ಚಿಕ್ಕಮಗಳೂರು : ನಗರ ವ್ಯಾಪ್ತಿಯ ಅರವಿಂದ ನಗರದ ಚೌಡೇಶ್ವರಿ ದೇವಸ್ಥಾನ ಬಳಿ ಶಿಥಿಲಾವಸ್ಥೆಯಲ್ಲಿದ್ದ ಕಿರು ಸೇತುವೆ ಕುಸಿಯುವ ಹಂತ ತಲುಪಿದ್ದು ಸಾರ್ವಜನಿಕ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ನಿರ್ಮಿಸಿ ಹಲವು ವರ್ಷ ಕಳೆದಿವೆ. ಇದೀಗ ಶಿಥಿಲಾವಸ್ಥೆ ತಲುಪಿದ್ದು ಯಾವುದೇ ಸಂದರ್ಭದಲ್ಲಿಯೂ ಮುರಿದು ಅವಘಡಗಳು ಸಂಭವಿಸುವ ಸನ್ನಿವೇಶ ಎದುರಾಗಲಿದೆ. ಮುಂಜಾಗ್ರತೆಯಾಗಿ ಸೇತುವೆಯನ್ನು ದುರಸ್ಥಿಗೊಳಿಸುವಂತೆೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಲುವೆಗಳಲ್ಲಿ ಕಸ ಕಡ್ಡಿ ಇನ್ನಿತರೆ ತ್ಯಾಜ್ಯಗಳನ್ನು ಜನತೆ ತಂದು ಇಲ್ಲಿಗೆ ಬಿಸಾಡುತ್ತಿದ್ದು ಇದರಿಂದಾಗಿ ವಿಪರೀತ ಮಳೆ ಬಂದಾದ ನೀರು ಸರಾಗವಾಗಿ ಹರಿಯದೇ ಅನೇಕ ಅವಘಡಗಳು ಸಂಭವಿಸುತ್ತವೆ. ಸೇತುವೆ ಬಳಿ ರಾಶಿ ರಾಶಿ ತ್ಯಾಜ್ಯವಿದ್ದು ಅಸಮರ್ಪಕ ನಿರ್ವಹಣೆಯೂ ಇದಕ್ಕೆ ಕಾರಣವಾಗಿದೆ ಅಚಿತಾ ಸಾರ್ವಜನಿಕರು ಆರೋಪಿಸಿದ್ದಾರೆ.

























Discussion about this post