ಚಿಕ್ಕಮಗಳೂರು: ಕನ್ನಡದ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡ ಗೀತೆಗಳ ಗಾಯನ ಆಯೋಜನೆ ಒಳ್ಳೆಯದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ಕಂದಾಯ ಇಲಾಖೆ,ವತಿಯಿಂದ ಕನ್ನಡಕ್ಕಾಗಿ ನಾವು ಘೋಷಣೆಯಡಿ ಆಯೋಜಿಸಿದ್ದ ಕರ್ನಾಟಕ ರಾಜ್ಯೊತ್ಸವ ಅಭಿಯಾನದ ಅಂಗವಾಗಿ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ವೈಯಕ್ತಿಕ ಕಾರಣದಿಂದಾಗಿ ಭಾಷೆ ಪ್ರತ್ಯೇಕಗೊಳ್ಳುತ್ತಿದೆ. ಕನ್ನಡ ಅಸ್ಮಿತೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಮಾತಾಡ್ ಮಾತಾಡ್ ಕನ್ನಡ ಹೆಸರಿನಲ್ಲಿ ಕನ್ನಡ ಗೀತೆ ಗಾಯನ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಕನ್ನಡದ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಲು, ಭಾಷೆಯನ್ನು ಮತ್ತಷ್ಟು ಮೇಲೆತ್ತರಕ್ಕೆ ಕೊಂಡೆಯ್ಯಲು ಇಂತಹ ಕಾರ್ಯಕ್ರಮ ಆಯೋಜನೆ ಒಳ್ಳೆಯದು, ಕನ್ನಡಾಭಿಮಾನವನ್ನು ಬೆಳೆಸಲಿದೆ. ಎಂದು ಹೇಳಿದರು.
ನಗರದ ಎಂ.ಜಿ ರಸ್ತೆಯ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರುಕಟ್ಟೆ ವರ್ತಕರೊಂದಿಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳಲಾಗಿದೆ. ಇದನ್ನು ವಿರೋಧಿಸಿ ಚಳುವಳಿ ನಡೆಸುವ ಅಗತ್ಯವೆನಿದೆ ಎಂದು ಪ್ರಶ್ನಿಸಿದರು.
ದೇವಿರಮ್ಮ ಬೆಟ್ಟಕ್ಕೆ ಹೊರ ಜಿಲ್ಲೆಗಳ ಪ್ರವಾಸಿಗರ ನಿರ್ಬಂದ ಕುರಿತು ಕೋವಿಡ್ ಹಿನ್ನಲೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ರಾಜ್ಯದ ಉಪಚುನಾವಣೆಯಲ್ಲಿ ೨ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ ’ಬಾರಿಸು ಕನ್ನಡ ಡಿಂಡಿಮವ’ ಡಾ ಕೆ.ಎಸ್. ನಿಸಾರ್ ಅಹಮ್ಮದ್ರವರ ’ಜೋಗದ ಸಿರಿ ಬೆಳಕಿನಲಿ’ ಹಾಗೂ ಹಂಸಲೇಖರವರ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.’ ಈ ಮೂರು ಹಾಡುಗಳನ್ನು ಶುಶ್ರಾವ್ಯವಾಗಿ ಹಾಡುವ ಮೂಲಕ ’ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಧಿಕಾರಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಕನ್ನಡ ಗಾಯನದಲ್ಲಿ ಭಾಗವಹಿಸಿ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. ಗೀತಗಾಯನ ಕಾರ್ಯಕ್ರಮವನ್ನು ನಾದಚೈತನ್ಯ ತಂಡದ ಶ್ರೀಮತಿ ರೇಖಾ ಪ್ರೇಮ್ಕುಮಾರ್ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಕಾಂತರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Road Works: ಎಸ್.ಬಿದರೆ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಲಕ್ಷದ ರಸ್ತೆ ಕಾಮಗಾರಿಗೆ ಸಿ.ಟಿ.ರವಿ ಉದ್ಘಾಟನೆ
ಇದನ್ನೂ ಓದಿ:Resolve: ಸಮಾಜದಲ್ಲಿ ಜಾತೀಯತೆ ತೊಡೆಯುವ ಸಂಕಲ್ಪ ಮಾಡಬೇಕಿದೆ

























Discussion about this post