ಚಿಕ್ಕಮಗಳೂರು : ನಗರದಲ್ಲಿ ಕೈಗೊಂಡಿರುವ ಅಮೃತ್ ಕುಡಿಯುವ ನೀರು ಮತ್ತು ಒಳಚರಂಡಿ(ಯುಜಿಡಿ) ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ಪಕ್ಷದ ವತಿಯಿಂದ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ದೇವರಾಜ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ೯೮ ಕೋಟಿ ರೂಗಳ ಅನುದಾನದಲ್ಲಿ ನಡೆಸಲಾಗಿರುವ ಅಮೃತ್ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳು ವರ್ಷಗಳೇ ಕಳೆದರು ಪೂರ್ಣಗೊಂಡಿಲ್ಲ ಆದರೂ ಗುತ್ತಿಗೆದಾರನಿಗೆ ಸಂಪೂರ್ಣವಾಗಿ ಹಣಬಿಡುಗಡೆ ಮಾಡಲಾಗಿದೆ ಇದರಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಪೂರ್ಣಗೊಳ್ಳದೇ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಅವ್ಯವಹಾರ ನಡೆದಿರುವ ಶಂಕೆ ಇದ್ದು ಪಕ್ಷದ ವತಿಯಿಂದ ಸಮಗ್ರ ತನಿಖೆ ಮಾಡುವಂತೆ ಹೈಕೋಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು. ಗೋಲ್ಮಾಲ್ನಲ್ಲಿ ಭಾಗಿಯಾಗಿರುವ ಇಂಜಿನಿಯರ್ ಹಾಗೂ ಗುತ್ತಿಗೆದಾರನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಅತೀವೃಷ್ಟಿಯಿಂದಾಗಿ ಮಲೆನಾಡಿನಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಹಾನಿ ಸಮೀಕ್ಷೆ ನಡೆಸಿ ಫಸಲ್ ಭೀಮಾ ಯೋಜನಾ ವ್ಯಾಪ್ತಿಗೆ ಕಾಫಿಯನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕೋವಿಡ್ ಲಾಕ್ಡೌನ್, ಕಾರ್ಮಿಕರ ಕೊರತೆ, ಬೆಳೆಹಾನಿ, ಸಾಲಭಾದೆಯಿಂದಾಗಿ ಕಾಫಿ ಸೇರಿದಂತೆ ವಿವಿಧ ರೈತಾಪಿ ವರ್ಗದ ಜನರು ಕಂಗಲಾಗಿದ್ದು ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹಮದ್, ಜೆಡಿಎಸ್ ಮುಖಂಡ ಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.

























Discussion about this post