ಉತ್ತರ ಕರ್ನಾಟಕ ಭಾಗದ ಎರಡು ಜಿಲ್ಲೆಗಳಲ್ಲಿ ಭೂಕಂಪನದ ಅನುಭವ ಉಂಟಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದ ಘಟನೆ ನಡೆದಿದೆ. ಕಳೆದ ತಿಂಗಳು ಸಹ ಇದೇ ರೀತಿಯ ಅನುಭವ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಉಂಟಾಗಿತ್ತು ಎಂಬ ವಿಚಾರವನ್ನು ಕನ್ನಡನಾಡಿ ವರದಿ ಮಾಡಿತ್ತು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೆಲ ಗ್ರಾಮದಲ್ಲಿ ಲಘು ಭೂಕಂಪದ ಅನುಭವವಾಗಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ, ತೇಗಲತಿಪ್ಪಿ ಗ್ರಾಮಗಳಲ್ಲಿ, ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರ ಬಂದಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ ಭಾರೀ ಸದ್ದು ಬರುತ್ತಿತ್ತು. ಈ ಮೊದಲೇ ಸದ್ದಿನಿಂದ ಕಂಗಾಲಾಗಿದ್ದ ಗ್ರಾಮದ ಜನರು, ಇದೀಗ ಲಘು ಭೂಕಂಪನದಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ವಿಜಯಪುರ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ವಿಜಯಪುರ ಜಿಲ್ಲೆಯ ರೈಲ್ವೆ ಸ್ಟೇಷನ್ ಪ್ರದೇಶ, ಅಲ್ಲಾಪುರ ಓಣಿ, ಶಿವಗಿರಿ ಬಡಾವಣೆ, ಅಲ್ಲಾಪುರ ತಾಂಡಾ, ಗೋಳಗುಮ್ಮಟ ಸೇರಿ ಹಲವೆಡೆ ಭೂಕಂಪನವಾಗಿದೆ. ತಡರಾತ್ರಿ 12.20ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಪದೇ ಪದೇ ಭೂಕಂಪನವಾಗುತ್ತಿದ್ದು, ಇಲ್ಲಿನ ಜನರು ಆತಂಕಗೊಂಡಿದ್ದಾರೆ.
ಸಂಬಂಧ ಪಟ್ಟ ಇಲಾಖೆಯೇ ಮುಂದಾಗಿ ಜನರಿಗೆ ಭೂಕಂಪನ ಕುರಿತು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಬೇಕಾದ ಅಗತ್ಯ ಇದೆ.

























Discussion about this post