ಕಾಬೂಲ್: ನಿರಂತರ ಯುದ್ಧದಾಹದಿಂದ ತಲ್ಲಣಿಸುತ್ತಿರುವ ತಾಲಿಬಾನಿಗಳ ಸದ್ಯದ ನೆಲೆಯಾಗಿರುವ ಅಪ್ಘಾನಿಸ್ತಾನದಲ್ಲಿ ಮತ್ತೆ ಮತ್ತೆ ಗುಂಡಿನ ದಾಳಿ ನಡೆಯುತ್ತಲೇ ಇದೆ.
ಕಾಬೂಲ್ ಏರ್ ಪೋರ್ಟ್ ಹಾಗೂ ಸುತ್ತಮುತ್ತಲು ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಈ ರಾಕೆಟ್ ದಾಳಿ ತಡೆಯಲು ಅಮೆರಿಕಾ ಸೇನೆ ಏರ್ ಸ್ಟ್ರೈಕ್ ನಡೆಸಿದ್ದು, ಎರಡು ಕಡೆ ದಾಳಿ ವೇಳೆ 6 ಮಕ್ಕಳು ಸೇರಿ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಕಾಬೂಲ್ ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಖಜೇಹ್ ಬಾಘ್ರಾ ಎಂಬಲ್ಲಿ ಉಗ್ರರು ರಾಕೆಟ್ ದಾಳಿ ನಡೆಸಿದ ವೇಳೆ ಮನೆ ಛಿದ್ರಗೊಂಡಿದ್ದು, ಈ ಘಟನೆಯಲ್ಲಿ ಮಗು ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಬೂಲ್ ಏರ್ ಪೋರ್ಟ್ ಮೇಲೆ ಕಾರ್ ಮೂಲಕ ರಾಕೇಟ್ ದಾಳಿ ನಡೆಸಲು ಉಗ್ರರು ಯತ್ನಿಸಿದ್ದರು, ಇದೇ ವೇಳೆ, ಅಮೆರಿಕ ಸೇನೆ ಸಿ-ರ್ಯಾಮ್ ಡಿಫೆನ್ಸ್ ಸಿಸ್ಟಮ್ ಮೂಲಕ ಈ ರಾಕೆಟ್ ದಾಳಿ ಮಾಡಿ ಕಾರನ್ನು ಛಿದ್ರಗೊಳಿಸಿತ್ತು.
ಉಗ್ರರ ಯತ್ನ ವಿಫಲಗೊಳಿಸಿದ ಸಂದರ್ಭದಲ್ಲಿ ಉಗ್ರರು ಹಾಗೂ ಅಮೆರಿಕ ಸೇನೆ ನಡುವೆ ಫೈರಿಂಗ್ ನಡೆದಿದ್ದು ಗುಂಡಿನ ದಾಳಿ ವೇಳೆ ಇಲ್ಲಿಯವರೆಗೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ
Discussion about this post