ಗುಜರಾತ್: ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜಿನಾಮೆ ನೀಡಿದ್ದಾರೆ. ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಗಾಂಧಿನಗರಕ್ಕೆ ಭೇಟಿ ನೀಡಿದ್ದು, ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ಸಹ ನಡೆದಿದೆ ಎಂದು ಮೂಲಗಳು ತಿಳಿಸಿದೆ.
ರಾಜೀನಾಮೆ ಹೇಳಿಕೆ ನೀಡಿದ ರೂಪಾನಿ “ನಮ್ಮ ಪಕ್ಷದಲ್ಲಿ ಕಾಲಕ್ಕೆ ತಕ್ಕಂತೆ ಮುಖ್ಯಮಂಟ್ರಿ ಬದಲಾವಣೆ ಮಾಡುವ ಸಂಸ್ಕೃತಿ ಇದೆ, ಹೀಗಾಗಿ ರಾಜೀನಾಮೆ ನೀಡಿದ್ದೇನೆ” ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಸಹ ಅವರು ತಿಳಿಸಿದ್ದಾರೆ.
ಮುಂದಿನ ವರ್ಷವೇ ಗುಜರಾತ್ ಚುನಾವಣೆ ನಡೆಯಬೇಕಿದ್ದು, ಈಗಾಗಲೇ ಐದು ವರ್ಷ ಮುಗಿಸಿದ್ದ ವಿಜಯ್ ರೂಪಾನಿ ರಾಜೀನಾಮೆ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಮುಖ್ಯಮಂತ್ರಿಗಳು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇದುವರೆಗೆ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಅವಕಾಶ ನೀಡಿದ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿ, ಪಕ್ಷದ ಯಾವುದೇ ಜವಾಬ್ದಾರಿ ಹೊರುವೆ ಎಂದು ಸಹ ತಿಳಿಸಿದ್ದಾರೆ.

























Discussion about this post