ನವದೆಹಲಿ: 15 ವರ್ಷ ಮೇಲ್ಪಟ್ಟವರಿಗೆ ಜನವರಿಯಿಂದ ಕೋವಿಡ್–19 ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಈ ಬಗ್ಗೆ ಕೆಲವು ತಜ್ಞರ ಅಭಿಪ್ರಾಯ ಭಿನ್ನವಾಗಿದೆ.
ಸರ್ಕಾರದ ಈ ನಿರ್ಧಾರ ವೈಜ್ಞಾನಿಕವಾಗಿಲ್ಲ. ಇದರಿಂದ ಬಹಳ ಪ್ರಯೋಜನವಾಗದು ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಸಂಜಯ್ ಕೆ. ರಾಯ್ ಅಭಿಪ್ರಾಯಪಟ್ಟಿದ್ದಾರೆ.
15ರಿಂದ 18 ವರ್ಷದವರಿಗೆ ಲಸಿಕೆ ನೀಡುವ ನಿರ್ಧಾರ ಪ್ರಕಟಿರುವ ಮುನ್ನ ಈಗಾಗಲೇ ಮಕ್ಕಳಿಗೆ ಲಸಿಕೆ ನೀಡುತ್ತಿರುವ ರಾಷ್ಟ್ರಗಳಿಂದ ದತ್ತಾಂಶಗಳನ್ನು ತರಿಸಿ ವಿಶ್ಲೇಷಣೆಗೆ ಒಳಪಡಿಸಬೇಕಿತ್ತು. ಎಲ್ಲ ರೀತಿಯ ವಿಶ್ಲೇಷಣೆಗಳು ನಡೆದ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಅವರ ದೊಡ್ಡ ಅಭಿಮಾನಿ ಹೌದು. ಆದರೆ 15 –18 ವರ್ಷವಯಸ್ಸಿನವರಿಗೆ ಕೋವಿಡ್ ಲಸಿಕೆ ನೀಡುವ ವೈಜ್ಞಾನಿಕವಲ್ಲದ ನಿರ್ಧಾರದಿಂದ ಸಂಪೂರ್ಣ ಹತಾಶೆಯಾಗಿದೆ ಎಂದು ರಾಯ್ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಹೆಣ್ಣುಮಗಳು ಮದುವೆಯಾಗಲು ಸ್ವತಂತ್ರಳೆಂದ ಹೈಕೋರ್ಟ್
ನಾಗಾಲ್ಯಾಂಡ್ನಲ್ಲಿ ಆಫ್ಸ್ಪಾ ವಾಪಸಾತಿ: ಐವರು ಸದಸ್ಯರ ಸಮಿತಿ ರಚನೆ
ಬಂಡುಕೋರರೆಂದು ತಪ್ಪು ತಿಳಿದು 13 ನಾಗರಿಕರನ್ನು ಕೊಂದ ಸೇನೆ
ಭಯೋತ್ಪಾದನೆ ನಿಗ್ರಹಕ್ಕೆ ಏನು ಮಾಡಬೇಕು: ಅಧಿಕಾರಿಗಳಿಗೆ ಅಮಿತ್ ಶಾ ಪ್ರಶ್ನೆ
Discussion about this post