ಚಿಕ್ಕಮಗಳೂರು: ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿ ಎಂ.ಕೆ.ಪ್ರಾಣೇಶ್ 350 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗ್ರಾ.ಪಂ. ಹಾಗೂ ಇತರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತರೇ ಹೆಚ್ಚು ಆಯ್ಕೆಯಾಗಿ ಬಂದಿದ್ದಾರೆ. ಕಾಂಗ್ರೆಸಿಗಿಂತಲೂ ನಾವು ೬೮೦ ಸ್ಥಾನಗಳನ್ನು ಹೆಚ್ಚು ಹೊಂದಿದ್ದೇವೆ. ಜೆಡಿಎಸ್ ಸಹ ನಮ್ಮನ್ನೇ ಬೆಂಬಲಿಸಲಿದೆ ಎಂದು ತಿಳಿಸಿದರು.
ಪ್ರಾಣೇಶ್ ಅವರು ಎಂದಿಗೂ ರೋಲ್ಕಾಲ್ ರಾಜಕಾರಣಿ ಅಗಲಿಲ್ಲ. ಯಾವುದೇ ಸಂದರ್ಭದಲ್ಲಿ ಕಾಲ್ ರಿಸೀವ್ ಮಾಡುವ ರಾಜಕಾರಣಿ ಆಗಿದ್ದಾರೆ. ಈಗ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಿಗಿರುವ ಆಯ್ಕೆ ಅಭಿವೃದ್ಧಿಗೆ ಅಡ್ಡಗಾಲು ಆಗದಿರುವ ಮತ್ತು ಗೌರವ ಉಳಿಸಿಕೊಂಡು ರಾಜಕಾರಣ ಮಾಡಿರುವ ಪ್ರಾಣೇಶ್ ಅವರನ್ನು ಆಯ್ಕೆ ಮಾಡುತ್ತಾರೆ ಎಂದರು.
BJP’s Abyarthi Mk Pranesh wins by over 350 votes
Discussion about this post