ಚಿಕ್ಕಮಗಳೂರು: ಮಾನವ ಸಮಾಜದಲ್ಲಿ ಜಾತಿ ಎಂಬ ಕಳಂಕವನ್ನು ತೊಡೆಯುವ ಸಂಕಲ್ಪ ಮಾಡಬೇಕಿದೆ ಎಂದು ಬಸವಮಂದಿರ ಪೀಠದ ಪೀಠಾಧ್ಯಕ್ಷರಾದ ಡಾ.ಬಸವಮುರಳಸಿದ್ದ ಸ್ವಾಮೀಜಿಗಳು ಅಭಿಪ್ರಾಯಿಸಿದರು.
ನಗರದ ಬೈಪಾಸ್ ರಸ್ತೆಯ ಬಸವ ಮಂದಿರದಲ್ಲಿ ಆಯೋಜಿಸಿದ್ದ ೫ನೇಯ ಶಿವಾನುಭಗೋಷ್ಟಿ ಹರಳಯ್ಯ ಮಧುವಯ್ಯಗಳ ಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಶಿವಶರಣರು ಸಾಹಿತ್ಯ, ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಅಂದಿನ ವರ್ಣ ವ್ಯವಸ್ಥೆಯ ವಿರುದ್ಧ ಬಸವಣ್ಣನವರು ಖಂಡಿಸಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಮೌಲ್ಯಯುತ ವಚನಗಳನ್ನು ಸಮಾಜಕ್ಕೆ ಧಾರೆ ಎರೆದರು ಎಂದು ಸ್ಮರಿಸಿದರು.
ಲಿಂಗವಂತರು ಎಂದರೆ ಅದು ಜಾತಿ, ಧರ್ಮವಲ್ಲ ಬದಲಾಗಿ ಅದೊಂದು ವಿಶಿಷ್ಟವಾದ ಪರಂಪರೆ, ಶರಣರ ಕಾಲದಲ್ಲಿ ಹರಳಯ್ಯ ಮಧುವಯ್ಯ ಅವರನ್ನು ಅಂತರ್ಜಾತಿ ವಿವಾಹದ ಕಾರಣ ಜಾತಿಯತೆಯ ಹೆಸರಲ್ಲಿ ಅವರನ್ನು ತೂಡಲಾಗಿತ್ತು. ಇಂತಹ ಜಾತಿಪದ್ದತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಬದಲಾಗಬೇಕಿದೆ ಎಂದರು.
ಬದುಕಿದ್ದಾಗ ನಾಲ್ಕು ಜನತೆಗೆ ಒಳ್ಳೆಯದು ಮಾಡಿದಾಗ, ವಿಶ್ವಾಸ ಪ್ರೀತಿಯಿಂದ ಇದ್ದಾಗ ನಮ್ಮ ಹೆಸರು ವರ್ಷಗಳ ಕಾಲ ಜನರ ನಾಲಿಗೆ ಮೇಲೆ ಹರಿದಾಡುತ್ತದೆ. ಸ್ವರ್ಗ ನರಕ ಎಂಬುದು ಯಾರು ನೋಡಿಲ್ಲ, ಇರುವಷ್ಟು ದಿನ ಸಜ್ಜನರಾಗಿ ಎಲ್ಲರೊಂದಿಗೆ ಬೆರೆತು ಪ್ರಾಮಾಣಿಕವಾಗಿ ಜೀವನ ಸಾಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ದೈವಾಧೀನರಾದ ಗೌರಮ್ಮಬಸವೇಗೌಡರನ್ನು ಸ್ಮರಿಸಿದ ಅವರು ಸಮಾಜಮುಖಿಯಾಗಿ, ಮಹಿಳೆಯರ ಅಭಿವೃದ್ಧಿಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅಕ್ಕಮಹಾದೇವಿ ಸಂಘ, ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳಿಗೆ ಉದಾರ ದೇಣಿಗೆ ನೀಡುವ ಮೂಲಕ ಶ್ರಮಿಸಿದ್ದಾರೆ ಎಂದು ಅವರ ಸಮಾಜ ಸೇವಾ ಕೊಡುಗೆಯನ್ನು ಸ್ಮರಿಸಿದರು.
ಲೋಕೋಪಯೋಗಿ ಅಭಿಯಂತರ ಬಾರಂದೂರುಪ್ರಕಾಶ್ ಮಾತನಾಡಿ ಮರಣವೇ ಮಹಾನವಮಿ ಎಂಬಂತೆ ತಮ್ಮ ಸಾವನ್ನು ಮರೆತು ಬದುಕನ್ನು ಉಜ್ಚಲಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು, ಗುರಿಯನ್ನು ಸಾಧಿಸುವ ಕಡೆಗೆ ಸಾಗಬೇಕು. ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಜನತೆಗೆ ಸಂದೇಶಗಳನ್ನು ನೀಡಿದ್ದು ಅವುಗಳನ್ನು ಅನುಸರಣೆ ಮಾಡಬೇಕು ಎಂದು ವಚನಗಳ ಮೂಲಕ ಉದಾಹರಿಸಿದರು.
ಕೋವಿಡ್ ಮಹಾಮಾರಿ ಸೋಂಕು ಜನರನ್ನು ೨ ವರ್ಷಗಳ ಕಾಲ ತಲ್ಲಣಗೊಳಿಸಿದೆ. ಹಲವಾರು ಗಣ್ಯರು, ಸಾಧಕರನ್ನು ಬಲಿಪಡೆದಿದೆ ಎಲ್ಲರೂ ಜಾಗೃತಿಯಿಂದಿರಬೇಕು ಎಂದು ಕಿವಿ ಮಾತು ಹೇಳಿದರು.
ಅಕ್ಕನ ಬಳಗದ ಉಪಾಧ್ಯಕ್ಷೆ ಭಾರತೀಶಿವರುದ್ರಪ್ಪ ಮಾತನಾಡಿ ಅಕ್ಕಮಹಾದೇವಿ ಸಂಘಕ್ಕೆ ಗೌರಮ್ಮ ಬಸವೇಗೌಡರು ಉದಾರವಾದ ದೇಣಿಗೆ ನೀಡಿದ್ದು ಮಹಿಳಾ ಸಂಘಟನೆಗಳ ಶಕ್ತಿಯ ದ್ಯೋತಕ ಎಂದು ಸ್ಮರಿಸಿದರು.ಜಿಲ್ಲೆಯ ಬಡ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರ್ಥಿಕ ನೆರವು ನೀಡುವ ಮೂಲಕ ಸ್ಪಂದಿಸಿದ್ದಾರೆ ಅವರ ಹೆಸರು ಎಂದಿಗೂ ಅಜರಾಮರ ಎಂದು ಕೊಂಡಾಡಿದರು. ಇದೇ ವೇಳೆ ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು ಜತೆಗೆ ದಾಸೋಹ ಸೇವೆ ಜರುಗಿತು.
ಈ ಸಂದರ್ಭದಲ್ಲಿ ಖಜಾಂಚಿ ಸದಾಶಿವಪ್ಪ, ಜಗದೀಶ್‌ಬಾಬು, ಎಲ್‌ಐಸಿ ರವಿ, ಉಮೇಶ್, ಕಾಂತರಾಜ್, ಜಯಣ್ಣ ನಾಗಮಣಿ ಕುಮಾರಸ್ವಾಮಿ ಇದ್ದರು, ಷಡಕ್ಷರಿ ಸ್ವಾಗತಿಸಿ, ದೇವಿಕಾ ನಿರೂಪಿಸಿ, ಹೇಮಲತಾ ಪಂಚಾಕ್ಷರಿ ವಂದಿಸಿದರು.
ಇದನ್ನೂ ಓದಿ: e Paper – October 30, 2021
ಇದನ್ನೂ ಓದಿ: Petrol-diesel price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ

























Discussion about this post