ಚಿಕ್ಕಮಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೌರಮ್ಮ ಬಸವೇಗೌಡ (84) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ತಿಪ್ಪನಹಳ್ಳಿ ಎಸ್ಟೇಟ್ ಎ.ಎಂ.ಬಸವೇಗೌಡ ಅವರ ಪತ್ನಿ ಗೌರಮ್ಮ ಬಸವೇಗೌಡ ಹತ್ತು ಹಲವು ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದವರು.
ಮಹಿಳಾ ಜಾಗೃತಿ ಸಂಘವನ್ನು ಹುಟ್ಟುಹಾಕಿ ಜಿಲ್ಲೆಯ ವಿವಿಧ ಬೇಡಿಕೆ ಗಳಿಗೆ ಹೋರಾಟ ನಡೆಸಿದ ಹೆಗ್ಗಳಿಕೆ ಅವರದು. ಮಹಿಳಾ ಬ್ಯಾಂಕ್, ಟೌನ್‌ಮಹಿ ಳಾ ಸಮಾಜ, ರೋಟರಿ ಕ್ಲಬ್, ಇನ್ನರ್ ವೀಲ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

























Discussion about this post