ಚಿಕ್ಕಮಗಳೂರು: ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಬಿಜುವಳಿ ಗ್ರಾಮದ ಸ್ಮಶಾಣದ ಹತ್ತಿರ ಇನ್ನೋವಾ ಕಾರ್ ಹಿಂಭಾಗದ ಸೀಟು ಮಡಚಿ, ಹೋರಿಯೊಂದನ್ನು ತುರುಕಿ ಅದರ ಮಾಂಸ ಸಾಗಾಣಿಕೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಮೂಡಿಗೆರೆ ಪೊಲೀಸ್ ಠಾಣಾ ಪಿಎಸ್ ಐ ರವಿ ತಮ್ಮ ತಂಡದೊಂಡಿಗೆ ಗಸ್ತಿನಲ್ಲಿದ್ದಾಗ ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪೊಲೀಸರು ಕೂಡಲೇ ಕಾರ್ಯತತ್ಪರರಾಗಿ ಆರೋಪಿಗಳಾದ ನಿಜಾಮುದ್ದಿನ್ ಮಹಮ್ಮದ್ (೨೩), ಆಶಿಕ್ ಪಾಷಾ ಬಿನ್ ಸೈಯದ್ ಮುಜೀಬ್ ಮತ್ತು ಮಹಮ್ಮದ್ ಮಸೂರ ಬಿನ್ ಅಬೂಬಕ್ಕರ್ ಬಂಟ್ವಾಳನನ್ನು ಬಂದಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರಾದ ಇವರು ಹಸುವನ್ನು ಕಳ್ಳಸಾಗಣೆ ಮಾಡಿ ಅದರ ಮಾಂಸ ಮಾರಾಟ ಮಾಡಲು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಐಪಿಸಿ ಸೆ.೩೭೯ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೋವಾ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ.

























Discussion about this post