ಚಿಕ್ಕಮಗಳೂರು: ವಿಜಯದಶಮಿ ಅಂಗವಾಗಿ ಭಾನುವಾರ ನಗರದ ಲಕ್ಷ್ಮೀಶನಗರ, ಶಂಕರಪುರ ಬಡಾವಣೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಆರ್‌ಎಸ್‌ಎಸ್ ನಗರ ಸಂಚಾಲಕ ಘನಶ್ಯಾಮ್ ಆಳ್ವ ಅವರ ನೇತೃತ್ವದಲ್ಲಿ ಬೆಳಗ್ಗೆ ೮ ಗಂಟೆಗೆ ಲಕ್ಷ್ಮೀಶನಗರ ಸಮುದಾಯ ಭವನ ಆವರಣದಿಂದ ಆರಂಭವಾದ ಪಥ ಸಂಚಲನ ಲಕ್ಷ್ಮೀಶನಗರ, ಶಂಕರಪುರ, ಟಿಪ್ಪುನಗರ ಬಡಾವಣೆಯ ಹಲವು ಬೀದಿಗಳಲ್ಲಿ ಸಂಚರಿಸಿ ಮತ್ತೆ ಸಮುದಾಯ ಭವನದ ಆವರಣದಲ್ಲಿ ಅಂತ್ಯಗೊಂಡಿತು.
ಸುಮಾರು ಅರ್ಧಗಂಟೆ ಸಮಯ ಭಗವಾಧ್ವಜದೊಂದಿಗೆ ಅತ್ಯಂತ ಶಿಸ್ತಿನಿಂದ ನಡೆದ ಪಥ ಸಂಚಲನದಲ್ಲಿ ನಗರದ ಎಲ್ಲಾ ಆರ್‌ಎಸ್‌ಎಸ್ ಶಾಖೆಗಳ ಸುಮಾರು ೧೫೦ ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಎಲ್ಲ ಬೀದಿಗಳಲ್ಲೂ ರಸ್ತೆಯುದ್ಧಕ್ಕೂ ನಿವಾಸಿಗಳು ಭಗವಾಧ್ವಜ ಮತ್ತು ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಸ್ವಾಗತಿಸಿದರು. ಸಾರ್ವಜನಿಕರು ರಸ್ತೆ ಬದಿ ನಿಂತು ಪಥ ಸಂಚಲನ ವೀಕ್ಷಿಸಿದರು.

























Discussion about this post