ಕಡೂರು: ಎಮ್ಮೆದೊಡ್ಡಿಯಲ್ಲಿ ಕುರಿಗಾಹಿ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಕುರುಬ ಸಮಾಜ ಸೇರಿದಂತೆ ಕುರಿಗಾಹಿಗಳ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಿಂದೊಮ್ಮೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಒತ್ತುವರಿದಾರರನ್ನು ತೆರವುಗೊಳಿಸುವ ಯತ್ನಕ್ಕೆ ರಾಜಕೀಯ ಬೆಳವಣಿಗೆಯಿಂದಾಗಿ ಯತ್ನ ವಿಫಲವಾಯಿತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭೂಗಳ್ಳರ ವಿರುದ್ಧ ಈ ಹೋರಾಟ ನಡೆಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ಕುರುಬ ಸಮಾಜದ ಅಧ್ಯಕ್ಷ ಎಚ್. ಪ್ರಸನ್ನ, KPCC ಸದಸ್ಯ ಕೆ.ಎಸ್. ಆನಂದ್, ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಶರತ್ ಕೃಷ್ಣಮೂರ್ತಿ, ಕರಿಬಡ್ಡೆ ಶ್ರೀನಿವಾಸ್, ರೇಖಾ ಹುಲಿಯಪ್ಪಗೌಡ, ಕೆ.ಎಂ ಕೆಂಪರಾಜು, ಕೋಡಿಹಳ್ಳಿ ಮಹೇಶ್ವರಪ್ಪ, ವನಮಾನ ದೇವರಾಜ್ ಮೊದಲಾದ ಮುಖಂಡರು ಒತ್ತಾಯಿಸಿದರು.

























Discussion about this post