ಚಿಕ್ಕಮಗಳೂರು: ನಗರದ ಬಸವನಹಳ್ಳಿಯಲ್ಲಿ ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೊಬ್ಬ ಪೋಲೀಸರ ಅತಿಥಿಯಾಗಿದ್ದಾನೆ.
ನಗರದ ತೆರದಾಳ್ ಏಜೆನ್ಸಿಯ ಸಿಲಿಂಡರ್ ಗಳನ್ನು ಮರಳಿಸದೆ ತನ್ನ ಗೆಳೆಯನ ಮನೆಯಲ್ಲೇ ಅಕ್ರಮವಾಗಿ ಇರಿಸಿದ್ದ. ಸಿಲಿಂಡರ್ ಅನ್ನು ಒಳಗೊಳಗೆ ಡೀಲ್ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಪೋಲೀಸರು ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಒಟ್ಟು ೭೫ ಸಾವಿರ ಬೆಲೆಯ ೨೮ ಖಾಲಿ ಇರುವ ಸಿಲಿಂಡರ್ ಗಳನ್ನು ಗ್ರಾಹಕರಿಂದ ಪಡೆದು ಗೆಳೆಯನ ಮನೆಯಲ್ಲಿಟ್ಟಿದ್ದ. ೨೮ ಸಿಲಿಂಡರ್ ಗಳು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಏಜೆನ್ಸಿಗೆ ಮರಳಿಸಬೇಕಿದ್ದ ರೂ. ೫೮,೧೮೫/- ನಗದು ಹಣವನ್ನು ಬಸವನಹಳ್ಳ ಪೋಲೀಸರು ಸೀಸ್ ಮಾಡಿದ್ದಾರೆ.

























Discussion about this post