- ಸಾರ್ವಜನಿಕ ಸಂಚಾರದ ರೈಲು, ಬಸ್ಸು ಬಂದ್
- ಜಿಮ್, ಸಿನೆಮಾ ಹಾಲ್, ಶಾಪಿಂಗ್ ಮಾಲ್ ಬಂದ್
ಬೀಜಿಂಗ್: ಚೀನಾ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೇಲೆಯಲ್ಲಿ ಸಾರ್ವಜನಿಕ ಸಾರಿಗೆ ಸೇರಿದಂತೆ ಜನರು ಹೆಚ್ಚೆಚ್ಚು ಸೇರುವ ಸ್ಥಳಗಳನ್ನು ಬಂದ್ ಮಾಡಲಾಗುತ್ತಿದೆ. ಕರೋನಾ ಮೂರನೇ ಅಲೆಯಂತೆಯೇ ಹೆಚ್ಚುತ್ತಿರುವ ಈ ಪ್ರಕರಣಗಳು ಆತಂಕವನ್ನು ಸೃಷ್ಠಿ ಮಾಡಿವೆ.
ಪ್ಯೂಜಿನ್ ಪ್ರಾಂತ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನೇಲೆ ಜನರು ನಗರ ಬಿಟ್ಟು ಹೋಗದಂತೆ ಸೂಚನೆ ರವಾನೆಯಾಗಿದೆ. ಅಗತ್ಯವಿದ್ದಲ್ಲಿ ನೆಗೆಟಿವ್ ವರದಿ ಬರುವವರು ಮಾತ್ರ ಹೊರಗೆ ಹೋಗಬಹುದಾಗಿದೆ. ಪುಟೀನ್ ಪ್ರಾಂತ್ಯದಲ್ಲಿ ತಜ್ಞರ ತಂಡವನ್ನು ಕಳುಹಿಸಿದ್ದಾರೆ.
ಸಾರ್ವಜನಿಕರು ಹೆಚ್ಚು ಸೇರುವ ಜಿಮ್, ಶಾಪಿಂಗ್ ಮಾಲ್, ಸಿನೆಮಾ ಹಾಲ್ ಬಂದ್ ಮಾಡಲು ಆದೇಶಿಸಲಾಗಿದೆ. ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಮೊದಲಾದ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಡ್ಡಾಯ ನಿಯಮ ರೂಪಿಸಲಾಗಿದೆ.
Discussion about this post