ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಸ್.ಬಿದರೆ ಗ್ರಾ.ಪಂ ಪಂಚಾಯಿತಿ ನಿಲೇನಹಳ್ಳಿ, ಹನುಮನಹಳ್ಳಿ ಮಲ್ಲಿಗೇನಹಳ್ಳಿ ಸಂಪರ್ಕಿಸುವ 80 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಶಾಸಕ ಸಿ.ಟಿ ರವಿ ಉದ್ಘಾಟಸಿದರು.
ಬಳಿಕ ಮಾತನಾಡಿದ ಅವರು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಕಷ್ಟು ಅನುದಾನ ಬಿಡುಗಡೆಗೊಳಿಸುವ ಮೂಲಕ ಶ್ರಮಿಸಿದ್ದೇನೆ, ೧೩ ವರ್ಷಗಳ ಜನಪರ ಆಡಳಿತ ನಡೆಸಿಕೊಂಡು ಬಂದಿದ್ದೇನೆ ಅಭಿವೃದ್ಧಿ ಕುರಿತು ಜನರು ತೀರ್ಪು ನೀಡಬೇಕಿದೆ ಎಂದರು.
ಆರ್ಡಿಪಿಆರ್ ಇಲಾಖೆ ೮೦ ಲಕ್ಷ ಅನುದಾನದಲ್ಲಿ ನಿಲೇನಹಳ್ಳಿ, ಹನುಮನಹಳ್ಳಿ, ಮಲ್ಲಿಗೇನಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಸಿದ್ದು ಜಿಲ್ಲೆಯ ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಮೊದಲ ಹಂತದ ಕಾಮಗಾರಿಗೆ ಶೀಘ್ರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಲಿದ್ದಾರೆ. ಇದೊಂದು ಶಾಶ್ವತ ಕುಡಿಯುವ ನೀರು ಯೋಜನೆಯಾಗಿದ್ದು ತರೀಕೆರೆ, ಕಡೂರು, ಚಿಕ್ಕಮಗಳೂರು ಲಕ್ಯಾ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ನೀರಿನ ಭವಣೆ ನೀಗಿಸುವ ಮಹತ್ವದ ಯೋಜನೆ ಇದಾಗಿದೆ ಎಂದರು.
ಕೇಂದ್ರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ನೀರು ಪೂರೈಕೆ ಗುರಿ ಹೊಂದಲಾಗಿದೆ. ಜತೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಸಿಎಂ ಜತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜಕಾರಣದಲ್ಲಿ ರಾಜಕೀಯ ಆರೋಪವನ್ನು ಎದುರಿಸಲು ಸದಾ ಸಿದ್ದ ಆದರೆ ರಾಜಕೀಯಕ್ಕೆ ಎದರಿ ಎಂದಿಗೂ ಬೆನ್ನು ತೋರಿಸುವ ಕೆಲಸ ಮಾಡಿಲ್ಲ, ಪ್ರತಿಪಕ್ಷಗಳು ನನ್ನನ್ನು ಕುಡಿಯದ್ದಿದ್ದರೂ ಕುಡುಕನ ಪಟ್ಟ ಕಟ್ಟಿ ಟೀಕೆ ಮಾಡಿದರೂ ಇದ್ಯಾವುದಕ್ಕೂ ಜಗ್ಗುವವನ್ನಲ್ಲ ಎಂದರು.
ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆ ನ್ಯಾಯಾಧೀಶರಂತೆ ಅರಿತು ತೀರ್ಪು ನೀಡಬೇಕು, ನಾನು ಪಕ್ಷದ ಕೆಲಸಕ್ಕಾಗಿ ಮಂತ್ರಿ ಸ್ಥಾನ ತ್ಯಜಿಸಿದ್ದೇನೆ ಆದರೆ ಎಂದಿಗೂ ಜನಸಂಪರ್ಕ ಬಿಟ್ಟಿಲ್ಲ, ಬಸನವನಹಳ್ಳಿ ಕೆರೆಯ ಅಭಿವೃದ್ಧಿ ಅನುದಾನ ಮೀಸಲಿರಿಸಲಾಗಿದ್ದು ಕೋವಿಡ್ ಕಾರಣದಿಂದಾಗಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡ ನಿಲೇನಹಳ್ಳಿ ಜಗನ್ನಾಥ್ ಮಾತನಾಡಿ ಗ್ರಾಮಗಳ ಅಭಿವೃದ್ಧಿಯಲ್ಲಿ ಶಾಸಕರು ಯಾವುದೇ ತಾರತಮ್ಯ ಮಾಡದೇ ಅನುದಾನ ಒದಗಿಸಿದ್ದಾರೆ. ಪಕ್ಷದಲ್ಲಿ ಉತ್ತಮ ಸ್ಥಾನ ಮಾನ ನೀಡುವ ಮೂಲಕ ಸರ್ವರನ್ನು ಒಂದೇ ಎನ್ನುವಂತೆ ಕಾಣುತ್ತಿದ್ದಾರೆ. ಇದೀಗ ೮೦ ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯ್ಕುಮಾರ್, ಗ್ರಾಮಪಂಚಾಯಿತಿ ಅಧ್ಯಕ್ಷೇ ಮೀನಾಜಗದೀಶ್, ಎಪಿಎಂಸಿ ಸದಸ್ಯ ಶಿವಮೂರ್ತಿ, ರವಿ, ನಿವೃತ್ತ ಮುಖ್ಯ ಶಿಕ್ಷಕ ಮಾಳಪ್ಪ, ಗ್ರಾಮಪಂಚಾಯಿತಿ ಸದಸ್ಯರಾದ ದೇವರಾಜ್ನಾಯ್ಕ, ನಾಗರಾಜ್, ಶೋಭಾ, ಸತೀಶ್, ಚಂದ್ರಶೇಖರ್, ನೇತ್ರಾವತಿ, ಲಕ್ಷ್ಮೀ ಇದ್ದರು ಬಸವರಾಜ್ ಸ್ವಾಗತಿಸಿದರು.

























Discussion about this post