ಚಿಕ್ಕಮಗಳೂರು: ನಿನ್ನೆ ರಾತ್ರಿ ಕಾಡಾನೆಯೊಂದು ಕಲ್ಲುಗುಡ್ಡದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರ ಮನೆಯೊಂದರಲ್ ಹತ್ತಿರ ಬೆಳೆದಿದ್ದ ಕಬ್ಬು ತಿಂದಿದೆ.
ಗ್ರಾಮಸ್ಥರಭಯದಿಂದ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆನೆಯು ದೋಣಗಲ್ಲು ಗ್ರಾಮಕ್ಕೆ ಹೋಗಿ ಬ್ಯಾರೆಲ್ ದ್ವಂಸ ಮಾಡಿದೆ. ಇತ್ತೀಚೆಗೆ ನಾಟಿ ಮಾಡಿದ್ದ ಭತ್ತದ ಗದ್ದೆಯೊಳಗೆ ನಡೆದು ಹೋಗಿದ್ದು ಕಂಡುಬಂದಿದೆ. ಕಲ್ಲುಗುಡ್ಡದ ನಿವಾಸಿ ಕೆ.ಸಿ ಚಂದ್ರಶೇಖರ್ ಅವರ ಗದ್ದೆಯಾಗಿದ್ದು, ಹಾನಿಗೆ ಒಳಗಾಗಿದೆ.
ಮೂಡಿಗೆರೆ ಸಮೀಪ ಗೋಣಿಬೀಡು, ಉಗ್ಗೆಹಳ್ಳಿ, ಚಂದ್ರಪುರ, ಕಸ್ಕೆಬೈಲು ಗ್ರಾಮಗಳಲ್ಲಿ ಕಳೆದ ವಾರವಷ್ಟೇ ಆನೆಗಳ ಹಿಂಡು ಬಾಳೆ,ಮೆಣಸು,ಗದ್ದೆ ಬೆಳೆಗೆ ಹಾನಿ ಉಂಟುಮಾಡಿತ್ತು. ಹಾನಿಗೆ ಒಳಪಟ್ಟ ತೋಟದ ಮಾಲೀಕರು ಅರಣ್ಯ ಇಲಾಖೆ ವಿರುದ್ದ ಗರಂ ಆಗಿದ್ದು ಭಯದಿಂದ ಸಹಾಯ ಯಾಚಿಸುತ್ತಿದ್ದಾರೆ.

























Discussion about this post