ಕನ್ನಡನಾಡಿ ಸುದ್ದಿ ಜಾಲ: ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಪ್ರದೇಶಗಳಲ್ಲಿ ಸಾಕಷ್ಟು ರೈತರು ಮನೆ, ಫಸಲು ಕಳೆದುಕೊಂಡು ಕಂಗಾಲಾಗಿದ್ದರು. ಈಗ ಸರ್ಕಾರದ ಪಟ್ಟಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಿನ ಪ್ರದೇಶಗಳು ಸೇರಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸರ್ಕಾರದ ಕಣ್ಣು ತೆರೆಸಲು ವಿಧಾನ ಸೌಧ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಜಿಲ್ಲೆಯ ಸ್ಥಿತಿ ಮನವರಿಕೆ ಮಾಡಿದ್ದರು.
ಜಿಲ್ಲೆಯ ಭಾರಿ ಮಳೆಯಿಂದ. ನೂರಾರು ಮನೆಗಳು, ಸೇತುವೆಗಳು,ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದ ಈ ಸಂಧರ್ಭದಲ್ಲಿ ಇಂದು ಕುಮಾರಸ್ವಾಮಿ ಅವರ ಧರಣಿಯಿಮದ ಸರ್ಕಾರ ಎಚ್ಚೆತ್ತುಕೊಂಡು ಪರಿಶೀಲಿಸಿ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಕೊಪ್ಪ, ಶೃಂಗೇರಿ ಸೇರಿದೆ.
ಚಿಕ್ಕಮಗಳೂರು ಜಿಲ್ಲೆಯ ಅತವೃಷ್ಟಿ ಬಾಧಿತ ಪ್ರದೇಶಗಳಲ್ಲಿನ ಪಟ್ಟಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ, ಶೃಂಗೇರಿ ಆದೇಶದ ಪಟ್ಟಿಯಲ್ಲಿ ಏಳನೇ ಕ್ರಮಸಂಖ್ಯೆಯ ೧೩-೧೮ ನಂಬರ್ ನಲ್ಲಿ ತಾಲ್ಲೂಕುಗಳಿವೆ.
ಇದರಿಂದಾಗಿ ಜಿಲ್ಲೆಯ ಸಚಿವರು, ಶಾಸಕರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಓಣಿ ತೋಟ ರತ್ನಾಕರ್ ಶ್ಲಾಘನೆ ಮಾಡಿದ್ದಾರೆ.

























Discussion about this post