ಚಿಕ್ಕಮಗಳೂರು: ಮಾನಸಿಕವಾಗಿ ನೊಂದು ತಾಯಿ ಮತ್ತು ಮಗನೊಂದಿಗೆ ಮಂಜು ಮತ್ತು ನೀತು ಕಾರ್ ಸಮೇತ ಭದ್ರಾ ನಾಲೆಗೆ ದುಮುಕಿದ್ದರು. ಅದಕ್ಕೂ ಮೊದಲು ಆತ್ಮೀಯರಿಗೆ ಸಂದೇಶ ರವಾನಿಸಿದ್ದರು. ಬದುಕುಳಿದ ತಾಯಿ ನೀತು(೩೫) ಮಗ ಧ್ಯಾನ್ (೧೩) ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ನಾಪತ್ತೆಯಾಗಿದ್ದ ತಾಯಿ ಸುನಂದಮ್ಮ, ಮಗ ಮಂಜುವಿನ ಶವ ಪತ್ತೆಯಾಗಿದೆ. ಸಂಜೆಯವರೆಗೆ ಸತತ ಕಾರ್ಯಾಚರಣೆ ನಡೆಸಿ ಕ್ರೈನ್ ಮೂಲಕ ಕಾರ್ ಮೇಲಕ್ಕೆ ತರಲಾಯಿತು. ಸುನಂದಮ್ಮನ ಶವ ಕಾರ್ ನೊಳಗೆ ಸಿಕ್ಕಿಕೊಂಡಿತ್ತು. ಮಗನ ಶವ ಚನ್ನಗಿರಿ ತಾಲೂಕಿನ ಅಂಚೆ ಸಿದ್ದರಹಳ್ಳಿಯಲ್ಲಿ ದೊರಕಿದೆ.
ಸುಮಾರು ೧೨ ಗಂಟೆ ಕಾರ್ಯಾಚರಣೆ ನಡೆಸಿ ಕಾರ್ ತೆಗೆಯಲಾಯ್ತು. ೮-೧೦ ಈಜು ಪಟುಗಳು ಶವಕ್ಕಾಗಿ ಹುಡುಕಾಟ ನಡೆಸಿದ್ದರು. ನೀರಿನ ವೇಗ ಹೆಚ್ಚಿದ್ದ ಕಾರಣ ಆಳಕ್ಕೆ ಹೋಗಲು ಆಗಿರಲಿಲ್ಲ. ಘಟನಾ ಸ್ಥಳಕ್ಕೆ ಭಾರಿ ಸಂಖ್ಯೆಯ ಜನರು ಜಮಾಯಿಸಿದ್ದರು. ಶವಗಳನ್ನು ಹೊರತೆಗೆದಾಗ ಕುಟುಂಬದ ಸದಸ್ಯರು ನೋವು ತೋಡಿಕೊಂಡರು.

























Discussion about this post