ಚಿಕ್ಕಮಗಳೂರು: ಕಲಾವಿದ ತಾನೊಬ್ಬನೇ ಬೆಳೆಯದೇ ಇತರರನ್ನೂ ಬೆಳೆಸಿದಾಗ ಕಲೆಯ ಅಭಿವೃದ್ಧಿಯಾಗುತ್ತದೆ. ಅದೇ ರೀತಿ ಸಂಘಟನೆಗಳು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸಕಾರಾತ್ಮಕ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.
ನಗರದ ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ಭಾವಪದ ಕ್ಲಬ್ ಹೌಸ್ನ ಸದಸ್ಯರು, ಸೂರಂಕಣ ವೇದಿಕೆಯ ವತಿಯಿಂದ ನಡೆದ “ಸ್ನೇಹ ಮಿಲನ” ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಜ್ಞಾನ ಸಾಮೂಹಿಕವಾಗಿ ಉಪಯೋಗವಾಗಬೇಕು. ಆ ಕಾರಣಕ್ಕೆ ಸಂಘಟನೆಗಳು ಹೆಚ್ಚಾಗಬೇಕು. ಹೀಗಿದ್ದಾಗ ಮಾತ್ರ ಸಮೂಹಪ್ರಜ್ಞೆಯು ಬೆಳೆಯುತ್ತದೆ ಎಂದರು.
ಕ್ಲಬ್ ಹೌಸ್ನಂತಹ ಸಮೂಹ ಮಾಧ್ಯಮದಲ್ಲಿ ಸ್ನೇಹಿತರಾದವರು ಸಂಘಟಿತರಾಗಿ ಕಲೆಯ ಕಲಾವಿದರ ಏಳಿಗೆಗಾಗಿ ಶ್ರಮವಹಿಸುವುದು ಅಗತ್ಯ. ಈ ದಿಸೆಯಲ್ಲಿ ಭಾವಪದ ಒಳ್ಳೆಯ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.
ಭಾವಪದದ ಮಾಡರೇಟರ್ ಜಾವಗಲ್ ಪ್ರಸನ್ನ ಮಾತನಾಡಿ, ಕರ್ನಾಟಕ ಮಾತ್ರವಲ್ಲದೇ ವಿಶ್ವದ ಕನ್ನಡಿಗರು ನಮ್ಮ ಭಾವಪದದಲ್ಲಿ ಭಾಗವಹಿಸುತ್ತಾರೆ.ಮನರಂಜನೆಯೊಂದಿಗೆ ನಮ್ಮ ಸಂಸ್ಕೃತಿ ಕಾಪಾಡುವುದು, ಜಾನಪದ ಕಲಾವಿದರ ಜೀವನ ಮಟ್ಟವನ್ನು ಎತ್ತರಕ್ಕೇರಿಸುವುದು ನಮ್ಮ ಸಂಸ್ಥೆಯ ಗುರಿ” ಎಂದು ತಿಳಿಸಿದರು.
ಭಾವಪದ ಸಂಚಾಲಕ ಬೆಂಗಳೂರಿನ ಜ್ಞಾನೇಶ್ವರ್ ತೆಗ್ಗಿನಮಠ ಮಾತನಾಡಿದರು. ಮಲ್ಲಿಗೆ ಸುಧೀರ್, ಪಾವನಿ ನಾಗಮಂಗಲ, ಹೇಮಂತ್ ಹೊಸಹೊಳಲು, ಸುರೇಶ್ ತುಮಕೂರು, ಅಭಿಮಲ್ಲಿಗೆ, ವೈಷ್ಣವಿ ಎನ್ ರಾವ್ ರು ವಿವಿಧ ಕವಿಗಳ ಗೀತೆಗಳನ್ನು ಹಾಗೂ ಜನಪದಗೀತೆಗಳನ್ನು ಹಾಡಿ ಮನರಂಜಿಸಿದರು.
ಕಿರಣ್ಮಯಿ ಬೆಂಗಳೂರು, ಜೈಕಿರಣ್, ಕಿರಣ್ ಕೊಡಗು, ನಾಗೇಂದ್ರ ಭಟ್ ದಂಪತಿಗಳು ಇದ್ದರು. ಸ.ಗಿರಿಜಾಶಂಕರ, ಶುಭ ದಂಪತಿಗಳನ್ನು ಸನ್ಮಾನಿಸಲಾಯಿತು. ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ ನಿರೂಪಿಸಿದರು, ರೇಖಾನಾಗರಾಜರಾವ್ ವಂದಿಸಿದರು.

























Discussion about this post