ನವದೆಹಲಿ: ಆಯುರ್ವೇದಿಯ ಮೌಲ್ಯವುಳ್ಳ, ಭಾರತೀಯರ ಅಡುಗೆ ಮನೆಯಲ್ಲಿ ಕಾಯಂ ಸ್ಥಾನ ಪಡೆದಿರುವ ಅರಿಷಿಣದ ಔಷಧೀಯ ಗುಣವನ್ನು ಅಮೆರಿಕ ಕೂಡ ಒಪ್ಪಿಕೊಂಡು ಶಿಫಾರಸು ಮಾಡಿದೆ.
ಮಕ್ಕಳು ಬಿದ್ದು ಗಾಯಮಾಡಿಕೊಂಡಾಗ ಮನೆಯ ಮದ್ದು ಅರಿಷಿಣ ಬಹಳ ಉಪಯೋಗಕಾರಿ ಜತೆಗೆ ಆಹಾರವಾಗಿ ಇದನ್ನು ತೆಗೆದುಕೊಳ್ಳುವುದರಿಂದ ಶೀತಪ್ರಕೋಪ ಕಡಿಮೆ ಆಗುತ್ತದೆ ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ನ ನಿಕೋಲ್ ಹಾಪ್ಸೆಗರ್ ಹೇಳಿದ್ದಾರೆ. ಅರಿಷಿಣದಿಂದಾಗುವ ಏಳು ಉಪಯೋಗಗಳ ಪಟ್ಟಿ ನೀಡಿದ್ದಾರೆ.
1. ಸುಟ್ಟಗಾಯಕ್ಕೆ ತೆಳುವಾಗಿ ಲೇಪಿಸುವುದರಿಂದ ನೋವು ಶಮನ.
2. 90 ಮಿಲಿಗ್ರಾಂ ಅರಿಷಿಣದ ಪುಡಿಯನ್ನು ಜೇನುತುಪ್ಪದಲ್ಲಿ ಅಥವಾ ಬಿಸಿನೀರಿನಲ್ಲಿ ದಿನಕ್ಕೆ ಎರಡು ಸಾರಿಯಂತೆ ಸತತ 18 ತಿಂಗಳು ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮಿದುಳಿನ ಉರಿಯುತ ಸಮಸ್ಯೆ ಕಡಿಮೆಯಾಗಿ ಅಲ್ಜೈಮೆರ್ ರೀತಿಯ ಮೆರೆವಿನ ಕಾಯಿಲೆಗಳು ದೂರವಾಗುತ್ತವೆ.
3. ಅರಿಷಿಣಕ್ಕೆ ಚೀನಾದ ಸಾಂಪ್ರಾದಯಿಕ ಚಿಕಿತ್ಸೆ ಮತ್ತು ಭಾರತದ ಆಯುರ್ವೇದಲ್ಲಿ ಮಹತ್ವದ ಸ್ಥಾನ ಇದೆ. ಗಾಯವಾದಾಗ ಇದನ್ನು ಹಚ್ಚಿದರೆ ರಕ್ತ ಸೋರಿಕೆ ಶೀಘ್ರ ನಿಲ್ಲುತ್ತದೆ ಮತ್ತು ನಂಜು ನಿವಾರಕ. ಮೂಳೆಯ ಸಂಧಿವಾತಕ್ಕೆ ಅರಿಷಿಣ ಪರಿಣಾಮಕಾರಿ.
4. ಅರಿಷಿಣದಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಕೋಶಗಳಲ್ಲಿ ಪ್ರತಿಬಂಧನಾತ್ಮಕ ಆಮ್ಲಜನಕದ ಪ್ರಭೇದಗಳನ್ನು ಸೃಜಿಸುವುದರಿಂದ ಕ್ಯಾನ್ಸರ್ ತಗುಲುವ ಸಂಭವವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸುತ್ತದೆ. ಇದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಪೀಡನೆಯ ಸಂಭವ ಶೇ. 40ರಷ್ಟು ತಗ್ಗುತ್ತದೆ.
5. ಎದೆಯುರಿ ಶಮನ ಮಾಡುವ ಅರಿಷಣದಲ್ಲಿ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸುವ ಗುಣ ಕೂಡ ಇದೆ. ನಾಲ್ಕು ಗ್ರಾಂ ಅರಿಷಿಣವನ್ನು ಪ್ರತಿದಿನ ಸೇವಿಸುವುದರಿಂದ ಹೃದಯಾಘಾತದ ಸಾಧ್ಯತೆಯನ್ನು ಶೇ. 65ರಷ್ಟು ತಡೆಬಹುದು ಎಂದು ಅಧ್ಯಯನವೊಂದು ಹೇಳಿದೆ.
6. ಕೊಬ್ಬನ್ನು ನಿಯಂತ್ರಿಸಲು ಅರಿಷಿಣ ಸಹಕಾರಿಯಾಗಿದೆ. ಇದರಿಂದ ಹೃದ್ರೋಗಗಳನ್ನು ದೂರ ಇರಿಸಬಹುದು.
7. ಖಿನ್ನತೆಯನ್ನು ದೂರ ಮಾಡುವ ಗುಣ ಅರಿಷಿಣಕ್ಕೆ ಇದೆ. ಮಿದುಳಿನಲ್ಲಿ ನ್ಯೂರೋಟ್ರಾಫಿಕ್ ಅಂಶವನ್ನು ನಿಯಂತ್ರಿಸುವ ಪೋಷಕಾಂಶ ಅರಿಷಿಣದಲ್ಲಿ ಇದೆ. ಇದರಿಂದ ಮನುಷ್ಯ ಖಿನ್ನತೆಗೆ ಒಳಗಾಗುವ ಪ್ರಮಾಣ ತಗ್ಗುತ್ತದೆ.
ನಿತ್ಯ 500 ಗ್ರಾಂ ಅರಿಷಿಣವನ್ನು ಆಹಾರದಲ್ಲಿ ಸ್ವೀಕರಿಸುವುದರಿಂದ ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಹೆಚ್ಚು ಉತ್ತಮವಾಗುತ್ತದೆ.
Seven Health Benefits Of Turmeric
ಇದನ್ನು ಓದಿ: Diabetes: ಹಬ್ಬದ ಸಾಲಿನಲ್ಲಿ ಮಧುಮೇಹ ನಿಯಂತ್ರಣಕ್ಕೆ ಟಿಪ್ಸ್
ಇದನ್ನೂ ಓದಿ: Ashwagandha: ಹಾಲಿನೊಂದಿಗೆ ಅಶ್ವಗಂಧ – ಆರೋಗ್ಯಕರ ಲಾಭಗಳು
Discussion about this post