ಚಿಕ್ಕಮಗಳೂರು: ಮನೆಮನೆಗೆ ಅಡುಗೆ ಅನಿಲ ವಿತರಣೆ ನಡೆಸುವಾಗ ಐದು ಕಿ.ಮೀ ತನಕ ಯಾವುದೇ ಶುಲ್ಕ ಪಡೆಯದೆ ಸೇವೆ ನೀಡಲು ಜಿಲ್ಲಾಧಿಕಾರಿಗಳ ಕಠಿಣ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಸಂಘ ಸೇರಿದಂತೆ ಸಾರ್ವಜನಿಕರು ಸಲ್ಲಿಸಿದ್ದ ದೂರನ್ನು ಆದರಿಸಿ ಈ ನಿಯಮ ಜಾರಿಗೆ ತರಲಾಗಿದೆ. ಜಿಲ್ಲಾಧಿಕಾರಿ ಕೆ. ಎನ್. ರಮೇಶ್ 5 ಕಿಮೀ ಬಳಿಕ ಕಿ.ಮೀಗೆ ರೂ. 1.60 ರಂತೆ ಶುಲ್ಕ ಪಡೆಯಲು ಸೂಚನೆ ನೀಡಿದ್ದಾರೆ.
ಇದೇ ವೇಳೆ ಅಕ್ರಮವಾಗಿ ಸಂಗ್ರಹಣೆ ನಡೆಸುವುದು, ಸಬ್ ಏಜೆಂಟರಿಂದ ವಿತರಿಸುವುದು, ಬೇನಾಮಿಗಳು ಸರಬರಾಜು ನಡೆಸುವುದು ಮೊದಲಾದವು ನಡೆಯದಂತೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಕಠಿಣ ಕ್ರಮ ವಿಧಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ

























Discussion about this post