ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ತಾನು ಬೆಳೆದ ಬೆಳೆ ಬೆಳೆ ಉಳಿಸುವಂತೆ ಪ್ರಾರ್ಥಿಸಿ ರೈತರೊಬ್ಬರು ಗಣೇಶನಿಗೆ ಜೀವಂತ ಇಲಿ ಸಮರ್ಪಣೆ ಮಾಡಿದ ಘಟನೆ ನಡೆದಿದೆ.
ಗಣೇಶನಿಗೆ ಕೃಷಿಯನ್ನು ಉಳಿಸುವಂತೆ ಕೇಳಿಕೊಂಡ ರೈತ ಭಕ್ತರೊಬ್ಬರು ಇಲಿ ನೀಡಿದ್ದಾರೆ. ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಭಕ್ತರೊಬ್ಬ ಗಣಪನಿಗೆ ಹೀಗೆ ಮೊರೆ ಹೋಗಿದ್ದಾರೆ. ಜಮೀನಿನಲ್ಲಿ ಇದ್ದ ಇಲಿಯನ್ನ ಹಿಡಿದು ತಂದು ಗಣೇಶನಿಗೆ ಕೊಟ್ಟಿದ್ದಾರೆ.
ಇಲಿಗಳು ಹೊಲದಲ್ಲಿ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಹೀಗಾಗಿ ಇಲಿಗಳಿಂದ ಬೆಳೆ ಹಾನಿ ತಪ್ಪಿಸುವಂತೆ ಗಣೇಶನಿಗೆ ಮೊರೆ ಹೋಗಿದ್ದಾರೆ. ಮರ್ಕಲ್ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಇಲಿ ನೀಡಿದ್ದಾರೆ.
ಮರ್ಕಲ್ ಗ್ರಾಮದ ನಿತಿನ್ ಎಂಬವರು ಗಣೇಶನಿಗೆ ಮೂಷಿಕವನ್ನ ಅರ್ಪಿಸಿದ ಭಕ್ತರು. ಗಣೇಶನಿಗೆ ತಾನು ತಂದಿದ್ದ ಇಲಿ ಹೊರತೆಗೆದು ಅರ್ಪಿಸುತ್ತಿದ್ದಂತೆ ಆ ಮೂಷಿಕ ಕಾಲ್ಕಿತ್ತಿದೆ.

























Discussion about this post