ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮದ ಶೆಟ್ಟಿಗೋಡು ಗುರುಮೂರ್ತಿ ಭಟ್ ಅವರ ಖಾತಾ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಗಿಡಗಳನ್ನು ಫಾರೆಸ್ಟ್ ಆಫೀಸರ್ ಕಿತ್ತು ಹಾಕಿದ್ದಾರೆ ಗುರುಮೂರ್ತಿ ಭಟ್ ಅವರು ಆರೋಪಿಸಿದ್ದಾರೆ.
ಫಾರೆಸ್ಟ್ ಆಫೀಸರ್ ಗಿರೀಶ್ ತಮ್ಮ ಗಂಡಘಟ್ಟದ ಸರ್ವೇ ನಂಬರ್ 37 ರಲ್ಲಿ ಬರುವ ಜಮೀನಿಗೆ ಸಂಬಂಧ ಪಟ್ಟ ದಾಖಲಾತಿಗಳು ಇದ್ದರೂ ಏಕಾಏಕಿ ಬಂದು ಈ ಭೂಮಿ ಸೆಕ್ಷನ್ 4 ರ ಅಡಿಯಲ್ಲಿ ಬರುತ್ತದೆ ಎಂದು ತಿಳಿಸಿ ನೆಟ್ಟ ಅಡಿಕೆ ಸಸಿಗಳನ್ನು ಕಡಿದು ನಾಶ ಮಾಡಿದ್ದಾರೆ, ಇದರ ಬಗ್ಗೆ ಒಂದು ನೋಟಿಸ್ ಸಹ ನೀಡದೆ ಅಧಿಕಾರಿಗಳು ಈ ರೀತಿಯ ಕೃತ್ಯ ಎಸಗಿರುವುದು ಸರಿಯಲ್ಲ ಎಂದು ಗುರುಮೂರ್ತಿ ಭಟ್ ಆಪಾದಿಸಿದ್ದಾರೆ.
ಒಂದು ಭಾಗದ ತೋಟಕ್ಕೆ ಹಳದಿ ಎಲೆ ರೋಗ ಬಂದಿದೆ ಇನ್ನೊಂದೆಡೆ ಹೊಸ ಕೃಷಿ ಮಾಡೋಣ ಎಂದರೆ ಅಧಿಕಾರಿಗಳು ಬಿಡುತ್ತಿಲ್ಲ, ನನಗೆ ನ್ಯಾಯ ದೊರಕಿಸಬೇಕು ಎಂದು ಗುರುಮೂರ್ತಿ ಭಟ್ ಕೇಳಿಕೊಂಡಿದ್ದಾರೆ.
ರೈತ ಸಂಘದ ಅಧ್ಯಕ್ಷ ಕರುವಾನೆ ನವೀನ್ ಮಾತನಾಡಿ ಸದರಿ ಪ್ರಕರಣದಲ್ಲಿ, ಅಧಿಕಾರಿಗಳು ಸೌಜನ್ಯವನ್ನು ಮರೆತು ಈ ರೀತಿಯಾದ ಕೃತ್ಯವನ್ನು ನಡೆಸಿದ್ದಾರೆ, ಅಧಿಕಾರಿ ಗಿರೀಶ್ ಗೆ ಸೂಕ್ತ ತಲೆದಂಡ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇಲಾಖೆಯಿಂದ ಪ್ರತಿಕ್ರಿಯೆ ನೀಡಿದ RFO ಸೆಕ್ಷನ್ 4 ರ ಅಡಿಯಲ್ಲಿ ಸರ್ವೇ ನಂಬರ್ 37 ಬರಲಿದೆ ಆ ಉದ್ದೇಶದಿಂದ ನಮ್ಮ ಅಧಿಕಾರಿಗಳು ಅಡಿಕೆ ಸಸಿಗಳನ್ನು ತೆರವು ಮಾಡಿದ್ದಾರೆ ಎಂದರು.

























Discussion about this post