ಚಿಕ್ಕಮಗಳೂರು : ಸ್ಥಳೀಯ ಗ್ರಾಮ ಪಂಚಾಯಿತಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿ ತಾಣಗಳಲ್ಲಿ ತ್ಯಾಜ್ಯಗಳನ್ನು ಹಾಕಿದರೆ ದಂಡದೊಂದಿಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಜಿ.ಪ್ರಭು ಹೇಳಿದರು.
ಅವರು ಜಿಲ್ಲಾ ಪಂಚಾಯಿತಿಯ ಆಡಳಿತ ಕಛೇರಿಯಲ್ಲಿ ಸೋಮವಾರ ಗಿರಿ ಸ್ವಚ್ಚತಾ ಅಭಿಯಾನದ ಕಾರ್ಯಗಳ ಕುರಿತು ಮಾತನಾಡಿ ಜಿಲ್ಲೆಯು ನೈಸರ್ಗಿಕವಾಗಿ ಅತ್ಯಂತ ಸುಂದರವಾಗಿದ್ದು ಹಲವು ಪ್ರವಾಸಿ ತಾಣಗಳು, ಗಿರಿ ಶ್ರೇಣಿಗಳನ್ನು ಒಳಗೊಂಡಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಗಿರಿ ಶ್ರೇಣಿಯಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಕೆಲವು ಪ್ರವಾಸಿಗರು ಪ್ಲಾಸ್ಟಿಕ್, ಇತರೆ ಕಸದ ತ್ಯಾಜ್ಯಗಳನ್ನು ಹಾಕಿ ಗಿರಿಯು ಕಸದ ತೊಟ್ಟಿಯಾಗಿಸಿದ್ದಾರೆ ಇದನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಹೇಳಿದರು.
ಗಿರಿ ಭಾಗದಲ್ಲಿರುವ ಹಿರೇಕೊಳಲೆ, ಅಲ್ಲಂಪುರ, ಐಡಿಪೀಠ, ಮಲ್ಲೇನಳ್ಳಿ, ತೊಗರಿಅಂಕಲ್, ಒಟ್ಟು ೬ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಪಂಚಾಯಿತಿಯಿಂದ ಗಿರಿಯನ್ನು ಸ್ವಚ್ಚವಾಗಿ ಕಾಪಾಡುವಂತೆ ಆದೇಶಿಸಲಾಗಿದೆ. ಎಲ್ಲಾ ಪ್ರವಾಸಿ ತಾಣಗಳಲ್ಲಿನ ವಾಣಿಜ್ಯ ಚಟುವಟಿಕೆಗಳು ನಡೆಯುವಂತಹ ಅಂಗಡಿ, ಹೋಂಸ್ಟೇ, ರೆಸಾರ್ಟ್, ಮುಂತಾದ ಕಡೆಗಳಲ್ಲಿ ಏಕಾ ರೂಪವಾಗಿ ನಿರ್ಧಿಷ್ಟ ಪಡಿಸಿರುವಂತಹ ಮಾರ್ಗಸೂಚಿಗಳನ್ನು ಹೊರಡಿಸಿ, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಗಳ ಜೊತೆಗೆ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಗಿರಿ ಶ್ರೇಣಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು ಪಂಚಾಯಿತಿಗಳಿಂದ ಬರುವಂತಹ ವಾಹನ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರವಾಸಿ ತಾಣಗಳಲ್ಲಿ ನಿರ್ಧಿಷ್ಟವಾಗಿ ಯಾವ-ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್, ಕಸದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಂಡದೊಂದಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸ್ವಚ್ಚಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗಿರಿ ಶ್ರೇಣಿಯಲ್ಲಿರುವ ತಾಣಗಳಲ್ಲಿ ಶೌಚಾಲಯಗಳಿಲ್ಲವೋ ಅಂತಹ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದ ಅವರು ಗಿರಿ ಶ್ರೇಣಿಗೆ ಬರುವಂತಹ ಪ್ರವಾಸಿಗರು ಸ್ವಚ್ಚತೆಗೆ ಹೆಚ್ಚು ಆಧ್ಯತೆ ನೀಡಬೇಕು ಎಂದರು.
ಇದನ್ನೂ ಓದಿ: e Paper – October 26, 2021
ಇದನ್ನೂ ಓದಿ: LKG: ಎಲ್‌ಕೆಜಿ, ಯುಕೆಜಿ ಆರಂಭದ ಕುರಿತು ಇನ್ನೂ ಆಲೋಚನೆ ಮಾಡಿಲ್ಲ

























Discussion about this post