ಚಿಕ್ಕಮಗಳೂರು: ಡಿಸೆಂಬರ್ ೧೯ ರಂದು ದತ್ತಜಯಂತಿ ನಡೆಯುವ ಹಿನ್ನೆಲೆ ಅಂದು ದತ್ತಮಾಲಾಧಾರಿಗಳು ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಹೋಗಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಪಸ್ ತಮ್ಮ ಸ್ವಸ್ಥಳಕ್ಕೆ ತೆರಳುವವರೆಗೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ನಗರದಲ್ಲಿ ಅಂಗಡಿ-ಮುಂಗಟ್ಟು ಬಂದ್ ಮಾಡಲು ಸೂಚಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ದತ್ತಮಾಲಾಧಾರಿಗಳು ಶ್ರೀ ಗುರು ಇನಾಂ ದತ್ತಾತ್ರೇಯ ಬಾಬ ಬುಡನ್‌ಗಿರಿ ದರ್ಗಾಕ್ಕೆ ಆಗಮಿಸಿ ನಿರ್ಗಮಿಸುವ ಮಾರ್ಗಗಳಲ್ಲಿ ಬರುವ ಪ್ರಮುಖ ರಸ್ತೆಗಳಾದ ೧) ಮೂಗ್ತಿಹಳ್ಳಿಯಿಂದ ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ (ಕೆ.ಎಂ.ರಸ್ತೆ), ೨) ಐ.ಜಿ.ರಸ್ತೆ, ಆರ್.ಜಿ.ರಸ್ತೆ(ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ರಾಮನಹಳ್ಳಿ ವರೆಗೆ) ಅಲ್ಲಂಪುರ, ಹಾಲೇನಹಳ್ಳಿ, ಸಿರಿ ಕಾಫಿ ಶಾಪ್/ಹೋಂ ಸ್ಟೇ, ಅತ್ತಿಗುಂಡಿ ಮತ್ತು ಮಲ್ಲೇನಹಳ್ಳಿ ಗ್ರಾಮ, ೩) ಕೆ.ಎಂ.ರಸ್ತೆ(ಶೃಂಗಾರ್ ಸರ್ಕಲ್ ನಿಂದ ಎ.ಐ.ಟಿ ಸರ್ಕಲ್ ವರೆಗೆ), ೪) ಬಸವನಹಳ್ಳಿ ಮುಖ್ಯ ರಸ್ತೆ (ಕೆ.ಇ.ಬಿ ಈದ್ಗಾಬಳಿಯಿಂದ ಹನುಮಂತಪ್ಪ ವೃತ್ತದ ವರೆಗೆ) ಮತ್ತು ೫) ಆಲ್ದೂರು ಪಟ್ಟಣ ಹಾಗೂ ಹಾಂದಿಯಿಂದ ಭೂತನಕಾಡು, ವಸ್ತಾರೆವರೆಗೆ ಡಿಸೆಂಬರ್ ೧೯ ರಂದು ಬೆಳಿಗ್ಗೆ ೪ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟು ಮತ್ತು ಹೋಟೆಲ್‌ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
Shop-Front Bandh

























Discussion about this post