ಯುಎಸ್: ಜಗತ್ತಿನಾದ್ಯಂತ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಅಪಾಯದಲ್ಲಿವೆ. ದೇಶದ ಜನರ ಹಿತಾಸಕ್ತಿ ಕಾಪಾಡಲು ಪ್ರಜಾಪ್ರಭುತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
US ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ US VICE PRESIDENT ಕಮಲಾ ಹ್ಯಾರಿಸ್ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಹೇಳಿಕೆಯನ್ನೂ ಉಭಯ ನಾಯಕರು ನೀಡಿದ್ದಾರೆ. ಈ ವೇಳೆ ಕಮಲಾ ಹ್ಯಾರಿಸ್ ಭಾರತವನ್ನು ತುಂಬ ಹೊಗಳಿದ್ದಾರೆ. ಅದರಲ್ಲೂ ಕೊವಿಡ್ 19 ವಿರುದ್ಧ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕೊರೊನಾ ಲಸಿಕಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೊವಿಡ್ 19 ಸಾಂಕ್ರಾಮಿಕ, ಅಫ್ಘಾನ್ ಬೆಳವಣಿಗೆ, ಹವಾಮಾನ ಬದಲಾವಣೆ ಕುರಿತು ಮಾತುಕತೆ ನಡೆಸಿದ್ದಾರೆ.
ಕೊರೊನಾ ಲಸಿಕೆ ರಫ್ತನ್ನು ಅಕ್ಟೋಬರ್ನಿಂದ ಮತ್ತೆ ಪ್ರಾರಂಭ ಮಾಡುವುದಾಗಿ ಭಾರತ ಸರ್ಕಾರ ಘೋಷಿಸಿದ್ದು ಇದನ್ನು ಅಮೇರಿಕಾ ಸ್ವಾಗತಿಸಿದೆ. .ಭಾರತ ಪ್ರತಿದಿನ ಸರಿಸುಮಾರು 10 ಮಿಲಿಯನ್ (೧ ಕೋಟಿ) ಜನರಿಗೆ ಕೊರೊನಾ ಲಸಿಕೆ ನೀಡುತ್ತಿದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಅಪಾಯದಲ್ಲಿವೆ. ನಾವು ನಮ್ಮ ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ತತ್ವಗಳು, ಸಂಸ್ಥೆಗಳ ಮೇಲೆ ಅವಲಂಬಿತರಾಗುವುದು ಅನಿವಾರ್ಯ ಮತ್ತು ದೇಶದ ಜನರ ಹಿತಾಸಕ್ತಿ ಕಾಪಾಡಲು ಪ್ರಜಾಪ್ರಭುತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದೂ ಹೇಳಿದ್ದಾರೆ.
ನಮ್ಮ ಯುಎಸ್ನಲ್ಲಿ ಕೂಡ ಉಗ್ರಸಂಘಟನೆ ಇದೆ. ಅಂಥ ಉಗ್ರರಿಗೆ ಪಾಕಿಸ್ತಾನ ಬುದ್ಧಿ ಹೇಳಬೇಕು. ಅಮೆರಿಕ ಮತ್ತು ಭಾರತದ ಭದ್ರತೆಗೆ ಯಾವುದೇ ತೊಡಕು ಮಾಡಲೂ ಬಿಡಬಾರದು. ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆಂದು ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಭಾರತ ಮತ್ತು ಅಮೆರಿಕ ಸಹಜ ಪಾಲುದಾರರಾಗಿದ್ದಾರೆ. ನಾವು ಸಮಾನ ರೂಪದ ಮೌಲ್ಯಗಳು, ಭಗೋಳಿಕ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಭಾರತ ಮತ್ತು ಯುಎಸ್ಗಳು ಜಗತ್ತಿನ ಅತ್ಯಂತ ದೊಡ್ಡ ಮತ್ತು ಹಳೇ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ನಮ್ಮ ಸಹಕಾರ, ಬಾಂಧವ್ಯ ವೃದ್ಧಿಯಾಗುತ್ತಿದೆ ಎಂದರು.
ಇಂದು ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣಾಫ್ರಿಕಾಗಳನ್ನು ಒಳಗೊಂಡ ಕ್ವಾಡ್ ಶೃಂಗಸಭೆ ಇಂದು ನಡೆಯಲಿದೆ. ಹಾಗೇ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡ್ ಜತೆ ಕೂಡ ಇಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
Discussion about this post