ಚಿಕ್ಕಮಗಳೂರು: ವಾಹನ ರಿಪೇರಿ ಮಾಡುವಾಗ ಜಾಕ್ಸ್ಲಿಪ್ ಆಗಿ ತಲೆಗೆ ಗಂಭೀರವಾಗಿ ನಾಲ್ಕು ದಿನದಿಂದ ಕೋಮಾದಲ್ಲಿದ್ದ ಜಿಲ್ಲೆಯ ಕಡೂರು ತಾಲೂಕಿನ ಬಿಳವಾಳ ಗ್ರಾಮದ ಯೋಧ ಜಮ್ಮುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ಯೋಧನನ್ನು ೪೫ ವರ್ಷದ ಬಿ.ಕೆ.ಶೇಷಪ್ಪ ಎಂದು ಗುರುತಿಸಲಾಗಿದೆ.
ಮೂಲತಃ ಕಡೂರು ತಾಲೂಕಿನ ಶೇಷಪ್ಪ ಕಳೆದ ೨೦ ವರ್ಷಗಳಿಂದ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್)ಯಲ್ಲಿ ಮ್ಯಾಕನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶೇಷಪ್ಪ ನಾಲ್ಕು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗ ವಾಹನ ರಿಪೇರಿ ಮಾಡುವ ವೇಳೆ ಜಾಕ್ ಸ್ಲಿಪ್ ಆಗಿ ವಾಹನ ಮೇಲೆ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿ ಕೋಮಾಗೆ ಜಾರಿದ್ದರು.
ಅವರಿಗೆ ವೈಷ್ಣೋದೇವಿ ಬಳಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನದಿಂದ ಕೋಮದಲ್ಲಿದ್ದ ಶೇಷಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಶೇಷಪ್ಪ ಅವರಿಗೆ ಅನಾಹುತವಾದ ವಿಷಯ ತಿಳಿದ ಕೂಡಲೇ ಬಿಳವಾಲದಿಂದ ಅವರ ಹಿರಿಯ ಸಹೋದರ ಪ್ರಕಾಶ್ ಜಮ್ಮುವಿಗೆ ತೆರಳಿದ್ದರು.
ಶೇಷಪ್ಪ ಅವರ ಚೇತರಿಕೆಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. ಯೋಧನ ನಿಧನದ ಸುದ್ದಿಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಶೇಷಪ್ಪ ಅವರ ಪಾರ್ಥಿವ ಶರೀರ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ. ಕಡೂರು ತಾಲ್ಲೂಕಿನ ಬಿಳವಾಲ ಗ್ರಾಮದ ಕೇಶವಪ್ಪ ಮತ್ತು ಮಾಳಮ್ಮ ದಂಪತಿ ೨ನೇ ಮಗ ಶೇಷಪ್ಪ. ಅವರಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದಾರೆ.
Kadur taluk warrior dies in Jammu
ಇದನ್ನೂ ಓದಿ: Pilgrim dies: ಬೈಕ್ ಮೇಲೆ ಮರಬಿದ್ದು ಯಾತ್ರಾರ್ಥಿ ಸಾವು
ಇದನ್ನೂ ಓದಿ: e Paper – November 8, 2021

























Discussion about this post