶೆಜ್ವಾನ್ ವೆಜ್ ಫ್ರೈಡ್ ರೈಸ್ ರೆಸಿಪಿ (Schezwan veg fried rice)
ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಡ್ರೈ ಚಿಲ್ಲಿ, 1 ಸ್ಪೂನ್ ಟೋಮೆಟೋ ಸಾಸ್, 1 ಈರುಳ್ಳಿ, ಕ್ಯಾರೇಟ್, ಸ್ಪ್ರಿಂಗ್ ಆನಿಯನ್, ಬೀನ್ಸ್, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಪೇಸ್ಟ್, 1 ಸ್ಪೂನ್ ಪೆಪ್ಪರ್ ಪುಡಿ, 1 ಸ್ಪೂನ್ ವಿನೇಗರ್, ಉಪ್ಪು.
ಮಾಡುವ ವಿಧಾನ: ಅಕ್ಕಿಯನ್ನು ಕ್ಲೀನ್ ಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪಿನ ಜತೆ ಕುದಿಸಿ. ಬಳಿಕ ಅನ್ನ ಸ್ವಲ್ಪ ಬೇಯುತ್ತಿದ್ದ ಹಾಗೆ ಗಂಜಿ ಬಸಿಯಿರಿ. ನಂತರ ಅನ್ನವನ್ನು ಹರಿವಾಣಕ್ಕೆ ಹಾಕಿ. ಅನ್ನ ಉದುರು ಉದುರಾಗುತ್ತದೆ.
ಈಗ 1 ಬೌಲ್‌ನಲ್ಲಿ ಬಿಸಿ ನೀರು ಹಾಕಿ, ಅದರಲ್ಲಿ ಖಾರ ಬೇಕಾದಷ್ಟು ಡ್ರೈ ಚಿಲ್ಲಿ ಹಾಕಿ. 15 ನಿಮಿಷ ನೆನೆಸಿಡಿ. ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿ. ನಂತರ ಪ್ಯಾನ್ ಬಿಸಿ ಮಾಡಿ, 6ರಿಂದ 7 ಸ್ಪೂನ್ ಎಣ್ಣೆ ಹಾಕಿ, ಅದರಲ್ಲಿ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.
ಈ ಚಿಲ್ಲಿ ಸಾಸ್ 1 ಡಬ್ಬಕ್ಕೆ ಹಾಕಿ. ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಪೇಸ್ಟ್, ಸ್ಪ್ರಿಂಗ್ ಆನಿಯನ್ ಸ್ಪ್ರಿಂಗ್ ಹಾಕಿ ಹುರಿಯಿರಿ. ಬಳಿಕ ಕ್ಯಾರೇಟ್, ಬೀನ್ಸ್, ಹಾಕಿ ಹುರಿಯಿರಿ.
ಬಳಿಕ ಅನ್ನ, ಪೆಪ್ಪರ್ ಪುಡಿ, ಉಪ್ಪು, ವಿನೇಗರ್, ರೆಡಿ ಮಾಡಿದ ಚಿಲ್ಲಿ ಸಾಸ್‌ನಲ್ಲಿ 2 ಸ್ಪೂನ್ ಚಿಲ್ಲಿ ಸಾಸ್, ಟೋಮೆಟೋ ಸಾಸ್, ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿದ್ರೆ, ಶೆಜ್ವಾನ್ ವೆಜ್ ಫ್ರೈಡ್ ರೈಸ್ ರೆಡಿ.
ೃೃೃೃೃೃೃೃೃೃೃೃ
ಆಲೂ ಟಿಕ್ಕಿ ಸ್ಯಾಂಡ್‌ವಿಚ್ ರೆಸಿಪಿ (Aloo Tikki Sandwich)
ಬೇಕಾಗುವ ಸಾಮಗ್ರಿ: ಬ್ರೆಡ್, ಸೇವು, 1 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, ಅರಿಶಿನ, ಬೇಯಿಸಿದ 4 ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, 4 ಮೆಣಸು, 10 ಎಸಳು ಬೆಳ್ಳುಳ್ಳಿ, ಅರ್ಧ ಸ್ಪೂನ್ ಕಪ್ಪುಪ್ಪು, 1 ಸ್ಪೂನ್ ಜೀರಿಗೆ ಪುಡಿ, ಸ್ವಲ್ಪ ಪುದೀನಾ, ಕ್ಲೀನ್ ಮಾಡಿ, ಬಿಸಿ ನೀರಿಗೆ ಹಾಕಿ ತೆಗೆದ ಪಾಲಕ್, ಶುಂಠಿ, ಸೌತೆ, ಈರುಳ್ಳಿ, ಕ್ಯಾಪ್ಸಿಕಂ, ಚಾಟ್ ಮಸಾಲೆ ಪುಡಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ, ಹಿಂಗ್, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಅರಿಶಿ, ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊತ್ತೊಂಬರಿ ಸೊಪ್ಪು ಉದುರಿಸಿದರೆ, ಮಸಾಲೆ ರೆಡಿ.
ಈಗ ಮಿಕ್ಸಿ ಜಾರ್‌ನಲ್ಲಿ 4 ಮೆಣಸು, ಬೆಳ್ಳುಳ್ಳಿ, ಜೀರಿಗೆ ಪುಡಿ, ಕಪ್ಪುಪ್ಪು, ಉಪ್ಪು, ನೀರು ಹಾಕಿ ಪೇಸ್ಟ್ ತಯಾರಿಸಿ. ಈಗ ರೆಡ್ ಚಟ್ನಿ ರೆಡಿ. ಈಗ ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಪಾಲಕ್, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಶುಂಠಿ ಹಾಕಿ ರುಬ್ಬಿದ್ರೆ ಗ್ರೀನ್ ಚಟ್ನಿ ರೆಡಿ.
ಈಗ ಬ್ರೆಡ್ ಮೇಲೆ ಗ್ರೀನ್ ಮತ್ತು ಕೆಂಪು ಚಟ್ನಿ ಸವರಿ, 1 ಕಡೆ ಆಲೂ ಮಸಾಲೆ ಹಾಕಿ ಅದರ ಮೇಲೆ ಸೇವು, ಸೌತೆ, ಈರುಳ್ಳಿ, ಕ್ಯಾಪ್ಸಿಕಂ ಸ್ಲೈಸ್, ಚಾಟ್ ಮಸಾಲೆ ಹಾಕಿ ಅದರ ಮೇಲೆ ಬ್ರೆಡ್ ಇಟ್ಟರೆ ಸ್ಯಾಂಡವಿಚ್ ರೆಡಿ. ನೀವು ಬೇಕಾದ್ರೆ ಇದನ್ನು ಗ್ರಿಲ್ ಮಾಡಬಹುದು.
ೃೃೃೃೃೃೃೃೃೃೃ
ಚಪಾತಿಗೆ ಉತ್ತಮ ಕಾಂಬಿನೇಷನ್ ಈ ಆಲೂಗಡ್ಡೆ- ನುಗ್ಗೆಕಾಯಿ ಪಲ್ಯ (Chapati-aloo- moringa bhaji)
ಬೇಕಾಗುವ ಸಾಮಗ್ರಿ: 2ರಿಂದ 3 ನುಗ್ಗೇಕಾಯಿ, 3 ಆಲೂಗಡ್ಡೆ, 1 ಈರುಳ್ಳಿ, 1 ಟೋಮೆಟೋ, 3 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸಾಸಿವೆ, ಕರಿಬೇವು, ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ನುಗ್ಗೆ ಮತ್ತು ಆಲೂಗಡ್ಡೆಯನ್ನು ಉಪ್ಪು ಮತ್ತು ಅರಿಶಿನ ಹಾಕಿ, ಸಪರೇಟ್ ಆಗಿ ಬೇಯಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ತುಪ್ಪ , ಸಾಸಿವೆ, ಜೀರಿಗೆ, ಕರಿಬೇವು, ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ.
ನಂತರ ಈರುಳ್ಳಿ ಹಾಕಿ ಮತ್ತೆ ಹುರಿಯಿರಿ. ಇದಕ್ಕೆ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಉಪ್ಪು ಟೋಮೆಟೋ ಹಾಕಿ ಮಿಕ್ಸ್ ಮಾಡಿ., ಹುರಿಯಿರಿ. ನಂತರ ಆಲೂಗಡ್ಡೆ ಹಾಕಿ. ಮುಚ್ಚಳ ಮುಚ್ಚಿ 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಬೇಯಿಸಿದ ನುಗ್ಗೆಕಾಯಿ ಹಾಕಿ ಮತ್ತೆ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. ನಂತರ ಕೊತ್ತೊಂಬರಿ ಸೊಪ್ಪು ಮೇಲಿನಿಂದ ಉದುರಿಸಿದರೆ, ಪಲ್ಯ ರೆಡಿ.
ೃ-ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದು ಈ ಗ್ರೇವಿ (Gravy)
ಬೇಕಾಗುವ ಸಾಮಗ್ರಿ: 1 ಕಪ್ ರಾಜ್ಮಾ, ಕೊತ್ತೊಂಬರಿ ಸೊಪ್ಪು, 2 ಟೋಮೆಟೋ ಪ್ಯೂರಿ, 4 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 2 ಪಲಾವ್ ಎಲೆ, ಏಲಕ್ಕಿ, ಹಸಿಮೆಣಸು, ಶುಂಠಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚೂರು ಹಿಂಗ್, ಅರಿಶಿನ, 1 ಸ್ಪೂನ್ ಗೋಡಂಬಿ ಪೇಸ್ಟ್, 1 ಸ್ಪೂನ್ ಕಸೂರಿ ಮೇಥಿ, ಗರಂ ಮಸಾಲೆ, ಉಪ್ಪು.
ಮಾಡುವ ವಿಧಾನ: ರಾಜ್ಮಾವನ್ನು 5 ಗಂಟೆಗಳ ಕಾಲ ನೆನೆಸಿ, ಕುಕ್ಕರ್‌ಗೆ ಹಾಕಿ 2 ವಿಶಲ್ ಆಗುವವರೆಗೂ ಬೇಯಿಸಿ. ಈಗ 1 ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಪಲಾವ್ ಎಲೆ, ಏಲಕ್ಕಿ, ಹಸಿಮೆಣಸು, ಶುಂಠಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚೂರು ಹಿಂಗ್, ಅರಿಶಿನ ಹಾಕಿ ಬಾಡಿಸಿ.
ಬಳಿಕ 1 ಸ್ಪೂನ್ ಗೋಡಂಬಿ ಪೇಸ್ಟ್, ಟೋಮೆಟೋ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಬಳಿಕ ಉಪ್ಪು ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿ. ಬಳಿಕ ಬೇಯಿಸಿದ ರಾಜ್ಮಾ ಸೇರಿಸಿ, ಕಸೂರಿ ಮೇಥಿ, ಉಪ್ಪು, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಸಣ್ಣ ಕುದಿ ಬರಿಸಿದರೆ, ಗ್ರೇವಿ ರೆಡಿ.
ೃೃೃೃೃೃೃೃೃೃೃೃೃೃ
ಮಕ್ಕಳ ಬಾಕ್ಸ್‌ಗೆ ಆರೋಗ್ಯಕರ ಕಾರ್ನ್-ಪಾಲಕ್ ರೈಸ್ ರೆಸಿಪಿ (Corn Palak Rice)
ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಈರುಳ್ಳಿ, 1 ಕಪ್ ಕಾರ್ನ್, ಅಕ್ಕಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ-ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, 3 ಸ್ಪೂನ್ ತುಪ್ಪ ಅಥವಾ ಎಣ್ಣೆ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, ಉಪ್ಪು.
ಮಾಡುವ ವಿಧಾನ: ಪಾಲಕ್ ಕ್ಲೀನ್ ಮಾಡಿ, ಬಿಸಿ ನೀರಿಗೆ ಹಾಕಿ ಸ್ವಲ್ಪ ಕುದಿಸಿ. ಬಳಿಕ ಐಸ್ ನೀರಿಗೆ ಹಾಕಿ ತೆಗೆಯಿರಿ. ನಂತರ ಮಿಕ್ಸಿ ಜಾರ್‌ಗೆ ಹಾಕಿ, ಪುದೀನಾ, ಕೊತ್ತೊಂಬರಿ ಸೊಪ್ಪು ಹಾಕಿ ರುಬ್ಬಿ.
ಈಗ ಕುಕ್ಕರ್‌ಗೆ ತುಪ್ಪ ಅಥವಾ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಈರುಳ್ಳಿ ಹಾಕಿ ಬಾಡಿಸಿ. ಬಳಿಕ ಶುಂಠಿ-ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್ ಹಾಕಿ ಬಾಡಿಸಿ. ನಂತರ ಗರಂ ಮಸಾಲೆ, ಚಾಟ್ ಮಸಾಲೆ, ಉಪ್ಪು, ಅರಿಶಿನ ಹಾಕಿ ಮಿಕ್ಸ್ ಮಾಡಿ.
ನಂತರ ರುಬ್ಬಿದ ಪಾಲಕ್, ಅಕ್ಕಿ, ಕಾರ್ನ್ ಹಾಕಿ ಮಿಕ್ಸ್ ಮಾಡಿ, ನೀರು ಹಾಕಿ, ಮೂರು ವಿಶಲ್ ಬರಿಸಿದರೆ, ಕಾರ್ನ್-ಪಾಲಕ್ ರೈಸ್ ರೆಡಿ.
=====================
ಲಸೂನಿ ಪಾಲಕ್ ಪನೀರ್ (Lasuni Palak paneer)
ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, 2 ಸ್ಪೂನ್ ಕ್ರೀಮ್, 1 ಸ್ಪೂನ್ ಕಸೂರಿ ಮೇಥಿ, 1 ಪಲಾವ್ ಎಲೆ, ಚಕ್ಕೆ, ಲವಂಗ, ಕಾಳುಮೆಣಸು, ಏಲಕ್ಕಿ, ಉಪ್ಪು.
ಮಾಡುವ ವಿಧಾನ: ಕುದಿಯುವ ನೀರಿಗೆ ಉಪ್ಪು, ಸ್ವಚ್ಛವಾಗಿಸಿದ ಪಾಲಕ್ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಬಿಸಿ ಮಾಡಿ. ಬಳಿಕ ಪಾಲಕ್‌ನ್ನು ಐಸ್ ನೀರಿಗೆ ಹಾಕಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಪುದೀನಾ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ, 5 ಬೆಳ್ಳುಳ್ಳಿ ಎಸಳು ಹಾಕಿ ರುಬ್ಬಿ.
ಬಳಿಕ ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ ಪನೀರ್ ಮತ್ತು ಬೆಳ್ಳುಳ್ಳಿ ಹುರಿಯಿರಿ. ಅದನ್ನು ಬದಿಗಿರಿಸಿ, ಮತ್ತೆ ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಪಾಲಕ್ ಎಲೆ, ಏಲಕ್ಕಿ, ಲವಂಗ, ಚಕ್ಕೆ, ಕಾಲುಮೆಣಸು, ಜೀರಿಗೆ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ Tomato ಹಾಕಿ ಹುರಿಯಿರಿ. ಬಳಿಕ ರುಬ್ಬಿದ ಪಾಲಕ್ ಹಾಕಿ ಹಸಿ ವಾಸನೆ ಹೋಗುವವರೆಗೂ ಕುದಿಸಿ. ಖಾರದಪುಡಿ, ಅರಿಶಿನ, ಗರಂಮಸಾಲೆ, ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡಿ.
ಬಳಿಕ ಹುರಿದ ಪನೀರ್, ಬೆಳ್ಳುಳ್ಳಿ ಹಾಕಿ, ಕಸೂರಿ ಮೇಥಿ , ನೀರು, ಕ್ರೀಮ್, ಉಪ್ಪು ಹಾಕಿ 1 ಕುದಿ ಬರಿಸಿದರೆ, ಲಸೂನಿ ಪಾಲಕ್ ಪನೀರ್ ರೆಡಿ.
ೃೃೃೃೃೃೃೃ
ವೆಜ್ ಸೋಯಾ ಪಲಾವ್ ರೆಸಿಪಿ (Veg Soya palav)
ಬೇಕಾಗುವ ಸಾಮಗ್ರಿ: ಅಕ್ಕಿ, 2 ಕಪ್ ಸೋಯಾ ಚಂಕ್ಸ್, ಕ್ಯಾರೇಟ್, ಈರುಳ್ಳಿ, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, 1 ಸ್ಪೂನ್ ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, 1 ಸ್ಪೂನ್ ಕಸೂರಿ ಮೇಥಿ, ತುಪ್ಪ, ಪಲಾವ್ ಎಲೆ, ಕಾಳುಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಉಪ್ಪು.
ಮಾಡುವ ವಿಧಾನ: ನೀರು ಕುದಿ ಬರಿಸಿ, ಅದಕ್ಕೆ ಸೋಯಾ ಚಂಕ್ಸ್ ಹಾಕಿ, ಗ್ಯಾಸ್ ಆಪ್ ಮಾಡಿ. ಬಳಿಕ ಬಿಸಿ ನೀರಿನಿಂದ ಐಸ್ ನೀರಿಗೆ ಈ ಸೋಯಾ ಚಂಕ್ಸ್ ಹಾಕಿ, ನೀರನ್ನು ಹಿಂಡಿ.
ಈಗ ಕುಕ್ಕರ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಕಾಳುಮೆಣಸು, ಜೀರಿಗೆ ತರಿ ತರಿಯಾಗಿ ಪುಡಿ ಮಾಡಿ ಹಾಕಿ,. ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕ್ಯಾಪ್ಸಿಕಂ, ಕ್ಯಾರೇಟ್, ಬಿನ್ಸ್, ಬಟಾಣಿ, ಹಾಕಿ ಹುರಿಯಿರಿ.
ನಂತರ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, ಕಸೂರಿ ಮೇಥಿ, ಹಾಕಿ ಮಿಕ್ಸ್ ಮಾಡಿ.
ಬಳಿಕ ಸೋಯಾ ಚಂಕ್ಸ್, ಕ್ಲೀನ್ ಮಾಡಿದ ಅಕ್ಕಿ, ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ, 3 ವಿಶಲ್ ಕೂಗಿಸಿದರೆ, ಸೋಯಾ ಪಲಾವ್ ರೆಡಿ.
ೃೃೃೃೃೃೃೃೃೃೃೃ
Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ
Discussion about this post