ನವದೆಹಲಿ: ಜಾಗತಿಕವಾಗಿ ಕೋವಿಡ್-18 ಸಾಂಕ್ರಾಮಿಕ ಹೆಚ್ಚುತ್ತಿರುವ ಕಾರಣ ಶುಕ್ರವಾರದಿಂದೀಚೆಗೆ 11,500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಸಾವಿರಾರು ವಿಮಾನಗಳು ಹೊರಡುವ ವೇಳೆಯಲ್ಲಿ ವ್ಯತ್ಯಯ ಆಗಿದೆ.
ಸೋಮವಾರ ಮೂರು ಸಾವಿರ ಮತ್ತು ಮಂಗಳವಾರ 1,100ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ ಎಂದು ವಿಮಾನಗಳ ಸಂಚಾರದ ಮೇಲೆ ನಿಗಾ ಇಡುವ ಫ್ಲೈಟ್ ಅವೇರ್ ಹೇಳಿದೆ.
ಇದು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಕಾರಣ ಜನರು ಪ್ರವಾಸ ಹೋಗುವುದು ಹೆಚ್ಚಳ ಆಗಿದೆ. ಈ ಮಧ್ಯೆ ಓಮಿಕ್ರಾನ್ ಪ್ರಭೇದ ಕೂಡ ವ್ಯಾಪಕವಾಗಿರುವುದರಿಂದ ವಿಮಾನಯಾನ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯೂ ಉಂಟಾಗಿದೆ. ಹೊಸ ವರ್ಷದ ನಂತರ ಸಿಬ್ಬಂದಿ ಹಾಜರಾತಿ ಹೆಚ್ಚುವ ನಿರೀಕ್ಷೆ ಇದ್ದು, ಈ ವೇಳೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಫ್ಲೈಟ್ ಅವೇರ್ ತಿಳಿಸಿದೆ.
ಅಮೆರಿಕದಲ್ಲಿ ಓಮಿಕ್ರಾನ್ ಕಾರಣ ಜಾರಿ ಮಾಡಲಾಗಿರುವ ಗುಣಲಕ್ಷಣ ರಹಿತ ಓಮಿಕ್ರಾನ್ ಸೋಂಕಿತರ ಐಸೋಲೇಷನ್ ಅವಧಿಯನ್ನು 10ದಿನದಿಂದ 5 ದಿನಕ್ಕೆ ಇಳಿಸಲಾಗಿದೆ. ಈ ಮಧ್ಯೆ, ಅಮೆರಿಕದಲ್ಲಿ ಜನವರಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಜನವರಿಯಿಂದ 8 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಅಮೆರಿಕದಲ್ಲಿ ಕಂಡುಬಂದಿದೆ. ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚಬಹುದು ಎಂದು ಅಮೆರಿಕ ಅಧ್ಯಕ್ಷ ಸೋಮವಾರ ಭಾಷಣದಲ್ಲಿ ಹೇಳಿದ್ದಾರೆ.
ಯುರೋಪ್ ದೇಶಗಳಲ್ಲಿ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲಾಗಿದೆ. ಲಸಿಕೆ ಪಡೆಯದವರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಅಧಿಕ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
11,500 Flights Cancelled Worldwide Since Friday Amid Record Covid Surge
ಇದನ್ನು ಓದಿ: ಜನವರಿ 18ರಿಂದ ಕೋವಿಡ್ ನಿಯಮ ಕಟ್ಟುನಿಟ್ಟೆಂದ ಗೂಗಲ್
ಇದನ್ನೂ ಓದಿ: ಕೊರೊನಾ ಆಯ್ತು, ಅಮೆರಿಕದಲ್ಲೀಗ ಸ್ಯಾಲ್ಮೊನೆಲ್ಲಾ ಸೋಂಕು ಹಾವಳಿ: ಏನಿದು?
Discussion about this post