ಬೆಂಗಳೂರು: ಭಾರತೀಯ ಕ್ರಿಕಟ್‌ನ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರು ವಾಸಿಸುವ ಸೆವಾನಿಯ ಎಂಬ ಕುಗ್ರಾಮವೊಂದಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಇಲ್ಲಿ ತಮ್ಮ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಸಂಸ್ಥೆಯ ಮೂಲಕ ಗ್ರಾಮೀಣ ಮಕ್ಕಳಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಕೈಗೊಂಡಿರುವ ಅವರು ಯೋಜನೆಗಳ ಸ್ಥಿತಿ-ಗತಿಗಳನ್ನು ಪರಿಶೀಲಿಸಲು ಗ್ರಾಮಕ್ಕೆ ಭೇಟಿ ನೀಡಿದ್ದು ತಮ್ಮ ತಂದೆ ರಮೇಶ್ ತೆಂಡೂಲ್ಕರ್‌ರ ನೆನಪಿಗಾಗಿ ಶಾಲೆಯೊಂದನ್ನೂ ನಡೆಸುತ್ತಿದ್ದಾರೆ.
ಸಚಿನ್ ತೆಂಡೂಲ್ಕರ್ ಫೌಂಡೇಶನ್ ಬೆಂಬಲಿತ “ಪರಿವಾರ” ಎನ್ನುವ ಹೆಸರಿನ ಸರಕಾರೇತರ ಸಂಸ್ಥೆಯು ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದ ಮಕ್ಕಳಿಗೆ ಸೇವಾ ಕುಟೀರಗಳನ್ನು ನಡೆಸುತ್ತಿದೆಯೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಕುಟೀರಗಳ ಮೂಲಕ ಮಕ್ಕಳಲ್ಲಿನ ಕ್ರೀಡಾಪ್ರತಿಭೆಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಯುವ ಉಪಾಧ್ಯಾಯರುಗಳೊಂದಿಗೆ ಸಂವಾದ ನಡೆಸಿದ ಸಚಿನ್ ಅಡುಗೆ ಮನೆಗೂ ಭೇಟಿ ನೀಡಿ ಮಕ್ಕಳಿಗಾಗಿ ತಯಾರಿಸಲಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟವನ್ನೂ ಪರಿಶೀಲಿಸಿದರು. ಭೇಟಿ ಕಾರ್ಯಕ್ರಮದ ಅಂಗವಾಗಿ ಸಚಿನ್ ಸಂದಲ್‌ಪುರದಲ್ಲಿ ತಮ್ಮ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿರುವ ಶಾಲೆಯ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸನಿವಾಸ ಶಾಲೆಯು ನಿರ್ಮಾಣವಾದ ನಂತರ ಸುಮಾರು 2300 ಬುಡಕಟ್ಟು ಜನಾಂಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 10 ವರ್ಷಗಳ ವರೆಗೆ ಉಚಿತ ವಿದ್ಯಾದಾನ ಮಾಡುವ ಗುರಿಯನ್ನು ಹೊಂದಿದೆ.
ಸಚಿನ್ ತೆಂಡೂಲ್ಕರ್‌ರ ಸಂಸ್ಥೆಯು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಹಾಗೂ ಕ್ರೀಡಾಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮಗಳಲ್ಲಿ ಗಮನ ಕೇಂದ್ರೀಕರಿಸಿ ಅತ್ಯುತ್ತಮ ಕೆಲಸ ಮಾಡುತ್ತಿದ್ದು ಸಚಿನ್ ಖುದ್ದು ಆಸಕ್ತಿವಹಿಸಿ ಈ ಯೋಜನೆಗಳನ್ನು ಪರಿಶೀಲಿಸಲು ಭೇಟಿ ನೀಡಿರುವುದು ಈ ಕಾರ್ಯದಲ್ಲಿ ಅವರ ನಿಷ್ಠೆಯನ್ನು ಎತ್ತಿ ತೋರಿಸಿದೆ.
Sachin Tendulkar visits a remote village Sewaniya to oversee various children welfare schemes taken up by Sachin Tendulkar Foundation
ಇದನ್ನೂ ಓದಿ: Jan Swaraj yatra : ನವೆಂಬರ್ ೧೮ ರಂದು ಬಿಜೆಪಿ ‘ಜನಸ್ವರಾಜ್’ ಯಾತ್ರೆಗೆ ಚಾಲನೆ
ಇದನ್ನೂ ಓದಿ: World Diabetes Day: ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ
Discussion about this post