ಚಿಕ್ಕಮಗಳೂರು: ಭಾರತವು 100 ಕೋಟಿ ಲಸಿಕೆಯನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ನಗರದ ಬೇಲೂರು ರಸ್ತೆ ಜೂನಿಯರ್ ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳಿಂದ ೧೦೦ ಸಂಖ್ಯೆ ರಚಿಸುವ ಮೂಲಕ ಭಾರತೀಯ ಜನತಾ ಪಕ್ಷ ಯುವಮೋರ್ಚಾ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತಹ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದರು ಎಂದು ಹೇಳಿದರು.
ದೇಶದ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ದೇಶವು ನೂರು ಕೋಟಿ ಲಸಿಕೆಹಾಕುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ ಹರಿವಿನಗಂಡಿ ಮಾತನಾಡಿ, ವಿಶ್ವ ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿಯವರು ದೇಶದಲ್ಲಿ ಹಂತಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಮಾಡಿದ್ದಾರೆ. ವಿಶ್ವದಲ್ಲೇ ಮೊದಲ ನೂರು ಕೋಟಿ ಲಸಿಕೆಯನ್ನು ನೀಡಿದ ದೇಶ ನಮ್ಮ ಭಾರತವಾಗಿದೆ ಎಂದು ಹೇಳಿದರು.
ನೂರುಕೋಟಿ ಲಸಿಕೆ ನೀಡಲು ವೈದ್ಯರು, ಶುಶ್ರೂಷಕರು, ಆಶಾಕಾರ್ಯಕರ್ತೆಯರು ಹಾಗೂ ಜನಪ್ರತಿನಿಧಿಗಳು ಮತ್ತು ಸ್ವಯಂಸೇವಕರು ಹಾಗೂ ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ. ಕೋವಿಡ್ ವಿರುದ್ಧ ಹೋರಾಡಿ ಕೊರೊನಾ ಸೋಂಕನ್ನು ಓಡಿಸುವಲ್ಲಿ ನಾವೆಲ್ಲರೂ ಸಫಲರಾಗಿದ್ದೇವೆ ಎಂದರು.
ಪ್ರಧಾನಮಂತ್ರಿ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಕನ್ಯಾ ಯೋಜನೆ ಮುಖ್ಯವಾಗಿದೆ. ಈ ಯೋಜನೆಯಡಿ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು ೨ ಸಾವಿರ ರೂ. ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಪಿ.ಎಂ. ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು ವಯಸ್ಸಿನ ಮಿತಿ ೫ ರಿಂದ ೧೮ ವಷ೯ದೊಳಗಿನವರ ಪಾಲಕರು ಅರ್ಜಿಸಲ್ಲಿಸಬಹುದಾಗಿದ್ದು, ಆಧಾರ ಕಾರ್ಡ್, ಬ್ಯಾಂಕ್ ಪುಸ್ತಕ, ಮಗುವಿನ ೨ ಭಾವಚಿತ್ರ ಬೇಕು ಹಾಗೂ ತಂದೆ ತಾಯಿಯ ವಾಷಿ೯ಕ ವರಮಾನ ೨ ಲಕ್ಷ ರೂ ದಾಟಿರಬಾರದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್‌ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಧನಿಕ್ ಮೂಡಿಗೆರೆ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಯತೀಶ್ ಇಂದಾವರ. ಜಿಲ್ಲಾ ಯುವ ಮೋರ್ಚಾದ ಸಚಿನ್, ಸಂಜು ಉಂಡೆದಾಸರಹಳ್ಳಿ, ಕೌಶಿಕ್, ಕಾಂಚನ್, ಜಿಲ್ಲಾ ಮಾಧ್ಯಮ ಪ್ರಮುಖ್ ಸುಧೀರ್ ರಾಮನಹಳ್ಳಿ, ನಗರ ಯುವ ಮೋರ್ಚಾದ ಮಧು, ಪ್ರಶಾಂತ್ ಗೌತಮ್, ಸೃಜನ್, ರಂಜನ್, ಅಂಬಳೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಜೀವನ, ಆಶ್ರಯ ಸಮಿತಿ ಸದಸ್ಯರಾಜೇಶ್ ಕಲ್ಲುದೊಡ್ಡಿ, ಮಂಡಲ ಉಪಾಧ್ಯಕ್ಷ ದಿನೇಶ್ ಕೋಟೆ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಜಯರಾಮ್ ಇದ್ದರು
RSS: ಆರ್.ಎಸ್.ಎಸ್.ನಿಂದ ಆಕರ್ಷಕ ಪಥ ಸಂಚಲನ

























Discussion about this post