ಚಿಕ್ಕಮಗಳೂರು: ಹುಲಿಚರ್ಮ ಮಾರಾಟಕ್ಕೆ ಮುಂದಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರಿನಿಂದ ಜಾವಗಲ್‌ಗೆ ಸಾಗುವ ನರಸೀಪುರ ಜಕ್ಷನ್ ಬಳಿ ದಾಳಿ ನಡೆಸಿದ ಸಿಬ್ಬಂದಿಗಳು ಹುಲಿಚರ್ಮ ಸಾಗಣೆ ಮಾಡುತ್ತಿದ್ದ ೩ಮಂದಿ ಆರೋಪಿಗಳು ಮತ್ತು ಹುಲಿಚರ್ಮವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇಲೂರು ತಾಲ್ಲೂಕಿನ ಬೀರೇಗೌಡ, ರಂಗಸ್ವಾಮಿ, ನಾಗರಾಜ್ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಮಾರಾಟ ಉದ್ದೇಶದಿಂದ ಹುಲಿಚರ್ಮವನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾದ ಆರ್.ಶೋಭಾ, ಸಿಬ್ಬಂದಿಗಳಾದ ದಿವಾಕರ, ದಿನೇಶ್, ದಿಲೀಪ, ಹಾಲೇಶ್, ದೇವರಾಜ, ಹೇಮಾವತಿ ಚಾಲಕ ತಿಮ್ಮಶೆಟ್ಟಿ ಇದ್ದರು.
Tiger skin

























Discussion about this post